ಜಯ ಮಂಗಳಂ ನಿತ್ಯ ಶುಭ ಮಂಗಳಂ – JayaMangalam Nitya ShubhaMangalam Lyrics on Lord Krishna composed by Sree Vadiraja Thirtharu.
ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||
ವಸುದೇವ ತನಯನಿಗೆ ವೈಕುಂಠ ನಿಲಯನಿಗೆ |
ಕುಸುಮನಾಭನಿಗೆ ಕೋಮಲರೂಪಗೆ |
ಯಶೋದೆ ನಂದನಗೆ ವಸುಧೆಯ ರಮಣನಿಗೆ |
ನಸುನಗೆಯೊಳೊಪ್ಪುವ ನರಸಿಂಹಗೆ ||೧||
ಕನಕಕಿರೀಟನಿಗೆ ಕಸ್ತೂರಿ ತಿಲಕನಿಗೆ |
ಕನಕಕುಂಡಲನಿಗೆ ಕೌಸ್ತುಭಹಾರಗೆ |
ಕನಕಾಂಬರನಿಗೆ ಕಾರುಣ್ಯರೂಪನಿಗೆ |
ಸನಕಾದಿವಂದ್ಯನಿಗೆ ನರಸಿಂಹಗೆ ||೨||
ಪಂಕಜ ನಾಭನಿಗೆ ಪಾಂಚಾಲಿ ರಕ್ಷಕಗೆ |
ಲಂಕೆಯನು ವಿಭೀಷಣ ನಿಗಿತ್ತವಗೆ |
ಕುಂಕುಮಾಂಕಿತನಿಗೆ ಕುವಲಯ ನೇತ್ರನಿಗೆ |
ಬಿಂಕದಿಂದಲಿ ಮೆರೆವ ನರಸಿಂಹಗೆ ||೩||
ಪಕ್ಷಿವಾಹನನಿಗೆ ಪರಮಪಾವನನಿಗೆ |
ಕುಕ್ಷಿಯೊಳು ಜಗವನಿಂಬಿಟ್ಟವನಿಗೆ |
ಲಕ್ಷುಮೀ ಕಾಂತನಿಗೆ ಲಕ್ಷಣವಂತನಿಗೆ |
ಲಕ್ಷಣ ದೊಳೊಪ್ಪುವ ನರಸಿಂಹಗೆ ||೪||
ಭಕ್ತವತ್ಸಲನಿಗೆ ಭವದು:ಖದೂರನಿಗೆ |
ಮುಕ್ತಿದಾಯಕಗೆ ಚಿನ್ಮಯ ರೂಪಗೆ |
ಮಿತ್ರೆ ರುಕ್ಮಿಣಿಗೆ ಸತ್ಯಭಾಮೆ ಯರಸನಿಗೆ |
ನಿತ್ಯ ಕಲ್ಯಾಣ ಶ್ರೀಹಯವದನಗೆ ||೫||
And below in Baraha English. If you need this in any other language, download Baraha, copy the lyrics below and convert to any language you wish. As simple as that.
jaya maMgaLaM nitya SuBa maMgaLaM ||pa||
vasudEva tanayanige vaikuMTha nilayanige |
kusumanABanige kOmalarUpage |
yaSOde naMdanage vasudheya ramaNanige |
nasunageyoLoppuva narasiMhage ||1||
kanakakirITanige kastUri tilakanige |
kanakakuMDalanige kaustuBahArage |
kanakAMbaranige kAruNyarUpanige |
sanakAdivaMdyanige narasiMhage ||2||
paMkaja nABanige pAMcAli rakShakage |
laMkeyanu viBIShaNa nigittavage |
kuMkumAMkitanige kuvalaya nEtranige |
biMkadiMdali mereva narasiMhage ||3||
pakShivAhananige paramapAvananige |
kukShiyoLu jagavaniMbiTTavanige |
lakShumI kAMtanige lakShaNavaMtanige |
lakShaNa doLoppuva narasiMhage ||4||
Baktavatsalanige Bavadu:KadUranige |
muktidAyakage cinmaya rUpage |
mitre rukmiNige satyaBAme yarasanige |
nitya kalyANa SrIhayavadanage ||5||
Posted by Shantha on August 27, 2013 at 4:47 am
I thjink the composition is by the Great Vadirajaru because ends with hayavadana ankita Thanks a lot for the lirics at the right time.
Posted by meeraghu on August 27, 2013 at 7:32 am
Yes, that is what I have in the article.
Posted by Ramesh on August 26, 2013 at 9:28 pm
The photo is good. The composition is by Thyagaraja and it is Adi Tala and in Pallavi.