Ms. Bhavana has sent two amazing lyrics and audio for the upcoming Tulasi Pooje. Thanks so much, Bhavana.
ರಾಗ: ಕಾಂಬೋಧಿ ತಾಳ: ಖಂಡಚಾಪು
ಶ್ರೀ ತುಳಸಿ ಜಯ ತುಳಸಿ ಜಯಜಯ ತುಳಸಿ
ಶ್ರೀರಾಮ ತುಳಸಿ ವರ ಶ್ರೀಕೃಷ್ಣ ತುಳಸಿ ||
ಗಂಗೆ ಗೋದಾವರಿಯು ತುಂಗಭದ್ರೆಯು ಯಮುನೆ
ಮಂಗಳ ತರಂಗಿಣಿಯು ಶ್ರೀಕೃಷ್ಣವೇಣಿ
ರಂಗನಾಥನ ಸಮೇತ ದಿವ್ಯ ಕಾವೇರಿಯು
ಮಂಗಳೆಯೆ ನಿನ್ನಲ್ಲಿ ವಾಸವಾಗಿಹರು ||೧||
ನಿನ್ನ ಪಾದವು ಚತುರ್ಮುಖನ ಭಾಗವು ದೇವಿ
ನಿನ್ನ ಮಧ್ಯವು ಹರಿಯ ಭಾಗವಾಗಿಹುದು
ನಿನ್ನ ತುದಿ ಕೈಲಾಸನಾದ ಶಿವ ಭೋಗವು
ನಿನ್ನ ಮೈಯೊಳು ಸಕಲ ದೇವತೆಗಳಿಹರು ||೨||
ಗಂಧಪುಷ್ಪವು ಧೂಪ ದೀಪ ನೈವೇದ್ಯದಿಂ
ವಂದಿಸುತ ನಾ ನಿನ್ನ ಪೂಜೆಗೈವೆ
ಇಂದಿರೆಯೆ ಸೌಭಾಗ್ಯ ಸಂತತಿಯ ನೀನಿತ್ತು
ಮುಂದೆ ಪಾಲಿಸು ಭಕ್ತಿ ಮುಕ್ತಿ ಸಂಪದವ ||೩||
ನೀನಿರುವ ದೇಶದಲಿ ರೋಗಗಳ ಭಯವಿಲ್ಲ
ನೀನಿರುವ ದೇಶದಲಿ ಪಾಪಭಯವಿಲ್ಲ
ನೀನಿರುವ ದೇಶದಲಿ ಯಮನ ಭಯವಂತಿಲ್ಲ
ನೀನಿರುವ ದೇಶದಲಿ ಭೂತಭಯವಿಲ್ಲ ||೪||
ಜಯ ಮಂಗಳಂ ತುಳಸಿ ಸರ್ವಮಂಗಳೆ ದೇವಿ
ಜಯ ಮಂಗಳಂ ತುಳಸಿ ಮುರಹರನ ರಮಣಿ
ಜಯ ಮಂಗಳಂ ತುಳಸಿ ಲೋಕಪಾವನೆ ಮೂರ್ತಿ
ಜಯ ಮಂಗಳಂ ತುಳಸಿ ಧೇನು ಸುರ ದೇವಿ ||೫||
raaga: kaaMbOdhi taaLa: khaMDachaapu
shrI tuLasi jaya tuLasi jayajaya tuLasi
shrIraama tuLasi vara shrIkRuShNa tuLasi ||
gaMge gOdaavariyu tuMgabhadreyu yamune
maMgaLa taraMgiNiyu shrIkRuShNavENi
raMganaathana samEta divya kaavEriyu
maMgaLeye ninnalli vaasavaagiharu ||1||
ninna paadavu chaturmukhana bhaagavu dEvi
ninna madhyavu hariya bhaagavaagihudu
ninna tudi kailaasanaada shiva bhOgavu
ninna maiyoLu sakala dEvategaLiharu ||2||
gaMdhapuShpavu dhUpa dIpa naivEdyadiM
vaMdisuta naa ninna pUjegaive
iMdireye soubhaagya saMtatiya nInittu
muMde paalisu bhakti mukti saMpadava ||3||
nIniruva dEshadali rOgagaLa bhayavilla
nIniruva dEshadali paapabhayavilla
nIniruva dEshadali yamana bhayavaMtilla
nIniruva dEshadali bhUtabhayavilla ||4||
jaya maMgaLaM tuLasi sarvamaMgaLe dEvi
jaya maMgaLaM tuLasi muraharana ramaNi
jaya maMgaLaM tuLasi lOkapaavane mUrti
jaya maMgaLaM tuLasi dhEnu sura dEvi ||5||
*********************
ಎತ್ತಿದಳಾರತಿಯ ಶ್ರೀ ತುಳಸಿಗೆ ಭಕ್ತಿಭಾವಗಳಿಂದಲಿ
ಎತ್ತಿದಳಾರತಿ ಸತ್ಯಧರ್ಮನ ಸತಿ
ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ ||
ಹಾರಕೇಯೂರದಿಂದ ಚಿತ್ರಾವಳಿ ನಾರಿ ತುಳಸಿಗೆ ರಚಿಸಿ
ಚಾರುಹಸ್ತಗಳಿಂದ ನಾರಿ ಬೊಗಸೆ ಒಡ್ಡಿ
ವಾರಿಜನಾಭನ ತೋರಿಸೆಂದೆನುತಲಿ ||೧||
ಅನ್ನ ಬೇಡೊ ಋಷಿಗಳು ಯತಿಗಳು ಬಂದು ನನ್ನನ್ನು ಕಾಡುತಿಹರು
ಪನ್ನಗವೇಣಿಯೆ ನಿನ್ನ ಮೊರೆಹೊಕ್ಕೆನೆ
ಪನ್ನಗಶಯನನ ತೋರಿಸೆಂದೆನುತಲಿ ||೨||
ettidaLaaratiya shrI tuLasige bhaktibhaavagaLiMdali
ettidaLaarati satyadharmana sati
achyutana tOreMdu ati dainyadiMdali ||
haarakEyUradiMda chitraavaLi naari tuLasige rachisi
chaaruhastagaLiMda naari bogase oDDi
vaarijanaabhana tOriseMdenutali ||1||
anna bEDo RuShigaLu yatigaLu baMdu nannannu kaaDutiharu
pannagavENiye ninna morehokkene
pannagashayanana tOriseMdenutali ||2||
The second song I used to hear on radio many years back. If you have the original track please, post the same.
I am an average singer but I think this is the best way to share what i know. Thanks for the good words from you which encouraged me to do this.
-Bhavana.






Recent Comments