I had posted the lyrics for this song in 2008, I sang this during our virtual zoom satsangha last week and noted the tune found on youtube was quite different than what Mom & Dad taught us. So, recorded the audio and posted on youtube and the lyrics below.
ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ನಿನ ಭಕ್ತರಾಣೆ || Pa||
ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಹೋದರೆ ನಿನಗೆ ಆಣೆ || 1 ||
ತನುಮನ ಧನದಲ್ಲಿ ವ೦ಚಕನಾದರೆ ಎನಗೆ ಆಣೆ ರಂಗ
ಮನಸ್ಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ || 2 ||
ಕಾಕು ಮನುಜರ ಸ೦ಗವ ಮಾಡಿದರೆ ಎನಗೆ ಆಣೆ ರಂಗ
ಲೌಕೀಕವ ನಿ ಬಿಡಿಸದಿದ್ದರೆ ನಿನಗೆ ಆಣೆ || 3 ||
ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ || 4 ||
ಹರಿನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೋಲಿಯದಿದ್ದರೆ ನಿನಗೆ ಆಣೆ || 5 ||
Enagū āṇe raṅga ninagū āṇe
enagū ninagū ibbarigū Nina bhaktarāṇe || Pa||
ninna biṭṭu an’yara bhajisidarenage āṇe raṅga
enna nī kai biṭṭu hōdare ninage āṇe II1II
tanumana dhanadalli va0cakanādare enage āṇe raṅga
manas’su ninnali nilisadiddare ninage āṇe II2II
kāku manujara sa0gava māḍidare enage āṇe raṅga
laukīkava ni biḍisadiddare ninage āṇe II3II
śiṣṭara saṅgava māḍadiddare enage āṇe raṅga
duṣṭara saṅgava biḍisadiddare ninage āṇe II4II
harininnāśraya māḍadiddare enage āṇe raṅga
purandaraviṭhala nīnōliyadiddare ninage āṇe II5II
Recent Comments