
Moola Rama Devrau – Courtesy SRSMUTT.org
The below song on Sri Ramadevaru is written by Sri Khadri Narahari which is full of tough words. Contributed by Sri. Canchi Ravi for the occasion of Rama Navami. Thanks Sir for all your service to this blog.
ರಾಮನಿಂಥಾ ಚೆಲುವನಮ್ಮಯ್ಯ
ಸೀತಾ ರಾಮನಿಂಥಾ ಚೆಲುವನಮ್ಮಯ್ಯ || (ಪ.)
ರಾಮ ಜಗದಭಿರಾಮ ದುರಿತವಿ
ರಾಮ ಸದ್ಗುಣಧಾಮ ತಾರಕ ನಾಮ ಮೇಘಶ್ಯಾಮ ಶ್ರೀ ರಘುರಾಮ || (ಅ. ಪ.)
ನೀಲಮಣಿಗಳ ಸಾಲಕುಂತಲ | ಜಾಲ ನೋಡಲು ಬಾಲಚಂದ್ರನ |
ಪೋಲುತಿರುವುದು ಫಾಲಭಾಗ ವಿಶಾಲ ಕಮಲಾಕ್ಷಿ |
ಭೂಲತೆಯಿಂದ್ರ ಕಾರ್ಮುಕವು | ಸೋಗೆಗಂಗಳ ಢಾಳಿಗಳು ಪುಂಡರೀಕವು | ಕೂರ್ಮಸಮ
ಕಪೋಲ ಚಂಪಕನಾಸಿಕವು | – ಲಾಲಿತ ಮುಕ್ತಾ ಫಲಗಳ |
ಸೋಲಿಸುವುದು ರದನಂಗಳ ಚೆಂದವು |
ಲಾಲಿಪ ಚೆಂದುಟಿ ನವಕುರುವಿಂದವು |
ಮೇಲಹ ನುಡಿಗಳು ವರಮಕರಂದವು
ಬಾಲಕಿ ನಸುನಗೆ ಬಹುತರ ಮಂದವು || ೧.
ಮೀರಿ ಬರೆದಡೆ ಬಾರದಿರುತಿಹ | ಕೋರೆಮೀಸೆಯು ಚಾರಚಬುಕವು |
ದಾರವಹ ಶ್ರೀ ಕಾರಕರ್ಣಗ-ಳೀ ರಮಾ ರಮಣಿ |
ವಾರಿಜಾರಿಯೇ ವದನವು-ವಕ್ತ್ರವನು ವಿ
ಚಾರಿಸೆ ಕರ್ಪೂರ ಸದನವು – ಶಂಖದಿಂದದಿ ತೋರುವ ಕಂಠವು ತುಳಸೀ
ಹಾರದಿಂದ ಶೋಭಿತವು ||
ಭೂರಿಸುಬಾಹುಗಳು ಕರಿಕರಂಗಳು
ನೇರಜಗಳ ನಿಂದಿಸುವ ಕರಂಗಳು
ವಾರಿಜಮುಖರೇಖಾ ಜಾಲಂಗಳು
ಶ್ರೀರಂಜಿತ ಕರತಲಾವಾಸಂಗಳು || ೨.
ಫೀನವೃಕ್ಷವು ಮಾನಿತತ್ರಿವ | ಳೀನಿಬಿದದುದರಾನುಯುತ ನಾ
ಭೀನಳಿನ ಸೂಕ್ಷ್ಮಾನುಸರ ಕಟಿ-ಯಾನೃಪಗಮ್ಮ |
ಶ್ರೀನುತರಂಭಾ ಸ್ತಂಭಗಳು-ತೊಡೆಗಳ ಸ |
ಮಾನ ಜಾನು ಜಂಘೆಗಳು – ಭದ್ರರೇಖೆಗಳು |
ಮಾನಸ ಸಂಭವನುಪಮಾನಗಳು – ಎಲ್ಲವ ವರ್ಣಿಪೊಡೆ |
ದೀನಜನಾವನ ಸುಗುಣ ತರಂಗನು
ಮೌನೀಂದ್ರಾ ಕೃತಿಯುಳ್ಳ ಶುಭಾಂಗನು
ಏನೆಂಬೆನು ಬಹು ಕರುಣಾಪಾಂಗನು
ಮಾನಿನಿ ಶ್ರೀಮತ್ಖಾದ್ರಿ ನೃಸಿಂಗನು || ೩.
ooooooo
Posted by ನರಸಿಂಹ ಮೂರ್ತಿ. on July 26, 2019 at 10:51 am
ಪ್ರಪಂಚದ ಬೇರಾವ ಧರ್ಮದಲ್ಲಿ ತೋರುವುದಿಂಥ ಭಗವಂತನ ವರ್ಣನೆ?
ದೇಶವೆಂದರೆ ಭಾರತ, ಧರ್ಮವೆಂದರೆ ಹಿಂದೂ ಧರ್ಮ
ಆಚರಣೆಯೆಂದರೆ ಅದು ಸನಾತನ ಆಚರಣೆ.
Posted by Anil Rao on April 14, 2016 at 11:54 pm
Superb,Thanks a lot
Posted by Canchi Ravi on April 13, 2016 at 12:21 pm
Yes, the error is regretted.
Posted by BADARIPRASAD on April 13, 2016 at 12:48 am
This composition is from Hanumadvilasa written by khadri narahari not by Sri Vadirajaru. Please note.
Posted by BADARIPRASAD on April 13, 2016 at 12:46 am
This is written by khadri narahari in hanumadvilasa Kavya which is a wonderful composition. He has written kuchelopakyana and kaliyamardana. Ramanintha cheluvanammayya is not written by Sri vadirajaru. Please note.
Posted by meeraghu on April 13, 2016 at 8:37 am
Thanks, will update the same.