Archive for July, 2015

ಇಟ್ಹಾಂಗೆ ಇರುವೆನೊ ಹರಿಯೇ – Ithange Iruveno Hariye Lyrics

Lord_Sreenivasa

An amazing lyrics contributed by Ms. Bhavana Damle. Thanks, Bhavana.

ರಚನೆ : ಶ್ರೀ ಶ್ರೀಪಾದರಾಜರು

ಇಟ್ಹಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ ||ಪ||
ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ ||ಅ.ಪ||

ಸಣ್ಣ ಶಾಲ್ಯೋದನ್ನ ಬೆಣ್ಣೆ ಕಾಸಿದ ತುಪ್ಪ
ಚಿನ್ನದ ಹರಿವಾಣದಲಿ ಭೋಜನ
ಘನ್ನಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ
ಕದನ್ನ ಕಾಣದೆ ಬಾಯ್ಬಿಡಿಸುವಿ ಹರಿಯೇ ||೧||

ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲು ಹೊದಿಸುವಿಯೋ
ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ
ಕಪರ್ದಕ ಕೌಪೀನವು ದೊರೆಯದೊ ಹರಿಯೇ ||೨||

ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರ
ಸಂಗವಿರಲಿ ದುಷ್ಟರ ಸಂಗ ಬ್ಯಾಡ
ಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿ
ಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ ||೩||

*******

iThAMge iruveno hariyE enna doreyE ||pa||
sRuShTivaMdita pAdapaduma SrIhariyE ||a.pa||

saNNa SAlyOdanna beNNe kAsida tuppa
cinnada harivANadali BOjana
Gannamahima ninna karuNa tappida myAle
kadanna kANade bAybiDisuvi hariyE ||1||

keMpili poLeva pItAMbara uDisuvi
soMpinaMcina SAlu hodisuviyO
kapilaharE ninna kRupeyu tappida myAle
kapardaka kaupInavu doreyado hariyE ||2||

gaMgAjanaka pAMDuraMga ninnaya Baktara
saMgavirali duShTara saMga byADa
aMganeyara kUDi anaMgabANake siluki
BaMgava paDalAre SrIraMgaviThala hariyE ||3||

https://www.youtube.com/watch?v=ezJsqwPUrJo

ಮರದ ಬಾಗಿಣ ಮತ್ತು ಮಹತ್ಬಗಳು – Importance of giving Maradha Bhagina

I have tried to translate as much as possible. If there any mistakes, please let me know.

Mr. Krismaly had commented here on the blog and left a message. It is a great article to recognize the significance and importance of giving ಮರದ ಬಾಗಿಣ Maradha Bhagina. I will try to translate this once I have some time.

I had posted an earlier article on what is included in the Marada Bhagina a while ago. See the link below.

OLYMPUS DIGITAL CAMERA

ಮರದ ಬಾಗಿಣ ಮತ್ತು ಮಹತ್ಬಗಳು… Importance of Maradga Bhagina and its significance
—————————————–
ಮರದ ಬಾಗಿಣ ಮತ್ತು ಮಹತ್ಬಗಳು..
ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು., Items to be put in the Bhagina.
೧. ಅರಿಸಿನ : ಗೌರಿದೇವೀ. Turmeric : Gowri Devi
೨. ಕುಂಕುಮ : ಮಹಾಲಕ್ಷ್ಮೀ Kumkum : Maha Lakshmi
೩. ಸಿಂಧೂರ : ಸರಸ್ವತೀ Sindoor : Saraswathi
೪. ಕನ್ನಡಿ : ರೂಪಲಕ್ಷ್ಮೀ. Mirror : Roopa Lakshmi
೫. ಬಾಚಣಿಗೆ : ಶೃಂಗಾರಲಕ್ಷ್ಮೀ. Comb: Sringara Lakshmi
೬. ಕಾಡಿಗೆ : ಲಜ್ಜಾಲಕ್ಷ್ಮೀ. : Kajal : Lajja Lakshmi
೭. ಅಕ್ಕಿ : ಶ್ರೀ ಲಕ್ಷ್ಮೀ. Rice : Shree Lakshmi
೮. ತೊಗರಿಬೇಳೆ : ವರಲಕ್ಷ್ಮೀ. Toor Dal : Vara Lakshmi
೯. ಉದ್ದಿನಬೇಳೆ : ಸಿದ್ದಲಕ್ಷ್ಮೀ. Urda Dal : Siddha Lakshmi
೧೦. ತೆಂಗಿನಕಾಯಿ : ಸಂತಾನಲಕ್ಷ್ಮೀ. Coconut: Santana Lakshmi
೧೧. ವೀಳ್ಯದ ಎಲೆ : ಧನಲಕ್ಷ್ಮೀ. Bettel Leaves : Dhana Lakshmi
೧೨. ಅಡಿಕೆ : ಇಷ್ಟಲಕ್ಷ್ಮೀ. Bettel Nut – Issta Lakshmi
೧೩. ಫಲ(ಹಣ್ಣು) : ಜ್ಞಾನಲಕ್ಷ್ಮೀ. Fruit – Gyana Lakshmi
೧೪. ಬೆಲ್ಲ : ರಸಲಕ್ಷ್ಮೀ. Jaggery : Rasa Lakshmi
೧೫. ವಸ್ತ್ರ : ವಸ್ತ್ರಲಕ್ಷ್ಮೀ. Cloth : Vasthra Lakshmi
೧೬. ಹೆಸರುಬೇಳೆ : ವಿದ್ಯಾಲಕ್ಷ್ಮೀ. Moong dal : Vidhya Lakshmi
ಮುತೈದೆ ದೇವತೆಯರು೧೬ ಜನರು. ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..

Married woman are equal to 16 people.They call them Shoda Lakshmi.
ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..

Gowri, Padhma, Shuchi, Medha, Savitiri, Vijaya, Jaya, Devasena, Saha, Mataraloka, Matara, Shanthi, Pruthvi, Druthi, Tushti, Swadhadevi.
ಸೀರೆ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ..

Goddess Lakshmi resides in the saree pallu, and that;s why you should hold the pallu and give the Bhagina.
ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಕರೆಯುತ್ತಾರೆ..

Maradha Bhagina is called as Venu Patra in Sanskrit.
ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..

Lord Narayana resides in Maradha Bhagina.
ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ..

Since the Maradha Bhagina symbolizes Lord Narayan and Lakshmi Devi, it is given to married women so they can live a happy married life like Lord Narayan and Lakshmi Devi, and is given to 16 married women.
ಈ ೧೬ ದೇವತೆಗಳು ನಿತ್ಯಸುಮಂಗಲಿಯರು..

The 16 Goddesses are Nitya Sumangalis.
ಈ ೧೬ ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು..

Given the Maradha Bhagina so that the 16 Goddesses will protect you from any difficulty, any sorrow.
ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..
೧೬ ಅರಿಸಿನ ದಾರ, ೧೬ ಗಂಟುಗಳು, ೧೬ ಬಾಗಿನ, ೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ..
ದಾನಗಳು ಮತ್ತು ಫಲಗಳು..
೧. ಅರಿಸಿನ ದಾನ : ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

By giving Turmeric as Dhana, it will help relieve any disease. It will help women live as married women.
೨. ಕುಂಕುಮ ದಾನ : ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..

By giving Kukkum, it will help increase the belief on God. Help cure eye sight.
೩. ಸಿಂಧೂರ ದಾನ ; ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

By giving Sindhoor, it will help cure diseases, misunderstanding between husband and wife, and any misunderstanding between any relatives.
ಶುಭವಾಗಲಿ..

Sri Moola Rama Pooja @ Kumbakonam

Sri Sri Subudendra Theertha Sripadangalavara Moola Rama Devaru Pooja Video at Kumbakonam. Take a look, and get the blessings of our beloved Rayaru and Moola Rama Devaru.

%d bloggers like this: