11
Apr
ಇ೦ಥಾ ಪ್ರಭುವ ಕಾಣೆನೊ – Intha Prabhuva Kaneno Lyrics
Posted April 11, 2011 by meeraghu in Hobbies. 1 Comment
Another amazing lyrics provided by Mr. Lakshman, I used the lyrics and converted it to Kannada and Baraha. Thanks, Mr. Lakshman.
ಇ೦ಥಾ ಪ್ರಭುವ ಕಾಣೆನೊ, ವಿಜಯದಾಸರು.
ಇ೦ಥಾ ಪ್ರಭುವ ಕಾಣೆನೊ ಈ ಜಗದೊಳಗಿ೦ಥಾ ಪ್ರಭುವ ಕಾಣೆನೊ
ಇ೦ಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗದಂತ ರಂಗನು ಲಕ್ಶ್ಮೀಕಾಂತ ಸರ್ವಾಂತರ್ಯಾಮಿ
ಬೇಡಿದ ವರವ ಕೊಡುವ ಭಕ್ತರ ತಪ್ಪು ನೋಡದೆ ಬಂದು ಪೊರೆವ ಗಾಡಿಕಾರನು ಗರುಡಾರೂಡ ಗುಣವಂತ ಮಹಾ ಪ್ರೌಢ ಪ್ರತಾಪಿ ಜಗದಿ ಗೂಡದಿಂ ಸಂಚರಿಪ
ಪಾಡಿ ಪೊಗಳಿ ಕೊಂಡಾಡುವರ ಮುಂದಾಡುಲಿಪ್ಪನು ಕಾಡೊಳಗಿದ್ದರು ಕೇಡಿಗನೇ ನಾಡಾಡಿಗಳಂದದಿ ಈಡುಂಟೆ ಈ ವೆಂಕಟಗೇ
೨: ನಿಗಮ ತತಿಗಳರಿಯದ ನೀರಜ ಭವಾದ್ಯ ಗಣಿತ ಸುರರು ಕಾಣದ ಜಗದೊಡೆಯನು
ಭಕ್ತಾರುಗಳಿಗೊಲಿದು ತ್ರಿಸ್ಥಾನ ತ್ಯಜಿಸಿ ಕಲಿಯುಗದಿ ಭೂಮಿಗೆ ಬಂದು ಅಗಣಿತ ಸುಗುಣಾರ್ಣವ
ಶ್ರೀ ಹರಿಯೇ ಜಗದೊಳು ಸೇವಾದಿಗಳನು ಕೊಳುತಿಹ ಅಘಹರ ಮೋಕ್ಷಾದಿಗಳ ಕೊಡುತಿಹ ನಗೆಮೊಗದಲಿ ಚೆನ್ನಿಗ ನಿಂತಿಹನೊ
೩: ಭಾರ್ಗವಿ ಭೂಮಿವಲ್ಲಭ ಭವದೂರ ಭಕ್ತವರ್ಗಕೆ ಇವ ಸುಲಭ ನಿರ್ಗುಣ ನಿರ್ವಿಕಾರ ಸ್ವರ್ಗದ್ವೈಶ್ವರ್ಯದಿಂದ ಅನರ್ಘ್ಯ
ಪದವನೀವ ದೀರ್ಘಾಯುವಂತ ನೀತ ಭಾರ್ಗವರಾಮ ನೃಪರ್ಗಳನೆಲ್ಲ ರಣಾರ್ಗದಿ ಜಯಿಸಿದ ಉಗ್ರಪ್ರತಾಪಿ ಅಗ್ರಗಣ್ಯ ಸದ್ವಿಗ್ರಹ ಶ್ರೀಮದ್ ಅನುಗ್ರಹ ಮಾಡುತ ದುರ್ಗುಣ ಕಳೆವಾ
೪: ನಿರ್ದುಖಾನಂದಭರಿತ ನಿರವದ್ಯಾಸುಖಕೆ ಆರ್ದ್ಯಹೃದಯ ತೋರುತಾ ನಿದ್ರೆಯೊಳಿದ್ದವಗುಪದ್ರವಬಡಿಸಿ ದೈತ್ಯ ಕ್ಷುದ್ರವಂಕೊಲಿಸಿ ಸುಭದ್ರ ಜಗಕೆ ಇತ್ತ
ನಿರ್ದಯನಲ್ಲ ಸಮುದ್ರಶಯನ ಗೋವರ್ಧನ ಗಿರಿಯನು ಉದ್ಧರಿಸಿದ ಯದುವರ್ಧನ ದನುಜ ವಿಮರ್ದನ ಲಕ್ಶ್ಮೀಜನಾರ್ಧನ ವರಶೇಶಾದ್ರಿನಿವಾಸ
೫: ಸರಸಿಜಾಸನ ಮನ್ಮಥ ಈರ್ವರು ಸುತರು ಸುರತರಂಗಿಣಿ ತನುಜೆ ಪುರವೇ ವೈಕುಂಠ
ಇಂದ್ರಾದ್ಯ ಮರತು ಕಿಂಕರರು ಗರುಡವಾಹನ ಉರಗ ಪರಿಯಂಕ ನಿಷ್ಕಳಂಕ ಸರಿದೊರೆಗಳ ನಾನರಿಯೆನು
ವೆಂಕಟಗಿರಿಯಲಿ ಇರುತಿಹ ಕರುಣಿಗಳರಸನೆ ಮರೆಯದೆ ಪೊರೆಯುವ ಶರಣಾಗತರನು ಮರುತಾಂತರ್ಗತ ಸಿರಿವಿಜಯವಿಠ್ಠಲ
Attached below is the formatted Baraha script.
iMthA prabhuva kANeno, vijayadAsaru.
iMthA prabhuva kANeno I jagadoLagi0thA prabhuva kANeno
iMthA prabhuva kANe shAMta mUruti jagadaMta raMganu lakshmIkAMta sarvAMtaryAmi
bEDida varava koDuva bhaktara tappu nODade baMdu poreva gADikAranu garuDArUDa
guNavaMta mahA prauDha pratApi jagadi gUDadiM saMcharipa
pADi pogaLi koMDADuvara muMdADulippanu kADoLagiddaru
kEDiganE nADADigaLaMdadi IDuMTe I veMkaTagE
2: nigama tatigaLariyada nIraja bhavAdya gaNita suraru kANada jagadoDeyanu
bhaktArugaLigolidu tristhAna tyajisi kaliyugadi bhUmige baMdu
agaNita suguNArNava shrI hariyE jagadoLu sEvAdigaLanu koLutiha
aghahara mOkShAdigaLa koDutiha nagemogadali chenniga niMtihano
3: bhArgavi bhUmivallabha bhavadUra bhaktavargake iva sulabha nirguNa nirvikAra
svargadwaishvaryadiMda anarghya padavanIva dIrghAyuvaMta nIta
bhArgavarAma nRupargaLanella raNArgadi jayisida ugrapratApi
agragaNya sadvigraha shrImad anugraha mADuta durguNa kaLevA
4: nirduKAnaMdabharita niravadyAsukhake ArdyahRudaya tOrutA nidreyoLiddavagupadravabaDisi
daitya kShudravaMkolisi subhadra jagake itta
nirdayanalla samudrashayana gOvardhana giriyanu uddharisida
yaduvardhana danuja vimardana lakSmIjanArdhana varashESAdrinivAsa
5: sarasijAsana manmatha Irvaru sutaru surataraMgiNi tanuje puravE vaikuMTha iMdrAdya
maratu kiMkararu garuDavAhana uraga pariyaMka niShkaLaMka
saridoregaLa nAnariyenu veMkaTagiriyali irutiha karuNigaLarasane
mareyade poreyuva sharaNAgataranu marutAMtargata sirivijayaviThThala
Email or Print this Post:
Like this:
Like Loading...
Posted by Nagaraja Anegundi Rao on January 11, 2012 at 12:47 pm
Dear sir/Madam, We sincerely thank you for providing lyrics for some of the most beautiful haridasara kirthanas. We appreciate this service for kannadigas living in different parts of the world. Thanks again.