Archive for the ‘lyrics’ Category

ಜಯಮಂಗಳಂ ನಿತ್ಯ ಶುಭಮಂಗಳಂ – JayaMangalam Nitya ShubhaMangalam Lyrics

ಜಯಮಂಗಳಂ ನಿತ್ಯ ಶುಭಮಂಗಳಂ – JayaMangalam Nitya ShubhaMangalam Lyrics on Guru Raghavendra Swamy.

ಜಯಮಂಗಳಂ ನಿತ್ಯ ಶುಭಮಂಗಳಂ

ಯೋಗೀಂದ್ರತೀರ್ಥಕರ ರಾಜೀವ ಪೂಜಿತಗೆ

ಭಾಗವತಜನ ಪ್ರಿಯರೆನಿಸುವರಿಗೆ

ಯೋಗಿಗಳ ಅಧಿಪತಿ ಸುಧೀಂದ್ರಕರಜಾತರಿಗೆ

ಬಾಗಿ ವಂದಿಪರ ಸಲಹುವ ಸ್ವಾಮಿಗೆ || ೧ ||

ವರಹಜಾತೀರ ಮಂತ್ರಾಲಯ ನಿಕೇತನಗೆ

ಧರಣಿಯೊಳಗ ಅಪ್ರತಿಮ ಚರಿತೆ ತೋರ್ವರಿಗೆ

ಕುರುಡ ಕಿವುಡಾದಿಗಳ ಬಯಕೆ ಪೂರೈಪರಿಗೆ

ವರ ಸುವೃಂದಾವನದಿ ಶೋಭಿಪರಿಗೆ || ೨ ||

ಆರಾಧನೆಯ ಜನರು ಮಾಡುವುದು ನೋಡಲಿಕೆ

ವಾರವಾರಕ್ಕಧಿಕವೆನಿಸುವರಿಗೆ

ಮಾರಮಣ ಪ್ರಾಣೇಶವಿಠಲನಂಘ್ರಿ ಜಲಜಕೆ

ಆರುಪದವೆನಿಪಗೆ ಕರುಣಾಜಲಧಿಗೆ || ೩ ||

jayamaMgaLaM nitya SubhamaMgaLaM

yOgIMdratIrthakara rAjIva pUjitage
bhAgavatajana priyarenisuvarige
yOgigaLa adhipati sudhIMdrakarajAtarige
bAgi vaMdipara salahuva svAmige || 1 ||

varahajAtIra maMtrAlaya nikEtanage
dharaNiyoLaga apratima carite tOrvarige
kuruDa kivuDAdigaLa bayake pUraiparige
vara suvRuMdAvanadi SObhiparige || 2 ||

ArAdhaneya janaru mADuvudu nODalike
vAravArakkadhikavenisuvarige
mAramaNa prANESaviThalanaMghri jalajake
Arupadavenipage karuNAjaladhige || 3 ||

ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ – Baro Namma Manege Sri Raghavendra Lyrics

Every time I perform seva to Our Beloved Rayaru, tears roll down my eyes when I sing this song. This is a song on our Rayaru, asking him to come to our home and get rid of our sorrow, our fear. Attached below are the lyrics in Kannada and Baraha English ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ – Baro Namma Manege Sri Raghavendra.

Shri Raghavendra Swamy Picture at my house.

Shri Raghavendra Swamy Picture at my house.

ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ ||

ಬಾರೂ ದುಃಖಾಪಹಾರ ಬಾರೋ ದುರಿತದೂರ

ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರುವೆ ||

ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ

ಲೋಲ ಶ್ರೀನರಹರಿಯ ಕಾಲರೂಪವ ತೋರ್ದೆ || ೧ ||

ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ

ಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ ||

ಮಂತ್ರಗೃಹದಲಿನಿಂತ ಸುಯತಿವರ್ಯ

ಅಂತ ತಿಳಿಯದೊ ನೀ ಅಂತರದೊಳು || ೩ ||

ಭೂತಪ್ರೇತಗಳನು ಘಾತಿಸಿಬಿಡುವಂಥ

ಖ್ಯಾತಿಯುತ ಯತಿನಾಥನೆ ತುತಿಸುವೆ || ೪ ||

ಕುಷ್ಟರೋಗಾದಿಗಳ ನಷ್ಟ ಮಾಡುವಂಥ

ಅಷ್ಟಮಹಿಮೆಯುತ ಶ್ರೇಷ್ಠ ಮುನಿಯೆ || ೫ ||

ಕರೆದರೆ ಬರುವಿಯೆಂಬೊ ಕೀರುತಿ ಕೇಳಿ ನಾ

ಕರೆದೆನೊ ಕರುಣದಿ ಕರವ ಪಿಡಿಯೊ || ೬ ||

ಭಕ್ತವತ್ಸಲನೆಂಬ ಬಿರುದು ನಿಂದಾದರೆ

ಸಕ್ತನ ಮೊರೆ ಕೇಳಿ ಮಧ್ವೇಶವಿಠಲದಾಸ || ೭ ||

bArO namma manege SrI rAghavEMdra ||
bArU duHkhApahAra bArO duritadUra
bArayya sanmArga dAri tOruva guruve ||

bAla prahlAdanAgi KULa kaSyapuvige
lOla SrInarahariya kAlarUpava tOrde || 1 ||

vyAsanirmita graMtha madhwakRuta bhAShyava
bEsarade Odi mereva vyAsamuniye || 2 ||

maMtragRuhadaliniMta suyativarya
aMta tiLiyado nI aMtaradoLu || 3 ||

bhUtaprEtagaLanu ghAtisibiDuvaMtha
khYAtiyuta yatinAthane tutisuve || 4 ||

kuShTarOgAdigaLa naShTa mADuvaMtha
aShTamahimeyuta SrEShTha muniye || 5 ||

karedare baruviyeMbo kIruti kELi nA
karedeno karuNadi karava piDiyo || 6 ||

bhaktavatsalaneMba birudu niMdAdare
saktana more kELi madhvESaviThaladAsa || 7 ||

Meera Bhajan – ಮೀರಾ ಭಜನ್

Meera Bhajan – ಮೀರಾ ಭಜನ್ lyrics provided by Ms. Bhavana Damle. Thanks, Bhavana.

ಗಿರಿಧಾರಿ ಜಯ ಗಿರಿಧಾರಿ ಗಿರಿಧಾರಿ ಜಯ ಗಿರಿಧಾರಿ
ಸುಗಂಧ ತುಳಸೀದಳ ವನಮಾಲಿ
ಗಿರಿಧಾರಿ ಜಯ ಗಿರಿಧಾರಿ ಗಿರಿಧಾರಿ ಜಯ ಗಿರಿಧಾರಿ||

ಮಾಧವ ಮುರಹರ ಮುನಿಜನಸೇವಿತ
ಮುರಳೀಧರ ಶ್ರೀ ಗಿರಿಧಾರಿ
ಜಯ ಜಯ ಗೋಪಿ ಮನೋಹರ ||೧||

ಮೀರಾ ಕೇ ಪ್ರಭು ಗಿರಿಧರ ನಾಗರ
ಮುರಳಿ ಮನೋಹರ ಗಿರಿಧಾರಿ
ಜಯ ಜಯ ಗೋಪಿ ಮನೋಹರ ||೨||

giridhaari jaya giridhaari giridhaari jaya giridhaari
sugaMdha tuLasIdaLa vanamaali
giridhaari jaya giridhaari giridhaari jaya giridhaari||

maadhava murahara munijanasEvita
muraLIdhara shrI giridhaari
jaya jaya gOpi manOhara ||1||

meeraa kE prabhu giridhara naagara
muraLi manOhara giridhaari
jaya jaya gOpi manOhara ||2||

ಕರದಲಿ ತಾಳ ಸಂತರ ಮೇಳ – Karadali Taala Santara Mela Lyrics

Ms.Bhavana Damle has provided the lyrics for ಕರದಲಿ ತಾಳ ಸಂತರ ಮೇಳ – Karadali Taala Santara Mela. Thanks, Bhavana.
ಕರದಲಿ ತಾಳ ಸಂತರ ಮೇಳ ಅಲ್ಲಿರುವನು ಹರಿ ಗೋಪಾಲ

ಪರಿಪರಿ ನುತಿಸುವ ಪರಮಭಕ್ತರನು ಪರಿಪಾಲಿಪ ಪುರಂದರ ವಿಠಲ ||

ಗೆಜ್ಜೆಯ ಕಟ್ಟು ಲಜ್ಜೆಯೆ ಬಿಟ್ಟು ಸಜ್ಜನ ಸೇವೆಯೊಳ್ ಮನಸಿಟ್ಟು

ಹೆಜ್ಜೆಹೆಜ್ಜೆಗೂ ಹರಿನಾಮವನು ಘರ್ಜಿಸಿ ಹೇಳುತ ಕರತಟ್ಟು ||೧||

ನಾಮವೆ ಧ್ಯಾನ ನಾಮವೆ ಪಾವನ ನಾಮ ಸಂಕೀರ್ತನ ಜೀವನ

ನಾಮವೆ ಘನಹರಿ ನಾಮವೆ ರಕ್ಷಣ ನಾಮವೆ ಮೋಕ್ಷದ ಸಾಧನ ||೨||

ಬಾಲಯೌವನ ವೃದ್ಧಾಪ್ಯದೊಳು ಕೋಳುಹೋಯ್ತು ಆಯುಷ್ಯವೆಲ್ಲ

ಮೂಲನಾರಾಯಣ ಆಲಯ ಸೇರಲು ನಾಮ ಹೊರತು ಗತಿ ಬೇರಿಲ್ಲ ||೩||

The lyrics in Baraha English:

karadali taaLa saMtara mELa alliruvanu hari gOpaala

paripari nutisuva paramabhaktaranu paripaalipa puraMdara viThala ||

gejjeya kaTTu lajjeye biTTu sajjana sEveyoL manasiTTu

hejjehejjegU harinaamavanu gharjisi hELuta karataTTu ||1||

naamave dhyaana naamave paavana naama saMkIrtana jIvana

naamave ghanahari naamave rakShaNa naamave mOkShada saadhana ||2||

baalayouvana vRuddhaapyadoLu kOLuhOytu aayuShyavella

mUlanaaraayaNa aalaya sEralu naama horatu gati bErilla ||3||

ಅಭಯಪ್ರದಾನ ಸ್ತೋತ್ರ – Abhaya Pradana Stotra Lyrics

Ms. Veena Sree has sent the lyrics for ಅಭಯಪ್ರದಾನ ಸ್ತೋತ್ರ in Kannada on Sree Raghavendra Swamy. Attached below is the lyrics in Kannada. Thanks, Veena.

ಶ್ರೀ ಕೃಷ್ಣಾವಧೂತ ವಿರಚಿತ
ಅಭಯಪ್ರದಾನ ಸ್ತೋತ್ರ
ಶ್ರೀತಾನಾಮ್ ಸ್ವಪಾದಾಂ ಮನೊಭೀಷ್ಟದಾನೆ ಸ್ಪುರದ್ರೂಪಮೊದ ಪ್ರಹಾರಿ ಪ್ರಭಾವ |
ಅವತ್ವಮ್ ಶ್ರೀ ಗುರು ರಾಘವೇಂದ್ರ ಫ್ರಭೋ ಮೇ ಶಿರಸ್ಯಾಶು ಹಸ್ತಂ ನಿಧೇಹಿ ||

ರಜೋಹೀನತೇ ಪಾದಾಂಬುಜಾತಂ ಪ್ರಸನ್ನಃ ಪ್ರಯಾತಿ ಪ್ರಕ್ರುಷ್ವ ಪ್ರಮೋದಂ |
ಅವತ್ವಮ್ ಶ್ರೀ ಗುರು ರಾಘವೇಂದ್ರ ಫ್ರಭೋ ಮೇ ಶಿರಸ್ಯಾಶು ಹಸ್ತಂ ನಿಧೇಹಿ ||

ಘನಾನಂದತೇ ಪದಪದ್ಮಂ ಪ್ರವಿದನ್ನ ನಂದೀಪ್ಯಮಂದಂ ಸದಾನಂದಮೇತಿ |
ಆವತ್ವಮ್ ಶ್ರೀ ಗುರು ಆಘವೆನ್ದ್ರ ಫ್ರಭೊ ಮೆಯ್ ಶಿರಸ್ಯಾಶು ಹಸ್ಥಮ್ ನಿಧೇಹಿ ||

ವದಾನ್ಯೋ ವದಾನ್ಯೋ ವದನ್ಯಾಸ್ತಿ ಕಸ್ತತ್ವತೋಹಂ ಯಥಾ ಹಂತತೆ ಪಾದಮಾಪಮ್ |
ಅವತ್ವಮ್ ಶ್ರೀ ಗುರು ರಾಘವೇಂದ್ರ ಫ್ರಭೋ ಮೇ ಶಿರಸ್ಯಾಶು ಹಸ್ತಂ ನಿಧೇಹಿ ||

ದಯಾಲೋ ದಯಾಲೋ ದಯಾಲೋ ದಯಾಲೋ ದಯಾಂ ಕುರ್ವಮೋಘಾಂ ಪದಮ್ ತೆಪದ್ಯೇ |
ಅವತ್ವಮ್ ಶ್ರೀ ಗುರು ರಾಘವೇಂದ್ರ ಫ್ರಭೋ ಮೇ ಶಿರಸ್ಯಾಶು ಹಸ್ತಂ ನಿಧೇಹಿ

ಯಥಾ ಶಕ್ತಿ ಪಾದಸ್ತುತೀಮ್ ತೇ ಅಪ್ಪಣಾಚಾರ್ಯ ಪ್ರಗೀತಾಂ ಪಠಂತೇ ಪ್ರಮೋದಂ ಭಜಂತೇ |
ಅವತ್ವಮ್ ಶ್ರೀ ಗುರು ರಾಘವೇಂದ್ರ ಫ್ರಭೋ ಮೇ ಶಿರಸ್ಯಾಶು ಹಸ್ತಂ ನಿಧೇಹಿ

ನ ಜಾನಾಮಿ ತೇ ಪಾದಸೇವಾ ವಿಧಾನಂ ಯಥಾಶಕ್ತಿ ಕಿಂತು ಸ್ವಯಂ ಸ್ರೌಮಿ ನೌಮಿ |
ಅವತ್ವಮ್ ಶ್ರೀ ಗುರು ರಾಘವೇಂದ್ರ ಫ್ರಭೋ ಮೇ ಶಿರಸ್ಯಾಶು ಹಸ್ತಂ ನಿಧೇಹಿ ||

ಮಹಾಪದ್ವಿನಾಶಾಯ ತೇ ಪಾದರೇಣುಃ ಪ್ರಭುಃ ಸ್ಯಾದತಸ್ತ್ವ ವಿರಸ್ನೋಹಮಾಪಂ |
ಅವತ್ವಮ್ ಶ್ರೀ ಗುರು ರಾಘವೇಂದ್ರ ಫ್ರಭೋ ಮೇ ಶಿರಸ್ಯಾಶು ಹಸ್ತಂ ನಿಧೇಹಿ

ಭುಜಂಗೇ ಭುಜಂಗೇನ ಕೃಷ್ಣಾವಧೂತೇನ ಗೀತಂ ಸಂಗೀತೇನ ಲೋಕೇ ಪಠೇದ್ಯಃ |
ಅವತ್ವಮ್ ಶ್ರೀ ಗುರು ರಾಘವೇಂದ್ರ ಫ್ರಭೋ ಮೇ ಶಿರಸ್ಯಾಶು ಹಸ್ತಂ ನಿಧೇಹಿ ||

Attached below is the link on Kannadaaudio.com for the tune.

http://www.kannadaaudio.com/Songs/Devotional/home/Madhwanama-PutturNarasimhaNayak.php

ಲಕ್ಷ್ಮಿದೇವಿ ಬಾರೆ – LakshmiDevi Baare Lyrics

Ms. Bhavana Damle has sent us the lyrics for a wonderful song on Goddess LakshmiDevi. Attached below is the lyrics in Kannada, English and youtube link.

Lakshmi.jpg

ರಾಗ: ಶಂಕರಾಭರಣ  ತಾಳ: ಛಾಪು

ಲಕ್ಷ್ಮಿದೇವಿ ಬಾರೆ ಮಾತೆ ಪೂಜಿಸುವೆನು
ನಿನ್ನ ಪಾದಗಳಿಗೆ ನಾನು ವಂದಿಸುವೆನು ||

ಪುನುಗು ಜಾಜಿ ಕುಂಕುಮ ಕೇಸರಿ ಗಂಧ ಕಸ್ತುರೀ
ನಾನಾ ಜಾತಿ ಗಂಧಗಳಿಂದ ಪೂಜಿಸುವೆನು ||೧||

ಮರುಗ ಮಲ್ಲಿಗೆ ಸುರಗಿ ಸಂಪಿಗೆ ಪಾದರಿ ಪುಷ್ಪ
ನಾನಾ ಜಾತಿ ಪುಷ್ಪಗಳಿಂದ ಅರ್ಚಿಸುವೆನು ||೨||

ಕದಳಿ ದಾಳಿಂಬ ನಿಂಬೆ ನೇರಳೆ ಚೂತಫಲಗಳು
ನಾನಾ ಜಾತಿ ಫಲಗಳನ್ನು ಅರ್ಪಿಸುವೆನು ||೩||

ಮುತ್ತಿನಾರತಿ ಎತ್ತಿ ಬೆಳಗುವೆ ಭಕ್ತಿಯಿಂದಲಿ
ಬೇಗದಿಂದ ವರವ ಕೊಟ್ಟು ಹರಸು ತಾಯೆ ನೀ ||೪||

raaga: shaMkaraabharaNa  tALa: chaapu

lakShmidEvi baare maate pUjisuvenu
ninna paadagaLige naanu vaMdisuvenu ||

punugu jaaji kuMkuma kEsari gaMdha kasturI
naanaa jaati gaMdhagaLiMda pUjisuvenu ||1||

maruga mallige suragi saMpige paadari puShpa
naanaa jaati puShpagaLiMda arcisuvenu ||2||

kadaLi daaLiMba niMbe nEraLe cUtaphalagaLu
naanaa jaati phalagaLannu arpisuvenu ||3||

muttinaarati etti beLaguve bhaktiyiMdali
bEgadiMda varava koTTu harasu taaye nI ||4||

ಏಳು ನಾರಾಯಣ ಏಳು ಲಕ್ಷ್ಮೀರಮಣ – Yelu Narayana Yeli LakshmiRamana Lyrics

Ms. Bhavana Damle, who was one of the top contributors last year, has submitted the lyrics for ಏಳು ನಾರಾಯಣ ಏಳು ಲಕ್ಷ್ಮೀರಮಣ Yelu Narayana Yeli LakshmiRamana in Kannada and English. Ms. Bhavana has also uploaded the song to youtube. Enjoy, and lets all together wakeup or Lord Narayana.

ರಾಗ: ಭೌಳಿ ತಾಳ: ಖಂಡ ಚಾಪು

ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿವಾಸ ಶ್ರೀ ವೆಂಕಟೇಶ
ಏಳಯ್ಯ ಬೆಳಗಾಯಿತು….ಏಳಯ್ಯ ಬೆಳಗಾಯಿತು ||

ದಾಸರೆಲ್ಲರು ಬಂದು ಧೂಳಿದರ್ಶನಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಕೇಶವನೆ ನಿಮ್ಮ ಸಿರಿನಾಮವನು ಸ್ಮರಿಸುತಲಿ
ವಾಸುದೇವನೆ ಉದಯದಲ್ಲಿ ಪಾಡುತಿಹರು ||೧||

ಕಾಸಿದ್ದ ಹಾಲುಗಳ ಕಾವಡಿಯ ತುಂಬಿಟ್ಟು
ಲೇಸಾಗಿ ಕೆನೆಮೊಸರು ಬೆಣ್ಣೆಯನು ಮೆದ್ದು
ಶೇಷಶಯನನೆ ಏಳು ಸಮುದ್ರಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ ||೨||

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿಹರಯ್ಯ ಸುಜನರೊಡೆಯ
ಅರವಿಂದಲೋಚನನೆ ಕೋಳಿ ಕೂಗಿತು ಏಳು
ಪುರಂದರವಿಠಲನೆ ಬೆಳಗಾಯಿತು ||೩||

raaga: bhouLi taaLa: KaMDa chaapu

ELu naaraayaNa ELu lakShmIramaNa
ELu shrIgirivaasa shrI veMkaTEsha
ELayya beLagaayitu….ELayya beLagaayitu ||

daasarellaru baMdu dhULidarshanagoMDu
lEsaagi taaLa daMDigeya piDidu
kEshavane nimma sirinaamavanu smarisutali
vaasudEvane udayadalli paaDutiharu ||1||

kaasidda haalugaLa kaavaDiya tuMbiTTu
lEsaagi kenemosaru beNNeyanu meddu
shEShashayanane ELu samudramathanava maaDu
dEsha keMpaayitu ELayya hariyE ||2||

araLu mallige jaaji parimaLada puShpagaLa
suraru taMdiharayya sujanaroDeya
araviMdalOchanane kOLi kUgitu ELu
puraMdaraviThalane beLagaayitu ||3||

ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ – Nodiri Raghavendrara Madiri Namaskara Lyrics

An amazing song on our beloved Rayaru. Below are the lyrics in Kannada and Baraha English.

Original Picture of Rayaru

ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ

ಬೇಡಿದ ಇಷ್ಟವರ ನೀಡುವರು ನಮ್ಮ ಯತಿವರ ಪ

ಮಂತ್ರಾಲಯದಲಿ ನಿಂತಿಹ, ಚಿಂತೆಗಳ ಪರಿಹರಿಸುವ

ಕಂತುಪಿತನನಂತಗುಣ ತನ್ನಂತರಂಗದಿ ಸ್ತುತಿಸುವ

ಇಂಥಾ ಯತಿಗಳ ಕಾಣೆ ಹರಿಯೇಕಾಂತ ಭಕ್ತರೆನಿಸಿಕೊಂಬುವ

ಮಂತ್ರಾಕ್ಷತೆ ಫಲ ನೀಡಿ ಸಂತಾನ ಸಂಪತ್ತು ಕೊಡುವರ || 1 ||

 

ಭೂತಪ್ರೇತ ಭಯಗಳ ವಾತಪಿತ್ತ ವ್ಯಾಧಿಗಳ

ಶ್ವೇತ ಕುಷ್ಠ ರೋಗಗಳ ಪಾತಕಿಯರ ಪಾಪಗಳ

ಪ್ರೀತಿಲಿಂದ ಕಳೆವರೊ ಪ್ರಖ್ಯಾತರಾಗಿ ಬೆಳೆವರೊ

ಭೂತಳದಿ ಸನ್ನಿಹಿತರಾದ ಸೀತಾಪತಿ ನಿಜದೂತರೆನಿಸೋರೊ || 2 ||

 

ಭಜಿಸೆ ಭಕ್ತರ ನೋಡುವ ಸದನಕೆ ಬಂದು ಕೂಡುವ

ಒದಗಿದಾಪತ್ತು ದೂಡುವ ಬಂದು ಮುದದಿ ತಾ ದಯಮಾಡುವ

ಅಜನಯ್ಯನ ಕೊಂಡಾಡುತ ತುಂಗಾನದಿಯತೀರ ವಾಸವಾಗಿ

ಹೃದಯದೊಳು ಭೀಮೇಶಕೃಷ್ಣನ ಪದವ ಭಜಿಸಿ ಪಡೆವರಾನಂದವ || 3 ||

 

nODiri rAghavEMdrara mADiri namaskAra
bEDida iShTavara nIDuvaru namma yativara pa
maMtrAlayadali niMtiha, ciMtegaLa pariharisuva
kaMtupitananaMtaguNa tannaMtaraMgadi stutisuva
iMthA yatigaLa kANe hariyEkAMta bhaktarenisikoMbuva
maMtrAkShate phala nIDi saMtAna saMpattu koDuvara || 1 ||

bhUtaprEta bhayagaLa vAtapitta vyAdhigaLa
SvEta kuShTha rOgagaLa pAtakiyara pApagaLa
prItiliMda kaLevaro prakhyAtarAgi beLevaro
bhUtaLadi sannihitarAda sItApati nijadUtarenisOro || 2 ||

bhajise bhaktara nODuva sadanake baMdu kUDuva
odagidApattu dUDuva baMdu mudadi tA dayamADuva
ajanayyana koMDADuta tuMgAnadiyatIra vAsavAgi
hRudayadoLu bhImESakRuShNana padava bhajisi
paDevarAnaMdava || 3 ||

ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ – Kori Karave Guru Shree Raghavendrane Lyrics

Thanks to Mr. Lakshman who tirelessly comments to every request to amazing lyrics. Attached below is the lyrics for ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ – Kori Karave Guru Shree Raghavendrane

rayaru

kOri kareve guru SreeraaghavEMdrane baaro maha prabhuve
chaaru charaNa yuga saari namipe bEga baaro hRudaya suja saara roopava tOri

elli nODalu hari alle kaaNuvaneMdu kShulla kaMbavanoDedu
nillade narahari chelvike tOrida pulla lOchana shishu prahallaadanaagi baaro

dOsha kaLedu siMhaasana Erida daasakulava poreda
Sreesha narchakanaagi poshisi hari mata vyaasatrayava gaidu vEsha kaLedu baaro

moorjaga maanita tEjo viraajita maajada maha mahima
OjigoLisi mati raajiva bodadi poojegeMdu guru raajaa roopadi baaro

maMtra sadanadolu saMta sujanarige saotoSha siri garedu
kaMtu pitana paada saMtata sEvipa shaaMta mooruti ennaMta raMgadi baaro

ee samayadi ennaase ninnoLu balu soosi hariyutihudO
koosige janani nirase goLisuvaLe dosha kaLedu viThalEsha hRUdaya baaro

 

ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ ಬಾರೊ ಮಹ ಪ್ರಭುವೆ

ಚಾರು ಚರಣ ಯುಗ ಸಾರಿ ನಮಿಪೆ ಬೇಗ ಬಾರೊ ಹೃದಯ ಸುಜ ಸಾರ ರೂಪವ ತೋರಿ

ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದು ಕ್ಷುಲ್ಲ ಕಂಬವನೊಡೆದು

ನಿಲ್ಲದೆ ನರಹರಿ ಚೆಲ್ವಿಕೆ ತೋರಿದ ಪುಲ್ಲ ಲೋಚನ ಶಿಶು ಪ್ರಹಲ್ಲಾದನಾಗಿ ಬಾರೊ

ದೋಶ ಕಳೆದು ಸಿಂಹಾಸನ ಏರಿದ ದಾಸಕುಲವ ಪೊರೆದ

ಶ್ರೀಶ ನರ್ಚಕನಾಗಿ ಪೊಶಿಸಿ ಹರಿ ಮತ ವ್ಯಾಸತ್ರಯವ ಗೈದು ವೇಶ ಕಳೆದು ಬಾರೊ

ಮೂರ್ಜಗ ಮಾನಿತ ತೇಜೊ ವಿರಾಜಿತ ಮಾಜದ ಮಹ ಮಹಿಮ

ಓಜಿಗೊಳಿಸಿ ಮತಿ ರಾಜಿವ ಬೊದದಿ ಪೂಜೆಗೆಂದು ಗುರು ರಾಜಾ ರೂಪದಿ ಬಾರೊ

ಮಂತ್ರ ಸದನದೊಲು ಸಂತ ಸುಜನರಿಗೆ ಸಒತೊಷ ಸಿರಿ ಗರೆದು

ಕಂತು ಪಿತನ ಪಾದ ಸಂತತ ಸೇವಿಪ ಶಾಂತ ಮೂರುತಿ ಎನ್ನಂತ ರಂಗದಿ ಬಾರೊ

ಈ ಸಮಯದಿ ಎನ್ನಾಸೆ ನಿನ್ನೊಳು ಬಲು ಸೂಸಿ ಹರಿಯುತಿಹುದೋ

ಕೂಸಿಗೆ ಜನನಿ ನಿರಸೆ ಗೊಳಿಸುವಳೆ ದೊಶ ಕಳೆದು ವಿಠಲೇಶ ಹೄದಯ ಬಾರೊ

.

Runa Vimochana Narashima Stotra

Runa Vimochana Narashima Stotra is provided by Ms. Mallika Hunsur. Thanks so much, Mallika.

This mantra is to be chanted if you want to get rid of your debt. It is a stotra to be recited to relieve the debt by Lord Lakshmi Narashima. Recite it daily to get rid of your debt.

Canada Trip 224

ದೇವತಾ ಕಾರ್ಯ ಸಿದ್ಯರ್ಥಂ ಸಭಾಸ್ಥಂಭ ಸಮುಧ್ಭವಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ – ೧
ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಂ ವರದಾಯಕಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ – ೨ 
ಆಂತ್ರಮಾಲಧರಂ ಶಂಖಚಕ್ರಾಭ್ಜಾಯುಧ ಧಾರಿಣಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ -೩ 
ಸ್ಮರಣಾತ ಸರ್ವಪಾಪಗ್ನಂ ಖದ್ರೂಜ ವಿಷನಾಶನಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ- ೪ 
ಸಿಂಹನಾದೇನಮಹತ ದಿಗ್ದಂತಿ ಭಯನಾಶನಂ 
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ- ೫
ಪ್ರಹ್ಲಾದಂ ವರದಂ ಶ್ರೀಶಂ ಧೈತೇಶ್ವರ ವಿದಾರಿಣಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ- ೬
ಕ್ರೂರಗ್ರಹೈ ಪೀಡಿತಾನಂ ಭಕ್ತಾನಂ ಅಭಯಪ್ರದಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ- ೭
ವೇದವೇದಾಂತ ಯಜ್ಞೆಷಂ ಬ್ರಹ್ಮರುದ್ರಾದಿವಂದಿತಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ- ೮
ಯ ಇದಂ ಪಠತೇ ನಿತ್ಯಂ ಋಣ ಮೋಚನ ಸಂಹಿತಂ
ಅನ್ರುಣಿ ಜಾಯತೇ ಸತ್ಯೋ ಧನಂ ಶೀಘ್ರಮವಾಪ್ನುಯತ್ – ೯
Attached below is the English version.

Devata karya sidhyartham, sabha sthambha samudbhavam,
Sri nrusimham mahaveeram namami runa mukthaye - 1

Lakshmyalingitha vamangam, bhakthanaam vara dayakam,
Sri nrusimham mahaveeram namami runa mukthaye - 2

Aantramaladaram, sankha charabjayudha darinam,
Sri nrusimham mahaveeram namami runa mukthaye - 3

Smaranath sarva papagnam, khadruja visha nasanam,
Sri nrusimham mahaveeram namami runa mukthaye - 4

Simhanadenaahath, digdanthi bhayanasanam,
Sri nrusimham mahaveeram namami runa mukthaye - 5

Prahlada varadam, srresam, daithyeswara vidharinam,
Sri nrusimham mahaveeram namami runa mukthaye - 6

Krooragrahai peedithanam bhakthanam abhaya pradham,
Sri nrusimham mahaveeram namami runa mukthaye - 7

Veda vedantha yagnesam, brahma rudradhi vandhitham,
Sri nrusimham mahaveeram namami runa mukthaye - 8 

Ya idam padathe nithyam, runa mochana samgnakam,
Anruni jayathe sathyo, danam seegramavapnuyath - 9
Follow

Get every new post delivered to your Inbox.

Join 935 other followers

%d bloggers like this: