ಒಲ್ಲನೋ ಹರಿ ಕೊಳ್ಳನೋ Lyrics

PA290001Lalitha Aunty sent me this song since today is Tulasi Pooje. This Devaranama is from Purandara Dasaru in Raga Kalyani and Adi tala. Thanks so much, Aunty.

ಒಲ್ಲನೋ ಹರಿ ಕೊಳ್ಳನೋ
ಒಲ್ಲನೋ ಹರಿ ಕೊಳ್ಳನೋ
ಎಲ್ಲ ಸಾಧನವಿದ್ದೂ ತುಳಸಿ ಇಲ್ಲದ ಪೂಜೆ-
ಒಲ್ಲನೋ ಹರಿ ಕೊಳ್ಳನೋ ||

ಸಿಂಧು ಶತ ಕೋಟಿ ಗಂಗೊದಕವಿದ್ದ್ದೂ
ಗಂಧ ಸುಪರಿಮಳ ವಸ್ತ್ರವಿದ್ದೂ
ಚೆಂದುಳ ಆಭರಣ ಧೂಪ ದೀಪಗಳಿದ್ದೂ
ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ -
ಒಲ್ಲನೋ ಹರಿ ಕೊಳ್ಳನೋ ||1||

ಪೂಜೆಯ ಮಾಡದೆ ತುಳಸಿ ಮಂಜರಿ ಇಂದ
ಮೂಜಗದೊಡೆಯ ಮುರಾರಿಯನು
ರಾಜಾಧಿ ರಾಜನೆ೦ಬ ಮಂತ್ರ ಪುಷ್ಪಗಳಿಂದ
ಪೂಜಿಸಿದರೂ ಒಲ್ಲ ಪುರಂಧರ ವಿಠಲನೂ-
ಒಲ್ಲನೋ ಹರಿ ಕೊಳ್ಳನೋ ||2||

Respond to this post