Avataratraya Suladi Composed by Shree Raghavendra Swamy

Avataratraya Suladi ಅವತಾರತ್ರಯ ಸುಳಾದಿ was first published in Parimala magazine in 1955 and in Tatawada Manjari in its 1983 edition. It was a surprise to me to know that it was composed by Shree Raghavendra Swamy. The only other Kannada song written by Rayaru is Indu Enage Govinda. And this is the second one written by Rayaru in Kannada.

Suladi ಸುಳಾದಿ in Kannada means sulabhada hAdi ಸುಲಭದ ಹಾದಿ – an easy route to invoke the blessings of Shri Hari-Vayu-Guru’s and to reach Shri Hari’s abode. Singing one suladi is equivalent to singing 100 devaru namas. By the way, the suladi is yet another combination of music and  poetry fused harmoniously as an incantation to God.

Avataratraya Suladi or Maruta Ninnaya is the only Suladhi that Raghavendra Swamy composed and it is on Maruti or Hanuman. Hence, Raghavendra Swamy or Rayaru named it as Maruta Ninnaya Mahime.

This is a much lesser known song than Indu Ennage Govinda. The Kannada lyrics for this suladi on Hanuman is as follows. Rayaru wrote under the pen name or ankita Venugopala ವೇಣುಗೋಪಾಲ.

ಮರುತನಿನ್ನಯ ಮಹಿಮೆ ಪರಿಪರಿಯಿಂದ ತಿಳಿದು |
ಚರಿಸಿದ ಮನುಜನಿಗೆ ದುರಿತ ಬಾಧೆ ಗಳ್ಯಾಕೆ |
ಸರಸಿಜಾಸನ ಸಮ ಶಿರಿದೇವಿ ಗುರುವೆಂದು |
ಪರತತ್ತ್ವಹರಿಯೆನುತ ನಿರುತ ವಂದಿಸಿ ಅಖಿಲ |
ಭರಿತ ನಾಗಿಪ್ಪೆ ಜಗದಿ ಅರಸಿ ಭಾರತಿ ಸಹಿತ |
ಹೊರಗಿದ್ದ ನವಾರ್ಣವ ದೊಳಗೆ ಜೀವರ ಬೀಜ|
ಸರಿಬಂದ ವ್ಯಾಪಾರದಿ ಆಡಿಸುವೆ ಜಡ ಜೀವರನು |
ಪುರಹರ ಮೊದಲಾಗಿ ತೃಣ ಜೀವ ಕಡೆಯಾಗಿ|
ಅರಿಯರು ಒಂದು ಕಾರ್ಯ ಗುರುವೆ ನಿನ್ನಯ ಹೊರತು |
ಹೊರಗೆ ಗೊಂಬೆಗಳ ತೋರಿ ಒಳಗೆ ಥರಥರದಿ ನೀನು|
ಇರುವೆ ಸರ್ವರಿಗೆ  ಆಧಾರ ರೂಪದಿ  ಅತಿ |
ಸ್ಥಿರ  ಭಕುತಿಯಿಂದ ಹರಿಯ ಧೇನಿಸುತ |
ಮಿರುಗುವ ಪ್ರಭೆ ನಿನ್ನದು ವದರುವ ಧ್ವನಿ ನಿನ್ನದು |
ಬರುವ ಹೋಗುವ ವ್ಯಾಪಾರ ನಿನ್ನದು ದೇವ |
ಭರದಿ ಶರಧಿ ಶಯನ ಶಿರಿವೇಣು ಗೋಪಾಲ ರೇಯ |
ಪರಮ ಹರುಷದಿ ಲೀಲಾ ತೋರುವ ನಿನ್ನೊಳಿದ್ದು ||೧||

ಅಖಿಲಾಗಮ ವೇದ್ಯ ಅಖಿಲಾಗಮ ಸ್ತುತ್ಯ |
ಅಖಿಲಾಗಮ ನಿಗಮ ವ್ಯಾಪುತ ದೇವನೆ |
ಅಖಿಲರೊಳಗೆ ನಿಂದೆ ಸಕಲ ಕಾರ್ಯಗಳೆಲ್ಲ |
ಅಕುಟಿಲ ನಿನ್ನಾಗಿ ಮಾಡಿಸಿ ಮೋದದಿಂದ |
ಯುಕುತಿಯಿಂದ ಜಗವ ಅತಿಶಯವ ತಿಳಿದು |
ಲಕುಮಿಯನು ನೀನು ಕಾಣುವೆ ಸರ್ವದಾ |
ಭಕುತರೊಳಗೆ ನಿನ್ನ ತುತಿಸ ಬಲ್ಲವರಾರು |
ಭಕುತಿ ಗಭಿಮಾನಿ ಭಾರತಿ ಗಳವಲ್ಲ |
ಭೃಕುಟಿ ವಂದಿತ ನೀನು ವೇಣುಗೋಪಾಲನ |
ಪ್ರಕಟದಿ ಬಲ್ಲದ್ದು ಅರಿಯರು ಉಳಿದದ್ದು ||೨||

ಪೃಥ್ವಿ ಶಬ್ದದಿ ಭೂತ ಮಾತ್ರಾ ಪರಿಮಾಣುಗಳಲ್ಲಿ  |
ಪ್ರತಿ ಪ್ರತಿ ರೂಪನಾಗಿ ಇರುತಿಪ್ಪೆ ಮಡದಿ ಸಹಿತ ಪ್ರಾ |
ಕೃತ ವಿಡಿದು ಸಕಲ ವ್ಯಾಪ್ತಿ ತಾತ್ವಿಕರಲ್ಲಿ ವ್ಯಾಪಾರ |
ನಿನ್ನದಯ್ಯ ಲೋಕ ವಂದಿತ ದೇವ |
ಶಾತ ಕುಂಭದಿಯಿಂದ ಬೊಮ್ಮಾಂಡವು ತಾಳ |
ನಿನಗೆ ಎಣೆಯೆನುತ ತೋರುವುದಯ್ಯ ಶ್ರೀ |
ಕಾಂತನಾದ ಶಿರಿ ವೇಣುಗೋಪಾಲನ |
ಪ್ರೀತಿಯಿಂದಲೆ ನಿನಗೆ ಒಲಿದ ಅಧಿಕನಾಗಿ ||೩||

ಇರುತಿ ಎಲ್ಲ ಜಗದ ಆಧಾರಕನಾಗಿ  |
ಇರುತಿದ್ದು ಧಾರುಣಿಯೊಳಗೆ  |
ಮೂರು ಅವತಾರಗಳು ಧರಿಸಿ |
ಕ್ರೂರರ ಸದೆದದ್ದು ಮೀರಿದ ಕಾರ್ಯವೆ |
ಮೇರು ನುಂಗುವವನಿಗೆ ಒಂದು ಚೂರು ನುಂಗಲು |
ಶೂರತನವು ಏನೋ ಆರು ಬಣ್ಣುಪರೋ ವಿ|
ಚಾರಿಸಿ ನಿನ್ನನು ನಾರಾಯಣ ಕೃಷ್ಣ ವೇಣುಗೋಪಾಲನಾ|
ಆಧಾರದಿಂದಲಿ ಸೇವೆ ಬಾರಿ ಬಾರಿಗೆ ಮಾಳ್ಪೆ ||೪||

ಒಂದು ಅವತಾರದಲಿ ಕೊಂದೆ ರಕ್ಕಸರ ಮತ್ತೊಂದು ಅವತಾರದಿ ಅಸುರವೃಂದ ಘಾತಿಸಿದೆ |
ನಂದ ತೀರಥ ರೂಪದಿಂದ ಸಕಲರಂದ ವಚನಗಳ ಕಡಿದು |
ನಂದದಲ್ಲಿ ಮೆರೆದೆ ತಂದೆ ಈ ಕೃತಿಗಳನು

ನಿನ್ನಿಂದಾದದ್ದು ನೋಡಿ ಮಂದರೋದ್ಧಾರ ಸುಖಿಸುವ ಸಪುತ ದ್ವೀಪ |
ಸಿಂಧು ಸಪುತ ಏಕದಿಂದ ಹಾರುವನು |
ಮುಂದಿದ್ದ ಕಾಲಿವೆಯ ನಿಂದು ನಿಂದು ತಾ ದಾಟಿದಂತೆ

ಮಂದಮತಿಗಳು ಮನಕೆ ಏನೆಂದೆ ಎಲೋ ದೇವ |
ಸುಂದರಾಂಗನೆ ಸುಖದಿಂದ ಪೂರಿತ ವಾಯು

ನಂದನ ಹನುಮ ರಾಮನಿಂದಾಲಿಂಗನ  ಪಡೆದ |
ಬಂದು ವಂದಿಸಿದ ಗೋಪಿಕಂದಗೆ ಭೀಮ |
ನಂದಮಾರುತಿ ವ್ಯಾಸನಿಂದ ತತ್ತ್ವಗಳೆಲ್ಲ |
ಅಂದದಿ ಓದುವ ಅಮರೇಂದ್ರ ವಂದಿತ ಮಧ್ವ |
ತಂದೆ ಎನ್ನ ಬಿನ್ನಹ ಒಂದು ಲಾಲಿಸುವದು |
ಪೊಂದಿ ಭೂಪತಿಯ ಮನದಿಚ್ಚೆ ಬೇಡಿದಂತೆ |
ಇಂದು ಬೇಡುವೆ ಮನದಿಂದ ವಂದನೆ ಮಾಡುವೆ |
ಕುಂದದೆ ಎನ್ನೊಳಿಪ್ಪ ಮಂದಮತಿ ಕಳೆವಾದೆಂದು |
ಇಂದೀವರಾಕ್ಷ ಹೃದಯಮಂದರಿದೊಳು ನಿನ್ನ |
ಅಂದವಾದ ರೂಪ ಇಂದು ತೋರುವದೆನೆಗೆ |
ಸಿಂಧು ಶಯನ ಶಿರಿ ವೇಣುಗೋಪಾಲನು |
ನಿಂದ ನಿನ್ನೊ ಲೀಲಾ ಒಂದೊಂದು ಮಾಳ್ಪ ಚಿತ್ರ ||೫||

ಪವನ ನಿನ್ನಯ ಪಾದ ಪೊಂದಿದ ಮನುಜನು|
ಜವನ ಪುರಕ್ಕೆ ಸಲ್ಲ ವೇಣುಗೋಪಾಲನು ಬಲ್ಲ ||೬||

P.S: Post and lyrics credit B.S Ramesh ( My brother’s blog)

Picture Credit : SBAT Temple Maryland, Hanuman.

And here is a link shared by V.Gopal for the audio recording on Soundcloud. Thanks Gopal Avare.

11 responses to this post.

 1. Hi, http://www.patwari.org, which does tremendous Rayara Seve, published this Rayara Avataratraya suLaadi many years ago including info about 1983 & 1955 magazines. Please give credit to that website and explicitly specify the link to patwari.org. Thank you.

  Reply

 2. Posted by Archana on February 17, 2021 at 2:19 am

  thanks a lot mam… can u pls post the same in english… thank you.

  Reply

 3. Posted by Shanthi Sethuraman on February 16, 2021 at 4:23 am

  Thanks for sharing the our Guru Ragvendra composed lyrics, I could not read Kannadam/Telugu, So I felt enjoyed the information regarding the song. Om Sri Ragvendraya Namga.

  Reply

  • Posted by meeraghu on February 16, 2021 at 8:40 am

   I didn’t have time to translate. If someone from the extended family can translate that would be awesome.

   Reply

 4. Posted by Janavi M on February 16, 2021 at 12:55 am

  Hi, Thanks. But can you please provide the lyrics in English. i am from Tamilnadu. I’m not able to read kannada.

  Reply

  • Posted by meeraghu on February 16, 2021 at 8:40 am

   I didn’t have time to translate. If someone from the extended family can translate that would be awesome.

   Reply

 5. Posted by V. Gopal on February 15, 2021 at 7:43 pm

  Madam,

  Thanks a lot for posting this. I have been trying to get any rendering of this suladi, scored for music. I have not succeeded. It will be nice if you have the musical rendering of this suladi. Else, we will contact some musicians to do it and post.

  This comes under a category called ‘thaala malika’, very similar to ragha maalika. So, we need to get hold of a percussion player.

  Reply

  • Posted by meeraghu on February 15, 2021 at 7:46 pm

   I have not heard any audio for this, please get it recorded by a musician. That would be awesome.

   Reply

   • Posted by V. Gopal on February 15, 2021 at 7:49 pm

    Thanks a lot for the prompt response. I will start thinking and working on it.

   • Posted by meeraghu on February 15, 2021 at 7:53 pm

    wonderful, I am trying to just recite it like any Stotra, if we have a recording that would be best to learn the Suladi. Thanks a million.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: