Song on Holi – ಹೋಳಿಯ ಹುಣ್ಣಿಮೆ ಬಂದಿದೆ

Contributed by – Ms. Bhavana Damle.

ಹೋಳಿಯ ಹುಣ್ಣಿಮೆ ಬಂದಿದೆ
ಇದು ಬಣ್ಣದ ಕಣ್ಣನು ತಂದಿದೆ
ಜೀಕುಳಿ ಓಕುಳಿ ತಂದಿದೆ
ಇದು ಗೋಕುಲದ ಸವಿನೆನಪು ತಂದಿದೆ ||

ರಾಧೆಯ ರಂಗಿನ ಓಕುಳಿ
ಕೃಷ್ಣನ ಮಾಟದ ಜೀಕುಳಿ
ಸೊಕ್ಕಿದ ನವಿಲಿನ ನಾಚೇನು
ಕೊಳಲಿನ ನಾದದ ಗುಂಗೇನು ||

ಯಮುನೆಯು ತೂರಿದ ನೀರೇನು
ಗುಡ್ಡವನೆತ್ತಿಹ ಬೆರಳೇನು
ಪೂತನಿಯ ನುಂಗಿದ ಕೂಸೇನು
ಕಂಸನ ಕೊಂದಿಹ ಕೂಸೇನು ||

ಅನ್ಯರ ಉಳಿಸಲು ಕಾಮಣ್ಣ
ಜೀವದ ಓಕುಳಿ ಆಡಿದ
ಸತ್ತರು ಬದುಕಿದ ಕಾಮಣ್ಣ
ನಿತ್ಯವು ಬದುಕಿದ ಕಾಮಣ್ಣ ||

ಹೂಬಾಣ ಹೊಡೆದ ಕಾಮಣ್ಣ
ಹಾವಿನ ಹೆಡೆ ಹಿಡಿದ ಕಾಮಣ್ಣ
ಕಿಡಿಗಣ್ಣ ಕೆದರಿದ ಕಾಮಣ್ಣ
ಸಿಡಿಲಿಗೆ ಮುತ್ತಿಟ್ಟ ಕಾಮಣ್ಣ ||

ಉರಿಗಣ್ಣು ಉರಿಯಿತು ನೋಡಣ್ಣ
ಬೆಂಕಿಯ ಬೀಸಿತು ನೋಡಣ್ಣ
ಕಾಮನ ಸುಟ್ಟಿತು ಕೇಳಣ್ಣ
ಕಾಮನ ಕತೆಯಿದು ಕೇಳಣ್ಣ ||

ರತಿದೇವಿ ಅತ್ತಳು ಗೋಳಾಡಿ
ರತಿದೇವಿ ಸೋತಳು ಹಾಡ್ ಹಾಡಿ
ಶಿವದೇವಿ ಮರುಗಿದಳು ಮನದಲ್ಲಿ
ಶಿವದೇವ ತೆರೆದ ಒಳಗಣ್ಣು ||

hOLiya huNNime baMdide
idu baNNada kaNNanu taMdide
jIkuLi OkuLi taMdide
idu gOkulada savinenapu taMdide ||

rAdheya raMgina OkuLi
kRuShNana mATada jIkuLi
sokkida navilina nAchEnu
koLalina nAdada guMgEnu ||

yamuneyu tUrida nIrEnu
guDDavanettiha beraLEnu
pUtaniya nuMgida kUsEnu
kaMsana koMdiha kUsEnu ||

anyara uLisalu kAmaNNa
jIvada OkuLi ADida
sattaru badukida kAmaNNa
nityavu badukida kAmaNNa ||

hUbANa hoDeda kAmaNNa
hAvina heDe hiDida kAmaNNa
kiDigaNNa kedarida kAmaNNa
siDilige muttiTTa kAmaNNa ||

urigaNNu uriyitu nODaNNa
beMkiya bIsitu nODaNNa
kAmana suTTitu kELaNNa
kAmana kateyidu kELaNNa ||

ratidEvi attaLu gOLADi
ratidEvi sOtaLu hAD hADi
shivadEvi marugidaLu manadalli
shivadEva tereda oLagaNNu ||

http://www.kannadaaudio.com/Songs/Bhaavageethe/home/Rajahamsa.php – Listen in the great voice of Shri P. Kalinga Rao

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: