
An amazing song on Shree Vyasa Rajaru composed by Shri Vidya Prasanna Tirtha. And today is Shree Vyasa Rajara Aaradhane.
ಜಯ ಜಯ ವೈಷ್ಣವ ಪಯೊನಿಧಿ ಚಂದ್ರಗೆ
ಜಯ ಜಯ ವ್ಯಾಸ ಯತೀಂದ್ರರಿಗೆ ||pa||
ಜಯ ಜಯ ವರ ಕರ್ನಾಟಕ ಪತಿಗೆ
ಜಯ ಸಿಂಹಾಸನ ವೇರಿದಗೆ ||apa||
ನಾಲ್ಕು ಶಾಸ್ತ್ರಂಗಳ ಪಾರಂಗತರಿಗೆ
ಕಾಕು ಮತಗಳನು ತುಳಿದವಗೆ
ಆ ಕಮಲಾಪತಿ ಭಕುತ ವರೇಣ್ಯಗೆ
ಶ್ರೀಕರ ಚಂದ್ರಿಕಾಚಾರ್ಯರಿಗೆ ||1||
ಹನುಮನ ಭಾಷ್ಯವ ಅಣಿಮಾಡಿದಗೆ
ಹನುಮಗೆ ಭವನಗಳ್ ಕಟ್ಟಿದಗೆ
ಹನುಮನ ಯಂತ್ರದಿ ಬಿಗಿದಪ್ಪಿದಗೆ
ಮುನಿತ್ರಯದಲಿ ಸೇರಿದ ದೊರೆಗೆ ||2||
ಮಾಯ ವಾದಿಗಳನು ಗೆಲಿದವಗೆ
ಸ್ವೀಯ ಮಥವ ಸ್ಥಾಪಿಸಿದವಗೆ
ನ್ಯಾಯಾಮೃತ ಧಾರೆಯ ಅಭಿಷೇಕದಿ
ಆ ಯದುಪತಿಯನು ಕುಣಿಸಿದಗೆ ||3||
ಚಕ್ರ ಧರನ ಸುಳುಗಳ ತಿಲಿದವಗೆ
ಮಿಕ್ಕ ಮತಗಳನು ಅಳಿದವಗೆ
ವಕ್ರ ಯುಕುತಿಗಳ ತುಕ್ಕುಡ ಗೈಯುವ
ತರ್ಕ ತಾಂಡವದಿ ನಲಿದವಗೆ ||4||
ಕೃಷ್ಣ ದೇವ ರಾಯನ ಕುಲ ಪತಿಗೆ
ಕಷ್ಟದ ಕುಹ ಯೋಗವ ಕೊಂದವಗೆ
ಶಿಷ್ಟ ಜನಗಳಿಗೆ ಇಷ್ಟಾರ್ಥಗಳನು
ವೃಷ್ಟಿಯ ಗೈವ ಪ್ರಸನ್ನರಿಗೆ ||5||
jaya jaya vaishnava payonidhi chandrage
jaya jaya vyaasa yateendrarige ||a||
jaya jaya vara karnataka patige
jaya simhaasana veridage ||pa||
naalku shsstrangaLa paarangatarige
kaaku matagalanu tulidavage
aa kamalApati bhakuta varenyage
shrikara chandrikachaaryarige ||1||
hanumana bhaashyava animaadidage
hanumage bhavanagal kattidage
hanumana yantradi bigidappidage
munitrayadali serida dorege ||2||
maaya vaadigalanu gelidavage
sveeya mathava sthaapisidavage
nyayamruta dhaareya abhishekadi
aa yadupatiyanu kunisidage ||3||
chakra dharana sulugaLa tilidavage
mikka matagalanu alidavage
vakra yukutigala tukkuda gaiyuva
tarka taandavadi nalidavage ||4||
krishna deva raayana kula patige
kashtada kuha yogava kondavage
shishta janagalige ishtaarthagalanu
vrushtiya gaiva prasannarige ||5||
Recent Comments