ಆಕಾಶದ ನೀಲಿಯಲ್ಲಿ – Aakashada neeliyalli (Bhavageethe)

Composer : Kannada Late G. S. Shivarudrappa

Contributor: Ms. Bhavana Damle

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ

ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ


And another song from the same composer.
One more song:

ಹೌದೇನೇ ಉಮಾ ಹೌದೇನೇ.
ಜನವೆನ್ನುವುದಿದು ನಿಜವೇನೇ ?-

ಮಸಣದ ಬೂದಿಯ ಮೈಗೆ ಬಳಿದು ಶಿವ
ಎಲ್ಲೆಲ್ಲೋ ತಿರುಗುವನಂತೆ !
ಹೊಟ್ಟೆ ಬಟ್ಟೆಗೂ ಗತಿಯಿಲ್ಲದರೊಲು
ಊರೂರಲು ತಿರಿದುಂಬುವನಂತೆ !
ನೀನು ಕೂಡ ಬಂಗಾರದ ಮೈಯಿಗೆ
ಆ ಬೂದಿಯನೇ ಬಳಿಯುವೆಯಂತೆ.

ನಿನ್ನ ತಾಯಿ ನಾನಾಗಿಹ ತಪ್ಪಿಗೆ
ಸಹಿಸಬೇಕೆ? ಅವಮಾನವನು?
ಮತ್ತೆ ನಿನ್ನ ಶಿವ ಕರೆಯಲು ಬರಲಿ
‘ಮನೆಯೊಳಿಲ್ಲ ಉಮೆ’- ಎನ್ನುವೆನು.

Advertisements

8 responses to this post.

 1. thanks for the lovely songs with video. Dr shivarudrappa’s songs are simple and meaningful.

  Reply

 2. Thanks for publishing the lyrics of Aakaashada Neeliyalli. Please keep publishing the lyrics of other songs of Dr GSS.

  Nimage nanna huthpoorvakavaada dhanyavaadagalu

  Reply

 3. Posted by kushal on November 15, 2014 at 12:45 am

  thank you for your lyrics mam

  Reply

 4. Posted by kushal on November 15, 2014 at 1:07 am

  publish lyrics of elli jarito manavu

  Reply

 5. thanks for very good song ilidu baa thayee ilidu baa

  Reply

 6. Posted by paramesha jh on June 29, 2015 at 12:33 am

  ಹೌದೇನೇ ಉಮಾ …? ಸುಂದರ ಗೀತೆ…..ಸುಂದರ ಗಾಯನ.

  Reply

 7. Posted by krismaly on June 29, 2015 at 8:49 am

  ಇವು ನನ್ನ ನೆಚ್ಚಿನಗೇತೆಗಳು
  ಸೌಮ್ಯವಾಗಿ ಸಮಾಧಾನವಾಗಿ ಕೇಳಬೇಕು ಮತ್ತು ಅದರ ಅರ್ಥ ತಿಳಿಯಬೇಕು ಆಗಲೇ ನಾವು ಗಾನ ಕೆಲಿದೆವೆನಿಸುತ್ತದೆ

  ಪ್ರಸರ ಮಾಡಿದ್ದಕ್ಕೆ ತುಂಬಾನೆ ಸಂತೋಷ ಮತ್ತು ಧನ್ಯವಾದಗಳು

  Reply

 8. Posted by adnan on August 10, 2017 at 10:01 am

  we need bhavartha of this poem

  Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: