Shyamala Dandaka Stothra

Ms. Sneha has sent the lyrics for Shyamala Dandaka stothra.  ತುಂಬ ಧನ್ಯವಾದಗಳು ಸ್ನೇಹಾ.  Attached below is the lyrics in Kannada.

This is the first time I have posted anything directly in Kannada.  Actually copied whatever Sneha sent and pasted it here. It was so easy. Hope it works for you all as well. If you see some weird characters, please download and install Kannada font.

ಮಾಣಿಕ್ಯ ವೀಣಾ ಮುಫಲಾಲಯಂತೀಂ, ಮದಾಲಸಾಂ ಮಂಜುಲ  ವಾಗ್ವಿಲಾಸಾಂ\\೨\\
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ, ಮಾತಂಗಕನ್ಯಾಂ ಮನಸಾ ಸ್ಮರಾಮೀ…ಮನಸಾ ಸ್ಮರಾಮಮೀ

ಚತುರ್ಭುಜೇ ಚಂದ್ರಕಳಾವತಂಸೆe, ಕುಚೊeನ್ನತೆ ಕುಂಕುಮರಾಗಷೋಣೇ\\೨\\
ಪುಂಡ್ರೆeಕ್ಶು ಪಾಶಾಂಕುಶ ಪುಶ್ಪಬಾಣಹಸ್ತೆe, ನಮಸ್ತೆe ಜಗದಕಮಾತಃ… \\

ಮಾತಾ…! ಮರಕತಶ್ಯಾಮಾ! ಮಾತಂಗೀ ಮಧುಶಾಲಿನೀ \\೨\\
ಕುರ್ಯಾತ್ಕಟಾಕ್ಶಂ ಕಲ್ಯಾಣೀ! ಕದಂಬ ವನವಾಸಿನೀ…
ಮಾತಾ…! ಮರಕತಶ್ಯಾಮಾ! ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಶಂ ಕಲ್ಯಾಣೀ! ಕದಂಬ ವನವಾಸಿನೀ…

ಜಯ ಮಾತಂಗತನಯೆe…! ಜಯ ನೀಲೊeತ್ಪಲದ್ಯುತೆ!
ಜಯ ಸಂಗೀತರಸಿಕೆe! ಜಯ ಲೀಲಾಶುಕಪ್ರಿಯೆe…!

ಸುಧಾಸಮುದ್ರಾಂತ ಹ್ರುದ್ಯನ್ಮಣೀ ದ್ವೀಪ ಸಂರೂಢ ಬಿಲ್ವಾಟವೀ ಮಧ್ಯ , ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೆe…!
ಕ್ರುತಿ ವಾಸಪ್ರಿಯೆe…!ಸರ್ವ ಲೊeಕ ಪ್ರಿಯೆe…!

ವಲ್ಲಕೀ ವಾದನ ಪ್ರಕ್ರಿಯಾ ಲೊeಲ ತಾಲeಲಲಲಾ ಬದ್ಧ ತಾಟಂಕ ಭೂಷಾ ವಿಷೇಷನ್ಮಿತೇ ಸಿದ್ಧ ಸಂವಾಣಿತೇ..!

ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ವಜ್ಞ ಕೊಟೀ ರಮಾಣಿಕ್ಯ
ಸಂಗೃಷ್ಟ ಬಾಲಾತ ಪೋತ್ಠ ಮಲಾಕ್ಷರ ತಾರುಣ್ಯ ಲಕ್ಷ್ಮೀ ಗೃಹೀಂತಾಗ್ವೀ ಪದ್ಮದ್ವಯೇ …ಅದ್ವಯೇ

ರೋಚಿರಃ ವರಹ ರತ್ನ ಪೀಠಸ್ಠಿತೇ…ಸುಸ್ಠಿತೇ, ಶಂಖ ಪದ್ಮದ್ವಯೋಪಾಶ್ರಿತೇ…ಆಶ್ರಿತೇ…
ದೇವಿ ದುರ್ಗವಟು ಕ್ಷೇತ್ರಪಾಲೈರ್ಯುತೇ…ಮತ್ತ ಮತಾಂಗ ಕನ್ಯಾ ಸಮೂಹಾನ್ಮಿತೇ…

ಸರ್ವಯಂತ್ರಾತ್ಮಿಕೆ! ಸರ್ವಮಂತ್ರಾತ್ಮಿಕೆ!
ಸರ್ವತಂತ್ರಾತ್ಮಿಕೆ!  ಸರ್ವಮುದ್ರಾತ್ಮಿಕೆ!
ಸರ್ವಶಕ್ತ್ಯಾತ್ಮಿಕೆ! ಸರ್ವವರ್ಣಾತ್ಮಿಕೆ!

ಸರ್ವರೂಪೆe! ಜಗನ್ಮಾತ್ಕೆ! ಹೇ ಜಗನ್ಮಾತ್ಕೆ!
ಪಾಹಿ ಮಾಂ ಪಾಹಿ ಮಾಂ, ಪಾಹಿ ಮಾಂ, ಪಾಹಿ!

5 responses to this post.

 1. Posted by S H Suryanarayana Rao on March 21, 2014 at 8:40 am

  ಶ್ರೀ ಶ್ಯಾಮಲಾ ದಂಡಕ ( ಕನ್ನಡ ಭಾಷಾಂತರ ) – ಶ್ರೀ ವಿ. ರಾಮ ಶರ್ಮಾ ವಿರಚಿತ
  ( ೧೯೩೪ ನೇ ಇಸವಿಯಲ್ಲಿ) ಪದ್ಯ ಭಾಗವನ್ನು ಕಳಿಸಿದ್ದೇನೆ.

  ಜಯ ಜನನಿ | ಸೊದೆಗಡಲ
  ನಡುವಿನೊಳು ಮಿಸುಪ ಮಣಿ
  ದೀವಿಯೊಳಗುದಿಸಿರ್ದ
  ಬಿಲ್ವ ವನ ಮಧ್ಯದೊಳು
  ಕಲ್ಪತರು ಸನ್ನಿಭದ
  ಸುರಗಿ ಬನದೊಳಗಿರವ
  ಮೆಚ್ಚಿಹಳೆ |
  ತೊವಲುಡೆಯ ಪರಶಿವನ
  ನಚ್ಚಿಹಳೆ |
  ಜಗಗಳ ನಿಮಿರ್ಚಿಹಳೆ |

  ಸಾದರದಿ ಹಾಡುತಿಹ
  ಗಾಯನದ ಹೊಗಳಿಕೆಯ
  ಮೋಡಿಯಿಂ ಲೋಲವಹ
  ಸುರಗಿ ಹೂ ಮಾಲೆಯನು
  ಮುಡಿದಿರ್ದ ಜಡೆಯಾಡಿ
  ರಂಜಿಸುವ ನಟ್ಟೆಲುಬಿ-
  ನಿಂದೆಸೆದು ಮೆರೆಯುವಳೆ |
  ಲೋಕವನು ಪೊರೆಯುವಳೆ |

  ತಲೆದೊಡವನೊಡರಿಸಿ-
  ರ್ದುಡುಪತಿಯ ರೇಖೆಯ ಮ-
  ಯೂಖಗಳ ಗಡಣದಿಂ-
  ದೊಡವೆರೆದ ಮಿಸುಪ ಮುಂ-
  ಗುರುಳಿನಿಂ ರಂಜಿಪಳೆ |
  ಪಾಪವನು ಭುಂಜಿಪಳೆ |

  ಮನ್ಮಥನ ಸಡಗರದ
  ಬಿಲ್ಲಿನಂದವ ತಳೆವ
  ಪುರ್ವುವೆಳ ವಳ್ಳಿಗಳ
  ಪೂವೆಂಬ ಸಂದೆಯವ-
  ನೊಂದಿಸುವ ಲೋಚನಗ-
  ಳುಳ್ಳವಳೆ |
  ವಾಕ್ಸುಧಾ ಸೇಚನವ
  ಗೈವವಳೆ |

  ಸಂದ ಗೋರೋಚನದ
  ತಿಲಕದಿಂದೆಸೆವ ಹಣೆ
  ಯುಳ್ಳವಳೆ |
  ಮಣಿದರನು ಕಾವವಳೆ |

  ಕೊಪ್ಪುಗಳೊಳೊಪ್ಪುತಿಹ
  ಮುತ್ತುಗಳ ಮೊತ್ತದಿಂ-
  ದೊತ್ತಿಬಹ ತಂಗದಿರಿ-
  ನಿಂದೆಸೆವ ಕೆನ್ನೆಗಳ
  ಮೇಲ್ ಬರೆದ ಕತ್ತುರಿಯ
  ಪತ್ರದಂತಿರುತಿರುವ
  ರೇಖೆಯಿಂ ಹೊರ ಹೊರಟು
  ಬರುತಿರುವ ಪರಿಮಳಕೆ
  ಮುತ್ತುತಿಹ ಪರಮೆಗಳ
  ಗಾನದಿಂ ಮೇಳೈಸಿ
  ಗಂಭೀರತರಮಾದ
  ತಂತಿಯಿಂಚರವನ್ನು
  ಹೊರಡಿಸುವ ಬೀಣೆಯನು
  ಬಾಜಿಪಳೆ |
  ಜಗದೆ ರಾರಾಜಿಪಳೆ |

  ಬೀಣೆಯನು ಬಾಜಿಸುವ
  ಮೋಜಿನಿಂ ತೊನೆಯುತಿಹ
  ತಾಳೆಗರಿಯಿಂ ಕಟ್ಟಿ-
  ದೋಲೆಯನು ಕಿವಿಗಳಲಿ
  ತೊಟ್ಟಿಹಳೆ |
  ವಿಶ್ವದೊಳಗೊಟ್ಟಿಹಳೆ |
  ಅಂದಮಿಗೆ ಕಿವಿಗಳೊಳ-
  ಗೊಂದಿಸಿದ ನೀಲಾಬ್ಜ-
  ವನು ತನ್ನ ಕಡೆಗಣ್ಣ
  ಬೆಳಕಿನಿಂ ಬೆಳಗಿಪಳೆ |
  ಕಂಟಕವ ತೊಲಗಿಪಳೆ |

  ಬೆಮರ ಬಿಂದುಗಳಿಂದೆ
  ಮಿರುಗುತಿಹ ಹಣೆಯ ಸೌಂ-
  ದರ್ಯದೊಬ್ಬುಳಿಯ ಸಂ-
  ದೇಹಮಂ ಮಿಗೆ ಮಾಳ್ಪ
  ಮೂಗುತಿಯ ಮುತ್ತುಗಳಿ-
  ನೆಸೆಯುವಳೆ |
  ಭುವನಗಳ ಪೊಸೆಯುವಳೆ |

  ಕಪ್ಪುರದಿ ಗಮಗಮಿಸು
  ವೆಲೆಯಡಕೆಯೊತ್ತಿನಿಂ
  ಥಳಥಳಿಸುವೆಳ ನಗೆಯ
  ಮೊಗಸಿರಿಯನುಳ್ಳವಳೆ |
  ಭಕ್ತರಿಗೆ ಸಂಪದವ-
  ನಳೆಯುವಳೆ |
  ಪಾಪಗಳ ತೊಳೆಯುವಳೆ |

  ದುಂಡು ಮಲ್ಲಿಗೆಯ ನಿಜ
  ಕಾಂತಿಯಿಂ ಖಂಡಿಸುವ
  ಸುಲಿಪಲ್ಲ ಸಾಲುಗಳ
  ಮೇಲಿಂದ ಲೀಲೆಮಿಗೆ-
  ಯೊಗೆತರ್ಪ ನಿರ್ಮಲದ
  ಬೆಳಕಿನಲೆಯಾಟಗಳ
  ಕೂಟದಿಂ ಶೋಭಿಸುವ
  ನಸುನಗೆಯ ಸೂಸುತಿಹ
  ಚೆಂದುಟಿಯ ಚಂದದಿಂ
  ತನಿವಣ್ಣ ತೊಂಡೆಯನು
  ಹಳಿವವಳೆ |
  ನಿಜ ಕರದಿ ವೀಣೆಯೊ-
  ಳ್ದಂಡವನು ತಳೆವವಳೆ || ೧ ||

  ಲಲಿತವಹ ನವಯೌವ-
  ನಾರಂಭವೆಂದೆಂಬ
  ಪೆರೆಯುದಯದಿಂ ಪೆರ್ಚಿ
  ಮೇರೆಯನು ಮೀರಿರ್ದ
  ಸೌಂದರ್ಯದಮೃತಾಬ್ಧಿ-
  ಯಿಂದೊಗೆದ ಶಂಖಮೋ
  ಎಂದೆನಲ್ ತೋರುತಿಹ
  ಸಿರಿಗೊರಲ ಪೊತ್ತಿಹಳೆ |
  ಸಾಧಕಗೆ ಬಿಜ್ಜೆಯನು
  ತೆತ್ತಿಹಳೆ |

  ಕೆತ್ತಿರ್ದ ರತ್ನಗಳ
  ಶೋಭೆಯಿಂ ಶೋಭಿಸುವ
  ಹಾರಾದಿ ಭೂಷಣಗ-
  ಳಿಂದೊಗೆದ ಕಾಂತಿಯಿಂ
  ಝಗಝಗಿಪ ಕುಂದಿಲ್ಲ-
  ದಂಗಗಳ ಮಂಗಳೆಯೆ |
  ಲೋಕೈಕ ಮಂಗಳೆಯೆ |

  ರತ್ನಗಳ ತೋಳ್ಬಳೆಯ
  ಕಾಂತಿಯೆಂಬೆಳದಳಿರು
  ಚಿಗುರಿರ್ದ ಬಾಹುಲತೆ-
  ಗಾಗಾರೆ |
  ಯೋಗಿಗಳಿಗಾಧಾರೆ |

  ಮೂಲೋಕದೊಳಗಿಡಿದ
  ಮಾಣಿಕದ ತೇಜದಿಂ
  ರಾಜಿಸುವ ಕೈಬಳೆಯ
  ಸಿಂಗಾರಿ |
  ಹೊಸಬೆಡಗ ಬಿಂಗಾರಿ |
  ಮುಂಜಾನೆ ಪೊಳ್ತಿನೊಳು
  ಬಾಯ್ದೆರೆದ ತಾವರೆಯ
  ಮಾರ್ಮಲೆವ ಕೈಗಳನು
  ಪೊಂದಿಹಳೆ |
  ಅನುದಿನವು ಕರುಣೆಯ-
  ನ್ನೊಂದಿಹಳೆ |
  ಅಸಮಾನದಿಂದಿಹಳೆ |

  ಕೆಚ್ಚನ್ನ ರತ್ನಗಳ
  ಕಿರಣಗಳ ತೆರೆಯೆಂಬ
  ಸಂಜೆಯಲಿ ಬೆರಲುಗಳ
  ಶಿಖರಗಳಿನೊಗೆತರ್ಪ
  ಚಂದಿರರೊ ಎಂದೆನಲ್
  ಸುಂದರದ ನಖಗಳಿಂ
  ಬಂಧುರೆಯೆ |
  ಚಿತ್ಪ್ರಭಾ ಮಂದಿರೆಯೆ |

  ನಕ್ಷತ್ರ ಮಾಲೆಗಳ
  ಲೀಲೆಯನ್ನೇಳಿಸುವ
  ಪಟಿಕಮಣಿ ಮಾಲೆಗಳ
  ಸಾಲಿನಿಂ ನಗುತೆಸೆವ
  ಕುಚಕುಂಭ ಭಾರದಿಂ
  ನಸುಬಾಗಿ ಬಳುಕುತಿಹ
  ಮಧ್ಯದೊಳ್ ವ್ಯಕ್ತತೆಯ-
  ನಾಂತಿರುವ ತಿವಳಿಗಳ
  ತೆರೆಗಳಿಂ ಗೋಚರಿಪ
  ಸೌಂದರ್ಯ ಸಾಗರೆಯೆ |
  ಕಿಂಕರರ ಸಂಪತ್ತಿ-
  ಗಾಗರೆಯೆ |

  ಸೌವರ್ಣ ಕುಂಭಗಳ
  ಜಂಭದಿಂ ಮುಂಬರಿದು
  ಶೋಭಿಸುವ ಕುಚಕುಂಭ
  ಭಾರದಿಂ ಬಳುಕುವಳೆ |
  ಕಾರುಣ್ಯ ರಸ ತುಂಬಿ
  ತುಳುಕುವಳೆ |
  ದುಂಡಗಿಹ ಹೊಕ್ಕುಳ ಸ-
  ರೋವರದ ತೀರದಲಿ
  ನೆಲೆಸಿರುವ ಹಾವಸೆಯ
  ಪಾಂಗಿನಿಂದೆಸೆವ ರೋ-
  ಮಾವಳೀ ಭೂಷಣೆಯೆ |
  ಸರಸ ಸಂಭಾಷಣೆಯೆ |

  ಒಳ್ನಡುವ ನಾವರಿಸು-
  ತೊಲಿದುಲಿವ ನೇವುರದಿ
  ನನೆವಿಲ್ಲ ಬಲ್ಲಹನ
  ಪೂವಿಲ್ಲ ಗೆಲ್ಲವನು
  ಮೆಟ್ಟಿಹಳೆ |
  ರತ್ನಗಳ ಬಟ್ಟೆಯ-
  ನ್ನುಟ್ಟಿಹಳೆ |

  ಪದ್ಮರಾಗದಿನೆಸೆವ
  ಮೇಖಲೆಯಿನೊಪ್ಪುತಿಹ
  ಜಘನಗಳ ಶೋಭೆಯಿಂ
  ಮೇರುವಿನ ಸಮತಲವ
  ಮೀರಿಹಳೆ |
  ಉನ್ನತದ ಮಹಿಮೆಯ-
  ನ್ನೇರಿಹಳೆ | || ೨ ||

  ಅರಳಿರ್ದ ಬಾಗೆ ಹೂ-
  ಗಳತೆರದಿ ಕೆಂಬಣ್ಣ-
  ದಿಂದೆಸೆಯುವುತ್ತಮ ದು-
  ಕೂಲದಿಂ ಮರೆಯಾದ
  ಸೌಂದರ್ಯದೂರುಗಳ
  ಶೋಭೆಯಿಂ ಸಿಂಧೂರ-
  ಮಂಬಳಿದು ಕೆಂಪೇರಿ-
  ದಿಂದ್ರನಾನೆಯ ಸೊಂಡ-
  ಲಿಗೆ ಮಸಿಯ ಬಳಿಯುವಳೆ |
  ವೈಭವದೆ ಮೆರೆಯುವಳೆ |

  ನುಣುಪಿನಿಂ ಮಿನುಗುತಿಹ
  ನೀಲೋತ್ಪಲಂಗಳಿಂ
  ಪೊಸೆದಂಗಜನ ಬತ್ತ-
  ಳಿಕೆಯೆಂಬ ಶಂಕೆಯ-
  ನ್ನೊದವಿಸುವ ಜಂಘೆಗಳಿ-
  ನೊಪ್ಪುವಳೆ |
  ಈರೇಳು ಭುವನಗಳ
  ಸುಂದರಿಯೆನಿಪ್ಪವಳೆ |

  ತಲೆವಾಗಿದಮರ ವಧು-
  ಗಳ ನೀಲ ಕುಂತಲದ
  ಕಾಂತಿಯೆಂಬೆಳಗರಿಕೆ-
  ಕುಡಿಗಳಿಂದರ್ಚನೆಯ
  ಕೈಕೊಂಡ ಕಾಲುಗುರ
  ಚಂದ್ರಿಕೆಯಿನವರನುರೆ
  ಹರಸಿದಳೆ |
  ಮನದೊಳಗೆ ಶಾಂತಿಯನು
  ಬರಿಸಿದಳೆ |

  ಇಂದ್ರಾಗ್ನಿ ಯಮ ವಾಯು
  ಮೊದಲಾದ ದಿಕ್ಕುಗಳ
  ಪಾಲಕರ ಮಕುಟಮಣಿ-
  ಯಿಂದೊಗೆಯುವೆಳವಿಸಿಲ
  ಕಾಂತಿಯಿಂ ಥಳ ಥಳಿಪ-
  ಲಕ್ತಿಕೆಯ ಕೆಂಪೇರಿ
  ಜವ್ವನದ ಹೊಸ ಹೊಗರ
  ಹೊನಲಿನಲಿ ತೇಲುವಡಿ-
  ದಾವರೆಯಿನೊಪ್ಪಿಹಳೆ |
  ದೇಹಾರ್ಧದಿಂ ಶಿವನ-
  ನಪ್ಪಿಹಳೆ | || ೩ ||

  ಝಗ ಝಗಿಪ ನವರತ್ನ
  ಪೀಠದಲಿ ಕುಳಿತಿಹಳೆ |

  ಮಣಿಮಯದ ತಾವರೆಯ
  ಮೇಲಿರುವ ರತ್ನ ಸಿಂ-
  ಹಾಸನದಲೆಸೆದಿಹಳೆ |
  ಶಂಖ ಪದ್ಮಗಳೆಂಬ
  ನಿಧಿಗಳಿಂ ಬಳಸಿಹಳೆ |

  ಅಲ್ಲಿ ವಿಘ್ನೇಶನಿಂ,
  ದುರ್ಗೆಯಿಂ, ವಟುಕನಿಂ,
  ಕ್ಷೇತ್ರಪಾಲಕನಿಂದ
  ಕೂಡಿಹಳೆ |

  ಮದಿಸಿರ್ದ ಮಾತಂಗ
  ಕನ್ನಿಕೆಗಳೊಡನಿಹಳೆ |
  ಮಂಜುಲಾ ಮೇನಕಾ-
  ದ್ಯಪ್ಸರ ಸ್ತ್ರೀಗಣದಿ
  ಪೂಜಿತಳೆ |

  ಅಷ್ಟ ಭೈರವರಿಂದ
  ಸೇವಿತಳೆ |
  ದೇವಿ | ವಾಮಾದಿಶ-
  ಕ್ತಿಗಳಿಂದ ಭಾವಿತಳೆ |

  ಯಕ್ಷ ಗಂಧರ್ವ ಸಿ-
  ದ್ಧಾಂಗನೆಗಳಿಂ ಸ್ತುತಳೆ |
  ರತಿಕಾಮರಿಂದ ಮಧು-
  ಮಾಸದಿಂ ಮಾನಿತಳೆ |

  ಭಕ್ತರಿಗೆ ಮುಕ್ತಿಯ-
  ನ್ನೀಯುವಳೆ |
  ವೇದ ವೇದಾಂತಗಳ
  ಜೀವಿಕೆಯೆ |
  ಯೋಗಿಗಳ ಮನದೊಳಗೆ
  ಹೊಳೆವವಳೆ |

  ಗಾನದ ವಿನೋದವೇ
  ಜೀವಾಳವಾಗಿರುವ
  ವೇಣುಗೋಪಾಲನಿಂ
  ಪೂಜಿತಳೆ |
  ನಿಶ್ಚಲಿತ ಭಕ್ತಿಯಿಂ-
  ದಜನಿಂದ ಹೊಗಳಿಕೆಯ-
  ನಾಂತವಳೆ |

  ವಿದ್ಯಾಧರಾಂಗನೆಗ-
  ಳಿಂ ಪಂಚ ವಾದ್ಯದಿಂ
  ಸಂಸ್ತುತಳೆ | || ೪ ||

  ಕಿವಿಗಳೊಳು ತನಿರಸವ
  ಸುರಿಯುತಿಹ ನಾದದಿಂ
  ಮೆರೆಯುತಿಹ ವೀಣೆಯಿಂ
  ಕಿನ್ನರರ ವೃಂದದಿಂ
  ವರ್ಣಿಸಲ್ಪಡುವವಳೆ |

  ಸರ್ವ ಸೌಭಾಗ್ಯವನು
  ಕೊಡುವ ಶಕ್ತಿಯನುಳ್ಳ
  ದೇವನಾರಿಯರಿಂದ
  ಪೂಜಿಸಲ್ಪಡುವವಳೆ |

  ಸರ್ವ ವಿದ್ಯೆಯನರಿತ
  ಚಟುಲ ಗಾದೆಯ ಕಲಿತ
  ಕೊರಲ ಬುಡದಲಿ ಬಲಿತ
  ವರ್ಣರೇಖೆಯನಾಂತ
  ನೀಲವರ್ಣದ ರೆಕ್ಕೆ
  ಬಾಗೆಯಂದದ ಕೊಕ್ಕು
  ಇವುಗಳನು ಧರಿಸಿರುವ
  ಗಿಳಿಯ ಲಾಲಿಸುವವಳೆ |

  ಕರಸರೋರುಹಗಳಿಂ
  ಸ್ಪಟಿಕಮಣಿ ಮಾಲೆಯನು
  ಸುಜ್ಞಾನ ಸಾರವಿಹ
  ಪುಸ್ತಕವನಂಕುಶವ
  ಪಾಶವನು ಧರಿಸಿರ್ದ
  ಮೂರ್ತಿಯನು ಚಿಂತಿಸುವ-
  ನಾವನೋ ;
  ಅವನ ಮುಖದೊಳಗಿಂದ
  ಗದ್ಯಗಳ ಪದ್ಯಗಳ
  ರೂಪಿನಿಂದೆಸೆಯುತಿಹ
  ಭಾರತಿಯು ಧುಮ್ಮಿಕ್ಕಿ
  ಹೊಮ್ಮುವಳು.

  ಯಾರಲಕ್ತಿಕೆಯಂತೆ
  ಕೆಂಬಣ್ಣದಿಂ ಮೆರೆವ
  ಮೂರ್ತಿಯನು ಭಾವಿಪನೊ ;
  ಅವನ ವಶವಾಗುವರು
  ಹೆಂಗುಸರು ಗಂಡುಸರು

  ಸ್ವರ್ಣ ವರ್ಣದ ನಿನ್ನ
  ತನುವನಾವನು ನೆನೆವ-
  ನವನು ಸಿರಿಗಳ ತೆರೆಯ
  ನಡುವಿನಲಿ ತೇಲುವನು.

  ಅರೆಯೊಡಲ ಶಿವನಿಂದ
  ಸಂಪೂರ್ಣಮಾಗಿರುವ
  ನೀಲವರ್ಣದ ನಿನ್ನ
  ಕೋಮಲದ ತನುಲತೆಯ
  ಜಾನಿಪಗೆ ದೊರಕದುದ-
  ದಾವುದೋ |
  ಅವನಿಗಾಡುವ ಕೊಳವು
  ವಾರಿಧಿಯು ;
  ಅವನಿಗಾಡುಂಬೊಲವು
  ನಂದನವು ;
  ಅವನ ವಶವಾಗಿಹಳು
  ಸರಸತಿಯು ;
  ಅವನೊಳೇ ನೆಲಸಿಹಳು
  ಹರಿಸತಿಯು.

  ತೀರ್ಥಗಳ ಮಂತ್ರಗಳ
  ತಂತ್ರಗಳ ಯಂತ್ರಗಳ
  ಮುದ್ರೆಗಳ ಶಕ್ತಿಗಳ
  ಚಕ್ರಗಳ ವರ್ಣಗಳ
  ಪೀಠಗಳ ತತ್ವಗಳ
  ವಿದ್ಯೆಗಳ ಯೋಗಗಳ
  ನಾದಗಳ ಶಬ್ದಗಳ
  ವಿಶ್ವದಳ ದೀಕ್ಷೆಗಳ
  ಸರ್ವಗಳ ರೂಪಿನಿಂ-
  ದೆಸೆಯುವಳೆ |
  ನನ್ನಂಬೆ ಜಗದಂಬೆ |
  ಪೊರೆ ನನ್ನ ಪೊರೆ ನನ್ನ
  ಪೊರೆ ನನ್ನನೆಲೆ ದೇವಿ |
  ನಿನಗೆರಗುವೆನು ದೇವಿ |
  ನಿನಗೆರಗುವೆನು ದೇವಿ |
  ನಿನಗೆರಗು-
  ತಿಹೆನು || ೫ ||

  Reply

 2. Posted by gk on February 1, 2012 at 4:40 am

  Can anyone give me the tamil font of tis shyamala Dhandakam sthothram please?

  Reply

 3. Posted by jinnu on September 1, 2010 at 3:27 am

  ನಮಸ್ಕಾರ ಮೀರ ಅವರೆ,

  ಶ್ಯಾಮಲಾ ದಂಡಕಮ್ ಸಂಗ್ರಹದಲ್ಲಿ ಇನ್ನೂ ಹೆಚ್ಚಿನ ಪದ್ಯಗಳಿವೆ. ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಆಯ್ದ ಪದ್ಯಗಳು ಮಾತ್ರವೇ ಇವೆ.

  ನನ್ನ ಬ್ಲಾಗಿನಲ್ಲಿ ಒಂದೊಂದಾಗಿ ಇವುಗಳ ವಿವರಣೆ ನೀಡುತ್ತಿದ್ದೇನೆ. ಬಿಡುವಿದ್ದಾಗ ನೋಡಿ. ಇಷ್ಟವಾಯಿತೇ ತಿಳಿಸಿ.

  Reply

 4. Posted by pramod on August 24, 2009 at 9:31 am

  hello meera ,

  please tell my thanks to Ms.Sneha for giving the lyrics of this beautiful song.

  Regards
  pramod

  Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: