Ranga Ninna Kondaduva – ರಂಗಾ ನಿನ್ನ ಕೊಂದಾಡುವ ಮಂಗಳಾತ್ಮರ

An amazing song taught to us by our parents. Not sure how I missed posting the lyrics for so many years. Anyway, composed by Sri Jagannatha Dasaru, the lyrics are in Kannada and Baraha English.

Take a look at the lyrics posted on dvaita.org as well here. http://www.dvaita.org/haridasa/song/19/254.html

ರಂಗಾ ನಿನ್ನ ಕೊಂಡಾಡುವ  ಮಂಗಳಾತ್ಮರ

ಸಂಗ ಸುಖವಿತ್ತು ಕಾಯೋ ಕರುಣಾಸಾಗರ

ಅರಿಯರೋ ನಿನ್ನಲ್ಲದೆ ಮತ್ತನ್ಯದೈವರ

ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ

ತೊರೆಯರೋ ನಿನಂಘ್ರಿಸೇವೆ ಪ್ರತಿವಾಸರ

ಅರಿಯರೋ ಪರತತ್ವವಲ್ಲದೆ ಇತರ ವಿಚಾರ

ಮೂಕಬಧಿರರಂತಿಪ್ಪರೋ ನೋಳ್ಪ ಜನಕೆ

ಕಾಕುಯುಕುತಿಗಳನು ತಾರರೋ ಮನಕೆ

ಸ್ವೇಕರಿಸರನರ್ಪಿತ ಒಂದು ಕಾಲಕೆ

ಆ ಕೈವಲ್ಯಭೋಗ ಸುಖ ಅವರಿಗೆ ಭೇಕೇ

ಜಯಾಜಯ ಲಾಭಾಲಾಭ ಮಾನಾಪಮಾನ

ಭಯಾಭಯ ಸುಖದುಃಖ ಲೋಷ್ಟ ಕಾಂಚನ

ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನ

ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ

ಈಶೇತವ್ಯರೆಂತಿಪ್ಪರೇಕಾಂತಭಕ್ತರು

ದೇಶ ಕಾಲೋಚಿತ ಧರ್ಮ ಕರ್ಮಾಸಕ್ತರು

ಆಶಾಕ್ರೋಧಲೋಭ ಮೋಹಪಾಶಮುಕ್ತರು

ಈ ಸುಜನರೇ ಶಾಪಾನುಗ್ರಹಸಕ್ತರು

ಕಂಡ ಕಂಡಲ್ಲಿ ವಿಶ್ವರೂಪಕಾಂಭರೂ

ಉಂಡು ಉಣಿಸಿದ್ದೆಲ್ಲಾ ನಿನ್ನ ಯಜ್ಞವೆಂಬರೂ

ಬಂಡುಣಿಯಂದದಿ ನಾಮಾಮೃತವ ಸವಿವರೂ

ಹೆಂಡರು ಮಕ್ಕಳು ನಿನ್ನ ತೊಂಡರೆಂಬರೋ

ಬಿಡರು ತಮ್ಮ ಸ್ವಧರ್ಮಗಳೇನು ಬಂದರು

ಬಡರು ದೈನ್ಯ ಒಬ್ಬರಿಗು ಲೋಕವಂದ್ಯರು

ಪಿಡಿಯರು ನಿನ್ನ ದ್ವೇಷಿಗಳಿಂದೇನು ಬಂದರು

ಕೊಡುವರು ಬೇಡಿದಿಷ್ಟಾರ್ಥ ನಿತ್ಯಾನಂದರು

ನಗುವರೋ ರೋದಿಸುವರೋ ನಾಟ್ಯವಾಡುವರೋ

ಬಗೆಯರೊ ಬಡತನ ಭಾಗ್ಯ ಭಾಗವತರು

ತೆಗೆಯರೊ ನಿನ್ನಲ್ಲಿ ಮನವನೊಮ್ಮೆಯಾದರೂ

ಜಗನ್ನಾಥವಿಠಲ ನಿನ್ನವರೇನು ಧನ್ಯರೋ

 

raMgA ninna koMDADuva maMgaLAtmara
saMga sukhavittu kAyO karuNAsAgara

ariyarO ninnallade mattanyadaivara
mareyarO nI mADida animittOpakAra
toreyarO ninaMghrisEve prativAsara
ariyarO paratatvavallade itara vichAra

mUkabadhiraraMtipparO nOLpa janake
kAkuyukutigaLanu tArarO manake
svEkarisaranarpita oMdu kAlake
A kaivalyabhOga sukha avarige bhEkE

jayAjaya lAbhAlAbha mAnApamAna
bhayAbhaya sukhaduHkha lOShTa kAMchana
priyApriya niMdAstutigaLanudina
shrIyarasa chiMtisuvarO ninna adhIna

IshEtavyareMtipparEkAMtabhaktaru
dEsha kAlOchita dharma karmAsaktaru
AshAkrOdhalObha mOhapAshamuktaru
I sujanarE shApAnugrahasaktaru

kaMDa kaMDalli vishvarUpakAMbharU
uMDu uNisiddellA ninna yaj~javeMbarU
baMDuNiyaMdadi nAmAmRutava savivarU
heMDaru makkaLu ninna toMDareMbarO

biDaru tamma svadharmagaLEnu baMdaru
baDaru dainya obbarigu lOkavaMdyaru
piDiyaru ninna dvEShigaLiMdEnu baMdaru
koDuvaru bEDidiShTArtha nityAnaMdaru

naguvarO rOdisuvarO nATyavADuvarO
bageyaro baDatana bhAgya bhAgavataru
tegeyaro ninnalli manavanommeyAdarU
jagannAthaviThala ninnavarEnu dhanyarO

 

6 responses to this post.

 1. ಹರಿಭಕ್ತರೇ,

  ರಂಗಾ ನಿನ್ನ ಕೊಂಡಾಡುವ not ರಂಗಾ ನಿನ್ನ ಕೊಂದಾಡುವ….ಗಡಿಬಿಡಿಯಲ್ಲಿ ತಪ್ಪಾಗಿ ಮುದ್ರೆಗೊಂಡಿರಬಹುದು…ಅದನ್ನು ದಯವಿಟ್ಟು ಸರಿಪಡಿಸಿರಿ..

  ಧನ್ಯವಾದಗಳೊಂದಿಗೆ ಪ್ರಸಾದ ಜೋಶಿ(ಕೂಲ್ ಪ್ರಸಾದ – FB)

  Reply

 2. Posted by raghumanvi on June 11, 2014 at 12:31 pm

  transliteration is not useful as explanation or annotation of the poem!

  Reply

 3. Posted by krismaly on June 11, 2014 at 12:10 pm

  Thanks for the Lyrics   You could display below link for video format of the song https://www.youtube.com/watch?v=cRYRcTyoHCw  

  Reply

 4. Posted by kishore on June 11, 2014 at 11:30 am

  any audio link?????

  Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: