
An amazing song on Lord Rama and Goddess Seetha. Lyrics provided by Ms. Shwetha.G.M. Thanks, Shwetha.
ಓಡೋಡಿ ಬನ್ನಿರೋ ರಾಮ ಶುಭ ಕಲ್ಯಾಣ
ರಾಮ ಶುಭ ಕಲ್ಯಾಣ, ನೋಡೋಣ ಬನ್ನಿರೋ॥ಪ॥
ಜನಕನ ಮಗಳ೦ತೆ ಹೆಸರು ಜಾನಕಿಯ೦ತೆ
ಜಗದೊಲಾಕೆಯ ಸಮರಿಲ್ಲವ೦ತೆ
ಶಿವ ಕೊಟ್ಟಾ ಧನುವ೦ತೆ ಪಣವಾಗಿಟ್ಟಿಹರ೦ತೆ
ಧನು ಮುರಿದ ವೀರನ್ನಾಕೆ ವರಿಸುವಳ೦ತೆ॥ಓಡೋಡಿ ಬನ್ನಿರೋ॥
ದೇಶ ದೇಶದಲ್ಲಿರುವ ಭುಮಿ ಪಾಲಕರೆಲ್ಲಾ
ಧನುವ ನೋಡುತ್ತಾ ಕೈ ಬೆರಳ ಕಚ್ಚುವರ೦ತೆ
ದಶರಥನ ಸುತನ೦ತೆ ಶ್ರೀ ರಾಮ ಹೆಸರ೦ತೆ
ಜಗದೊಳಗಾತನ ಸಮರಿಲ್ಲವ೦ತೆ॥ಓಡೋಡಿ ಬನ್ನಿರೋ॥
ಕೌಶಿಕ ಯಾಗ ರಕ್ಷಣೇ ಮಾಡುತ್ತಾ
ಶಿಲೇಯಾದ ಅಲ್ಯೆಯ ಸಲಹಿದನ೦ತೆ
ಸರಯು ನದಿಯ ದಾಟಿ ಮಿಥಿಲ ಪುರವ ಸೇರಿ
ನೆರೆದ ರಾಜೊರಳೆಲ್ಲಾ ರವಿಯ೦ತೆ ಹೊಳೆದನ೦ತೆ॥ಓಡೋಡಿ ಬನ್ನಿರೋ॥
ಇಟ್ಟ ಧನುವನಾತ ಥಟ್ಟನೆ ಮುರಿಯುತ್ತ
ದಿಟ್ಟ ರಾಜೊರಳ್ಳೆಲ್ಲಾ ಘಟ್ಟಿಯೆನಿಸಿದನ೦ತೆ
ಸುರರು ಸ೦ತಸ ತಳೆಯೆ ಅಸುರರ ಎದೆ ಬಿರಿಯೆ
ಆ ಶಿವ ಧನುವ ಆ ಕ್ಷಣವೇ ಮುರಿದನ೦ತೆ ॥ಓಡೋಡಿ ಬನ್ನಿರೋ॥
ದೇವ ದು೦ದುಭಿ ಮೊರೆಯೆ ಜಯ ವಾದ್ಯ ಭೊರ್ಗರೆಯೆ
ಜನಕ ರಾಜನು ಸ೦ತಸವ ತಾಳಿದನ೦ತೆ
ಜಾಜಿ ಸ೦ಪಿಗೆ ಪಾರಿಜಾತ ಮಲ್ಲಿಗೆ ಮೊಗ್ಗಿನ್
ಹಾರವ ಹಿಡಿದು ವೈಯಾರಿ ನಿ೦ತಿಹಳ೦ತೆ ॥ಓಡೋಡಿ ಬನ್ನಿರೋ॥
ಶ್ರ೦ಗಾರವಾಗಿಹ ರ೦ಗ ಮ೦ಟಪ ಇಳಿದು
ಮುಗಿಲ ಮಿ೦ಚಿನ೦ತೆ ಹೊಳೆಯುತ್ತ ಬ೦ದಳ೦ತೆ
ಲಾಜ ದಕ್ಷತೆ ವಿಪ್ರರಾಶೀರ್ವಚನಾದಿ
ರಾಮರ ಕೊರಳೊಳು ಹಾರ ಹಾಕುವಳ೦ತೆ ॥ಓಡೋಡಿ ಬನ್ನಿರೋ॥
ಸೀತೆ ಶ್ರೀ ಲಕ್ಷ್ಮಿ ಶ್ರೀ ರಾಮ ನಾರಾಯಣ
ಶ್ರೀ ಸೀತಾ ರಾಮರ ಲಗ್ನಕ್ಕೆ ಹೊಗುವ ಬನ್ನಿ
ಹಬ್ಬ ಮಾಡುವ ಬನ್ನಿ ಉಬ್ಬಿ ಕುಣಿಯುವ ಬನ್ನಿ
ಶ್ರೀ ರಾಮರ ಪದವ ಹೇಳುವ ಬನ್ನಿ ॥ಓಡೋಡಿ ಬನ್ನಿರೋ॥
English Version:
Ododi Banniro Rama Shubha Kalyana
Rama Shubha Kalyana Nodona Banniro ||P||
Janakana magalante hesaru Janakiyante
Jagadolagakeya Samarillavante
Shiva Kotta Dhanuvante Panavagittiharante
Dhanu murida veerannake olisuvalante ||Ododi banniro||
Desha deshadaliruva bhumi palakarella
Dhanuva nodutta kai berala kacchuvarante
Dasharathana sutanante Sri Rama Hesarante
Jagadolagatana Samarillavante ||Ododi banniro||
Koushika yaga rakshane madutta
Shileyadahalyeya salahidanante
Sarayu nadiya daati Mithilapurava seri
Nereda Rajorallella Raviyante holedanante ||Ododi banniro||
Itta dhanuvanata thattane muriyutha
Ditta rajorollella ghatti yenisidanante
Suraru santasa taleye asurara ede biriye
Aa shiva dhanava aa kshanave muridanante ||Ododi banniro||
Deva dundubhi moreye jaya jaya bhorgereye
Janaka rajanu santasava taalidanante
Jaji Sampige Paarijatha mallige moggina
Harava hididu vaiyyari nintihalante ||Ododi banniro||
Shrungaravagiha Ranga Mantapa ilidu
Mugila Minchinante Holeyutta bandalante
Laja Dakshate Viprarasheervachanadi
Ramara koralolu haara hakuvalante ||Ododi banniro||
Seete Sri Lakshmi Sri Rama Narayana
Sri Seeta Ramara lagnakke hoguva banni
Habba maduva banni ubbi kuniyuva banni
Sri Ramara padava heluva banni ||Ododi banniro||
Audio Link:
Video Link:
Email or Print this Post:
Like this:
Like Loading...
Recent Comments