On December 29, 2012 Ms. Chaitra asked about this song, and neelpai posted the lyrics on December 31, 2012. I heard about the song today on our Swamigalu. I had tears as I was listening to song and watching our Swamigalu.
And here is the lyrics for the same. Hope to convert into English also soon.
ರಚನೆ : ಶ್ರೀ ಕನಕ ದಾಸರು
ದಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ,
ಎಂದಿಗಾದರೊಂದು ದಿನ ಸಾವು ತಪ್ಪದ್ದೊ ,
ಎಂದಿಗಾದರೊಂದು ದಿನ ಸಾವು ತಪ್ಪದ್ದೊ
ಹುಟ್ಟುತ್ತೇನೆ ತರಲಿಲ್ಲ ,ಸಾಯುತೇನು ಒಯ್ಯಲಿಲ್ಲ
ಸುಟ್ಟು ಸುಟ್ಟು ಸುಣ್ಣದಗಳು ಆಯಿತೀ ದೇಹ.
ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು
ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣರೋ
ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರ
ಅರ್ಥಕ್ಕಾಗಿ ಆಸೆ ಪಟ್ಟು ನ್ಯಾಯ ಮಾಡ್ವರೋ
ಬಿಟ್ಟಿ ಬೆಳೆಸು ತನ್ನದೆಂದು ವ್ಯರ್ಥ ಚಿಂತೆಯನ್ನು ಮಾಡಿ
ಸತ್ತು ಹೋದ ಮೇಲೆ ಅರ್ಥ ಯಾರಿಗಾಗುದೋ.
ಹೆಣ್ಣು ಹೊನ್ನು ಮಣ್ಣು ಮೂರು ತನ್ನಲಿದ್ದೂ ಉಣ್ಣಲಿಲ್ಲ
ಅಣ್ಣ ತಮ್ಮ ತಾಯಿ ತಂದೆ ಬಯಸಲಾಗದೊ
ಅನ್ನಾ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ
ಮಣ್ಣು ಪಾಲು ಆದ ಮೇಲೆ ಯಾರಿಗಾಗುದೋ
ಬೆಳ್ಳಿ ಬಂಗಾರಿಟ್ತುಕೊಂಡು ಒಳ್ಳೇ ವಸ್ತ್ರ ಹೊದ್ದುಕೊಂಡು
ಚಳ್ಳ್ ಪಿಳ್ಳ್ ಗೊಂಬೆಯಂತೆ ಆಗಿ ಹೋದೆನೇ
ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ
ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ
ವಾರ್ತೆ ಕೀರ್ತಿ ಎಂಬೋ ಎರಡು ಸತ್ತ ಮೇಲೆ ಬಂದವಯ್ಯ
ವಸ್ತು ಪ್ರಾಣ ನಾಯಕನು ಹ್ಯಾಂಗೆ ದೊರಕುವನೋ
ಕರ್ತೃ ಕಾಗಿನೆಲೆಯಾದಿ ಕೇಶವನ ಚರಣ ಕಮಲ
ನಿತ್ಯದಲಿ ಭಜಿಸಿ ಸುಖೀಯಾಗಿ ಬಾಳೇಲೋ
ಸುಖೀಯಾಗಿ ಬಾಳೇಲೋ
And here is the link from youtube if the one on Facebook doesn’t work for you.
Recent Comments