Archive for July 3rd, 2008

Raya Baro Thande Thayi Baro – Lyrics

This was the song taught to me by my Aunt, Ratna Atte (Father’s Sister) when I was in 10th grade. I have been singing this ever since, and everyone in our family do so when we do Seva for Shri Raghavendra Swamy. Here are the lyrics for Raya Baro Thande Thayi Baro lyrics in Kannada. I will post the lyrics in English as soon as I get time to translate the same.

ರಾಯ ಬಾರೋ ತಂದೆ ತಾಯಿ ಬಾರೋ | ನಮ್ಮನು ಕಾಯ ಬಾರೋ |
ಮಾಯಿಗಳ ಮದಿಸಿದ ರಾಘವೇಂದ್ರ ರಾಯ ಬಾರೋ ||

ವಂದಿಪ ಜನರಿಗೆ ಮಂದರ ತರುವಂತ | ಕುಂದದಭಿಷ್ಟವ ಸಲ್ಲಿಸುತಿಪ | ರಾಯ ಬಾರೋ |
ಕುಂದದಭಿಷ್ಟವ ಸಲ್ಲಿಸುತಿಪ ಸರ್ವಜ್ಞ | ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ ||1||

ಆರುಮೂರು ಏಳು ನಾಲ್ಕು ಎಂಟು ಗ್ರಂಥದ ಸಾರಾರ್ಥ ತೋರಿದಿ ಸರ್ವರಿಗೆ ನ್ಯಾಯದಿಂದ ರಾಯ ಬಾರೋ |
ತೋರಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞ ಸುರಿಗಳರಸನೇ ರಾಘವೇಂದ್ರ ರಾಯ ಬಾರೋ || 2||

ರಾಮಪಾದಾಂಬುಜ ಸದ್ಭೃಂಗ ಕೃಪಾಂಗ ಭ್ರಾಮಕ ಜನರ ಮಾನಭಂಗ ರಾಯ ಬಾರೋ
ಭ್ರಾಮಕ ಜನರ ಮಾನಭಂಗವ ಮಾಡಿದ ಧೀಮಂತರೊಡೆಯನೇ ರಾಘವೇಂದ್ರ ರಾಯ ಬಾರೋ ||3||

ಭೂಸುರ ಚರಿತಾನೇ ಭೂಸುರ ವಂದ್ಯನೇ ಶ್ರೀ ಸುಧೀಂದ್ರರ್ಯರ ವರಪುತ್ರ ರಾಯ ಬಾರೋ
ಶ್ರೀ ಸುಧೀಂದ್ರರ್ಯರ ವರಪುತ್ರ ವರಯೋಗಿ ದೇಶಿಕರೊಡೆಯನೇ ರಾಘವೇಂದ್ರ ರಾಯ ಬಾರೋ ||4||

ಭೂತಲನಾಥನ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದಿ ಮಹಿಷಿಯ ರಾಯ ಬಾರೋ
ಪ್ರೇತತ್ವ ಕಳೆದಿ ಮಹಿಷಿಯ ಮಹಾ ಮಹಿಮಾ ನಾಥ ಗುರು ಜಗನ್ನಾಥ ವಿಠಲ ಬಾರೋ ತಂದೆ ತಾಯಿ ಬಾರೋ ||5\\

Listen to part of Raya Baro song here at youtube:

%d bloggers like this: