Archive for January 3rd, 2013

ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ – Nodiri Raghavendrara Madiri Namaskara Lyrics

An amazing song on our beloved Rayaru. Below are the lyrics in Kannada and Baraha English.

Original Picture of Rayaru

ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ

ಬೇಡಿದ ಇಷ್ಟವರ ನೀಡುವರು ನಮ್ಮ ಯತಿವರ ಪ

ಮಂತ್ರಾಲಯದಲಿ ನಿಂತಿಹ, ಚಿಂತೆಗಳ ಪರಿಹರಿಸುವ

ಕಂತುಪಿತನನಂತಗುಣ ತನ್ನಂತರಂಗದಿ ಸ್ತುತಿಸುವ

ಇಂಥಾ ಯತಿಗಳ ಕಾಣೆ ಹರಿಯೇಕಾಂತ ಭಕ್ತರೆನಿಸಿಕೊಂಬುವ

ಮಂತ್ರಾಕ್ಷತೆ ಫಲ ನೀಡಿ ಸಂತಾನ ಸಂಪತ್ತು ಕೊಡುವರ || 1 ||

 

ಭೂತಪ್ರೇತ ಭಯಗಳ ವಾತಪಿತ್ತ ವ್ಯಾಧಿಗಳ

ಶ್ವೇತ ಕುಷ್ಠ ರೋಗಗಳ ಪಾತಕಿಯರ ಪಾಪಗಳ

ಪ್ರೀತಿಲಿಂದ ಕಳೆವರೊ ಪ್ರಖ್ಯಾತರಾಗಿ ಬೆಳೆವರೊ

ಭೂತಳದಿ ಸನ್ನಿಹಿತರಾದ ಸೀತಾಪತಿ ನಿಜದೂತರೆನಿಸೋರೊ || 2 ||

 

ಭಜಿಸೆ ಭಕ್ತರ ನೋಡುವ ಸದನಕೆ ಬಂದು ಕೂಡುವ

ಒದಗಿದಾಪತ್ತು ದೂಡುವ ಬಂದು ಮುದದಿ ತಾ ದಯಮಾಡುವ

ಅಜನಯ್ಯನ ಕೊಂಡಾಡುತ ತುಂಗಾನದಿಯತೀರ ವಾಸವಾಗಿ

ಹೃದಯದೊಳು ಭೀಮೇಶಕೃಷ್ಣನ ಪದವ ಭಜಿಸಿ ಪಡೆವರಾನಂದವ || 3 ||

 

nODiri rAghavEMdrara mADiri namaskAra
bEDida iShTavara nIDuvaru namma yativara pa
maMtrAlayadali niMtiha, ciMtegaLa pariharisuva
kaMtupitananaMtaguNa tannaMtaraMgadi stutisuva
iMthA yatigaLa kANe hariyEkAMta bhaktarenisikoMbuva
maMtrAkShate phala nIDi saMtAna saMpattu koDuvara || 1 ||

bhUtaprEta bhayagaLa vAtapitta vyAdhigaLa
SvEta kuShTha rOgagaLa pAtakiyara pApagaLa
prItiliMda kaLevaro prakhyAtarAgi beLevaro
bhUtaLadi sannihitarAda sItApati nijadUtarenisOro || 2 ||

bhajise bhaktara nODuva sadanake baMdu kUDuva
odagidApattu dUDuva baMdu mudadi tA dayamADuva
ajanayyana koMDADuta tuMgAnadiyatIra vAsavAgi
hRudayadoLu bhImESakRuShNana padava bhajisi
paDevarAnaMdava || 3 ||

ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ – Kori Karave Guru Shree Raghavendrane Lyrics

Thanks to Mr. Lakshman who tirelessly comments to every request to amazing lyrics. Attached below is the lyrics for ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ – Kori Karave Guru Shree Raghavendrane

rayaru

kOri kareve guru SreeraaghavEMdrane baaro maha prabhuve
chaaru charaNa yuga saari namipe bEga baaro hRudaya suja saara roopava tOri

elli nODalu hari alle kaaNuvaneMdu kShulla kaMbavanoDedu
nillade narahari chelvike tOrida pulla lOchana shishu prahallaadanaagi baaro

dOsha kaLedu siMhaasana Erida daasakulava poreda
Sreesha narchakanaagi poshisi hari mata vyaasatrayava gaidu vEsha kaLedu baaro

moorjaga maanita tEjo viraajita maajada maha mahima
OjigoLisi mati raajiva bodadi poojegeMdu guru raajaa roopadi baaro

maMtra sadanadolu saMta sujanarige saotoSha siri garedu
kaMtu pitana paada saMtata sEvipa shaaMta mooruti ennaMta raMgadi baaro

ee samayadi ennaase ninnoLu balu soosi hariyutihudO
koosige janani nirase goLisuvaLe dosha kaLedu viThalEsha hRUdaya baaro

 

ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ ಬಾರೊ ಮಹ ಪ್ರಭುವೆ

ಚಾರು ಚರಣ ಯುಗ ಸಾರಿ ನಮಿಪೆ ಬೇಗ ಬಾರೊ ಹೃದಯ ಸುಜ ಸಾರ ರೂಪವ ತೋರಿ

ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದು ಕ್ಷುಲ್ಲ ಕಂಬವನೊಡೆದು

ನಿಲ್ಲದೆ ನರಹರಿ ಚೆಲ್ವಿಕೆ ತೋರಿದ ಪುಲ್ಲ ಲೋಚನ ಶಿಶು ಪ್ರಹಲ್ಲಾದನಾಗಿ ಬಾರೊ

ದೋಶ ಕಳೆದು ಸಿಂಹಾಸನ ಏರಿದ ದಾಸಕುಲವ ಪೊರೆದ

ಶ್ರೀಶ ನರ್ಚಕನಾಗಿ ಪೊಶಿಸಿ ಹರಿ ಮತ ವ್ಯಾಸತ್ರಯವ ಗೈದು ವೇಶ ಕಳೆದು ಬಾರೊ

ಮೂರ್ಜಗ ಮಾನಿತ ತೇಜೊ ವಿರಾಜಿತ ಮಾಜದ ಮಹ ಮಹಿಮ

ಓಜಿಗೊಳಿಸಿ ಮತಿ ರಾಜಿವ ಬೊದದಿ ಪೂಜೆಗೆಂದು ಗುರು ರಾಜಾ ರೂಪದಿ ಬಾರೊ

ಮಂತ್ರ ಸದನದೊಲು ಸಂತ ಸುಜನರಿಗೆ ಸಒತೊಷ ಸಿರಿ ಗರೆದು

ಕಂತು ಪಿತನ ಪಾದ ಸಂತತ ಸೇವಿಪ ಶಾಂತ ಮೂರುತಿ ಎನ್ನಂತ ರಂಗದಿ ಬಾರೊ

ಈ ಸಮಯದಿ ಎನ್ನಾಸೆ ನಿನ್ನೊಳು ಬಲು ಸೂಸಿ ಹರಿಯುತಿಹುದೋ

ಕೂಸಿಗೆ ಜನನಿ ನಿರಸೆ ಗೊಳಿಸುವಳೆ ದೊಶ ಕಳೆದು ವಿಠಲೇಶ ಹೄದಯ ಬಾರೊ

.

%d bloggers like this: