Archive for November 22nd, 2012

Song on Kashi Vishwanatha

Ms. Bhavana Damle has sent the wonderful lyrics for Kashi Vishwanatha. Bhavana also mentions that the coming Monday is the last Monday on Karthika Masa and shreshta to worship Lord Shiva. So, attached below are the lyrics and audio. Thanks Bhavana.

ದೇವಕಾಶಿ ವಿಶ್ವೇಶ್ವರನ ಸೋಮವಾರದ ಅಭಿಷೇಕ
ಅನ್ನಪೂರ್ಣೆ ಅರಿಷಿನ ಕುಂಕುಮ ಸೇವೆ ನೋಡೋಣ ಬನ್ನಿ ||

ಹಾಲು ಮೊಸರು ಬೆಣ್ಣೆ ತುಪ್ಪ ಸಕ್ಕರೆಯು ಜೇನುತುಪ್ಪ
ಚೂತಾದ ದಾಳಿಂಬ ದ್ರಾಕ್ಷಿ ಫಲರಸಗಳು
ಖರ್ಜೂರ ಯಾಲಕ್ಕಿ ದ್ರಾಕ್ಷಿ ಕದಳಿ ಪಂಚಾಮೃತಗಳಿಂದ
ದೇವಾಧಿದೇವರಿಗೆ ಅಭಿಷೇಕ ಮಾಡಿ ನೋಡಬೇಕು ||೧||

ಹೂವಿನ ಪಲ್ಲಂಕಿಯೊಳಗೆ ಪಾರ್ವತಿಸಮೇತನಾಗಿ
ಶೃಂಗಾರದಿಂದ ಶಿವನು ಸವಾರಿ ಹೊರಟನು
ಅಲ್ಲಲ್ಲಿ ಫಲಪುಷ್ಪ ಭಕ್ತಜನರ ಭಜನೆಯಿಂದ
ಉತ್ಸಾಹದಿ ಬರುವ ಕಾಶಿ ವಿಶ್ವೇಶ್ವರನ ನೋಡಬೇಕು ||೨||

ಸಹಸ್ರಬಿಲ್ವೆ ತುಂಬೆಹೂವು ಪದ್ಮಪುಷ್ಪ ಪಾರಿಜಾತ
ಮರುಗ ಮಲ್ಲಿಗೆಯು ಜಾಜಿ ಸುರಗಿ ಸಂಪಿಗೆ
ಪರಿಪರಿಯ ವಿಧಾನದಿಂದ ಧೂಪದೀಪ ನೈವೇದ್ಯಾದಿ
ನೀಲಾಂಜನ ಮಂತ್ರಪುಷ್ಪ ಮಾಡಿ ಪೂಜೆ ನೋಡಬೇಕು ||೩||

ಬಾಲಗಂಗೆ ಎಂಬುವೋ ಕಿರೀಟ ರತ್ನಕುಂಡಲವು
ಜಾತಿಮುತ್ತು ರತ್ನ ಪಚ್ಚೆ ಹಾರ ಪದಕವು
ನೀಟಾದ ರಾಜ್ಯದಲ್ಲಿ ನೋಟದ ಸಿಂಗಾರವಾಗಿ
ನಂದಿವಾಹನವೇರಿ ಬರುವ ಸಾಂಬಮೂರ್ತಿ ನೋಡಬೇಕು ||೪||

ತಾಳಮದ್ದಳೆ ಮೇಲೆ ಮುರುಡಿ ಸೂಳೇರ ಮೇಳಗಳಿಂದ
ಹೊಳೆವ ಶಂಖ ಧ್ವನಿ ಚಕ್ರ ಛತ್ರಿಗಳಿಂದ
ಚೆಲುವು ಚಾಮರಗಳಿಂದ ಭಕ್ತಜನರ ಭಜನೆಯಿಂದ
ಉತ್ಸಾಹದಿ ಬರುವ ಕಾಶಿ ವಿಶ್ವೇಶ್ವರನ ನೋಡಬೇಕು ||೫||

ಪಂಚಲಿಂಗ ಸ್ತೋತ್ರವನ್ನು ಹೇಳಿಕೇಳಿದವರಿಗೆ
ಪಂಚಮಹಾಪಾತಕವು ಪರಿಹಾರವು
ಶ್ರೀ ಸಚ್ಚಿದಾನಂದನು ನಮ್ಮ ಹೃದಯದೊಳಗೆ ನೆಲಸಿರುವ
ಸಾಂಬಮೂರ್ತಿ ಕರುಣದಿಂದ ಸೇರ್ವರು ಕೈಲಾಸಪುರವ |
ಸೇರ್ವರು ಕೈವಲ್ಯಪುರವ ||೬||

dEvakaashi vishvEshvarana sOmavaarada abhiShEka
annapUrNe ariShina kuMkuma sEve nODONa banni ||

haalu mosaru beNNe tuppa sakkareyu jEnutuppa
chUtaada daaLiMba draakShi phalarasagaLu
kharjUra yaalakki draakShi kadaLi paMchaamRutagaLiMda
dEvAdhidEvarige abhiShEka maaDi nODabEku ||1||

hUvina pallaMkiyoLage paarvatisamEtanaagi
shRuMgaaradiMda shivanu savaari horaTanu
allalli phalapuShpa bhaktajanara bhajaneyiMda
utsaahadi baruva kaashi vishvEshvarana nODabEku ||2||

sahasrabilve tuMbehUvu padmapuShpa paarijaata
maruga malligeyu jaaji suragi saMpige
paripariya vidhaanadiMda dhUpadIpa naivEdyaadi
nIlaaMjana maMtrapuShpa maaDi pUje nODabEku ||3||

baalagaMge eMbuvO kirITa ratnakuMDalavu
jaatimuttu ratna pacce haara padakavu
nITaada raajyadalli nOTada siMgaaravaagi
naMdivaahanavEri baruva saaMbamUrti nODabEku ||4||

taaLamaddaLe mEle muruDi sULEra mELagaLiMda
hoLeva shaMkha dhvani chakra ChatrigaLiMda
cheluvu chaamaragaLiMda bhaktajanara bhajaneyiMda
utsaahadi baruva kaashi vishvEshvarana nODabEku ||5||

paMchaliMga stOtravannu hELikELidavarige
paMchamahaapaatakavu parihaaravu
shrI sachchidaanaMdanu namma hRudayadoLage nelasiruva
saaMbamUrti karuNadiMda sErvaru kailaasapurava |
sErvaru kaivalyapurava ||6||

%d bloggers like this: