Composer : Sree Prasanna Venkatesha Dasaru
Contributed by : Sri. Canchi Ravi.
ತಪ್ಪುಗಳೆಲ್ಲ ಪರಿಹರಿಸುವ ನಮ್ಮಪ್ಪನಲ್ಲವೇ ನೀನು || (ಪ.)
ಒಪ್ಪಿದ ಬಳಿಕ ಅವಗುಣವೆಣಿಸದೆ ತಿಮ್ಮಪ್ಪ ಸಲಹೋ ನೀನು (ಅ. ಪ.)
ಬೆಳಗಿನ ಝಾವದಿ ಹರಿ ನಿಮ್ಮ ಸ್ಮರಣೆಯ ಹಲುಬಿಕೊಳ್ಳದ ತಪ್ಪು
ಮಲಮೂತ್ರ ವಿಸರ್ಜನೆ ಮೃತ್ತ್ರಿಕೆಯಲಿ ನಾ ಮಲಿನವ ತೊಳೆಯದ ತಪ್ಪು
ತುಳಸಿ ಗೋ ವೃಂದಾವನ ಸೇವೆಗೆ ನಾ ಆಲಸ್ಯವ ಮಾಡಿದ ತಪ್ಪು
ನಳಿನ ಸಖೋದಯಗರ್ಘ್ಯವ ನೀಡದ ಕಲಿವ್ಯಾಸಂಗದ ತಪ್ಪು || 1 ||
ಅನುದಿನ ವ್ರತ ನೇಮಗಳನು ಮಾಡದ ತನುವಂಚನೆಯ ತಪ್ಪು
ಕ್ಷಣಲವ ಹರಿಗುಣ ಜಿಜ್ಞಾಸಿಲ್ಲದ ಮನವಂಚೆನಯ ತಪ್ಪು
ಮುನಿಸುರಭೂಸುರ ರಾರಾಧಿಸದ ಧನ ವಂಚನೆಯ ತಪ್ಪು
ವನಜಾಕ್ಷನೆ ನಿನ್ನ ಪಾದ ವಿಮುಖ ದುರ್ಜನ ಸಂಸರ್ಗದ ತಪ್ಪು || 2 ||
ಕಣ್ಣಿಲಿ ಕೃಷ್ಣಾಕ್ರುತಿ ನೋಡದೆ ಪರ ಹೆಣ್ಣಿನ ನೋಡುವ ತಪ್ಪು
ನಿನ್ನ ಕಥಾಮೃತ ಕೇಳದೆ ಹರಟೆಯ ಮನ್ನಿಸುವ ಕಿವಿ ತಪ್ಪು
ಅನ್ನವ ನಿನಗರ್ಪಿಸದ ಜ್ಞಾನದಿ ಉಣ್ಣುವ ನಾಲಿಗೆ ತಪ್ಪು
ಚಿನ್ಮಯ ಚರಣಕ್ಕೆರಗದೆ ಇಹ ಉನ್ಮತ್ತರ ನಮಿಸುವ ಶಿರ ತಪ್ಪು || 3 ||
ಆನಂದದಿ ಸತ್ಕೀರ್ತನೆ ಮಾಡದೆ ಹೀನ ವಿವಾದದ ತಪ್ಪು
ಶ್ರೀನಾಥಾರ್ಚನೆ ಅಲ್ಲದೆ ನಾನಾ ಊಳಿಗ ಮಾಡುವ ಕರ ತಪ್ಪು
ಶ್ರೀನಿರ್ಮಾಲ್ಯದಿ ವಿರಹಿತ ಸುರಭಿಯ ಘ್ರಾಣಿಪ ನಾಸಿಕ ತಪ್ಪು
ಶ್ರೀನಾರಾಯಣ ಯಾತ್ರೆಯ ಮಾಡದ ನಾ ನಡೆಯುವ ಪಾದದ ತಪ್ಪು || 4 ||
ಯಜ್ಞಾತ್ಮಗೆ ಯಜ್ಞರ್ಪಿಸದೆ ಕಾಮಾಗ್ನಿಯೊಳ್ಹೋರುವ ತನು ತಪ್ಪು
ಅಜ್ಞಾನಜ್ಞಾನದಿ ಕ್ಷಣಲವ ಶತವೆಗ್ಗಳ ಗಳಿಸುವ ಮನಸಿನ ತಪ್ಪು
ಯಜ್ಞದಿ ಕರ್ಮವ ಶೌಚವ ಹರಿದು ಸಮಗ್ರ ಗುಹ್ಯದ ಕೃತಿ ತಪ್ಪು
ಯಜ್ಞೇಶ್ವರ ಪ್ರಸನ್ನವೀಂಕಟ ಕೃಫ್ಣನ ನಾಮಾಗ್ನಿಗೆ ಭವತೃಣ ತಪ್ಪು || 5 ||
tappugaLella pariharisuva nammappanallavE neenu || (pa.)
oppida baLika avaguNaveNisade timmappa salahO neenu || (a. pa.)
BeLagina jhaavadi hari nimma smaraneya halubikoLLada tappu
Malamutravisarjane mruttikeyali naa malinava toLeyada tappu
Tulasi gO vrindavana sEvege naa Alasyava maaDida tappu
naLinasakhOdayagarghyava neeDada kalivyAsangada tappu || 1 ||
Anudina vrata nEmagaLanu maaDada tanuvanchaneya tappu
Kshanalava HariguNa jijnAseyillada manavanchaneya tappu
MunisurabhoosurarAdhisada dhana vanchaneya tappu
Vanajakshajane ninna paada durjana samsargada tappu || 2 ||
KaNNili Krishnakruti nODade para heNNina nODuva tappu
Ninna kathAmruta kElade haraTeya mannisuva kivi tappu
Annava ninagarpisada jyanadi uNNuva nAlige tappu
Chinmaya charaNekkeragade iha unmattara namisuva Sira tappuu || 3 ||
Anandadi satkeertane maaDade heena vivAdada tappu
SreenathArchane illade naanaa ooLiga mAduva kara tappu
Sreenirmalyadi virahita surabhiya ghrANisupa nAsika tappu
Sreenarayana yaatreya maaDada naa naDeyuva paadada tappu || 4 ||
YagjnAtmage yagjnarpisade kaamaagniyoLhOruva tanu tappu
AgjnAna gjnAnadi kshaNa lavaveggaLagaLisuva manasina tappu
Yagjnadi karmava shouchava haridu samagra guhyada Sruti tappu
Yagjneswara prasanna venkatakrishnana naamaagnige bhavatruNa tappu || 5 ||
Email or Print this Post:
Like this:
Like Loading...
Recent Comments