
ನೀ ಕರುಣಿಸೋ ವಿಠಲ ನಮ್ಮ ಸಾಕೊ ಪಂಡರಿ ವಿಠಲ || pa||
ವಿಠಲ ವಿಠಲ ಪಾಂಡುರಂಗ ಜೈ ಜೈ ವಿಠಲ ಪಾಂಡುರಂಗ
ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಠಲ
ಸಾಸಿವೆಯಷ್ಟು ಭಕುತಿಯನರಿಯೇನೋ ಶೇಷ ಶಯನ ಹರಿ ವಿಠಲ ||1||
ಭವಸಾಗರದೊಳು ಮುಳುಗುವೆ ಸುಮ್ಮನೆ ಅವಲೋಕಿಸುವರೇ ವಿಠಲ
ನವ ನವ ವಿಷಯಕೆ ಹಿಗ್ಗುತಲಿಹ ಮನದವಸರ ಕಾಯೋ ವಿಠಲ ||2||
ನಿಶಿದಿನ ಅಶನ ವಸನಕೆ ಹೆಣಗುವೆ ಹುಸಿ ಸಂಗ್ರಹಿಸಿದೆ ವಿಠಲ
ನಿಷೇಧ ಮಾಯಾ ಇಲ್ಲವೋ ನರಕದ ಗಸಣೆಗೆ ಅಂಜುವೆ ವಿಠಲ ||3||
ಜಾವಕೇ ಮಾಡುವೆ ಸಾವಿರ ತಪ್ಪನು ಕಾಯೋ ದಯಾಂಬುಧಿ ವಿಠಲ
ಶ್ರೀವರ ಪ್ರಸನ್ನ ವೆಂಕಟ ವಿಠಲ ಜೀವಕೆ ಹೊಣೆ ನೀ ವಿಠಲ ||4||
nee karuNisO viThala namma saakO pandari viThala ||pa||
viThala viThala panduranga jai jai viThala panduranga
dOShigaLoLage hiriyanu naa nirdOShigalarasanE viThala
saasiveyaShTu bhakutiyanariyenO shESha shayana hari viThala ||1||
BhavasaagaradoLu muLuguve summane avalOkisuvare viThala
nava nava viShayake higgutaliha manadavasara kaayO viThala ||2||
nishidina ashana vasanake heNaguve husi saMgrahiside viThala
niShEdha maayaa illavO narakada gasaNege aMjuve viThala ||3||
Jaa ke maaDuve saavira tappanu kaayO dayaMbudhi viThala
shreevara prasanna vEMkaTa viThala jeevake hone nee viThala ||4||
Recent Comments