This Shiva Stuti is composed by Shree Kanaka Dasaru
ಶಿವ ಶಿವ ಶಿವ ಎನ್ನಿರೊ
ಮೂಜಗದವರೆಲ್ಲ ಶಿವ ಶಿವ ಶಿವ ಎನ್ನಿರೊ ||pa||
ಆಗಮ ಸಿದ್ಧಾಂತ ಮೂಲದ ಜಪವಿದು ಶಿವ ಶಿವ ಶಿವ ಎನ್ನಿರೋ
ನಿಮ್ ಮರೋಗದ ಮೂಲವ ಕೆಡಿಪ ಔಷಧವಿದು ಶಿವ ಶಿವ ಶಿವ ಎನ್ನಿರೊ ||a.pa||
ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವ ಶಿವ ಶಿವ ಎನ್ನಿರೋ
ನಿಮ್ ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವ ಶಿವ ಶಿವ ಎನ್ನಿರೊ || 1 ||
ಅಪರಾಧದ ಕೋಟೆ ತ್ಯಜಿಸಬೇಕಾದರೆ ಶಿವ ಶಿವ ಶಿವ ಎನ್ನಿರೋ
ಮುಂದೆ ಉಪಮಿತರೋರ್ಮಿತರರಿಯದ ಜಪವಿದು ಶಿವ ಶಿವ ಶಿವ ಎನ್ನಿರೊ || 2 ||
ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವ ಶಿವ ಶಿವ ಎನ್ನಿರೋ
ನಿಜ ಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವ ಶಿವ ಶಿವ ಎನ್ನಿರೊ || 3 ||
ಭುವನಕೆ ಬಲ್ಲಿದರಾಗಬೇಕಾದರೆ ಶಿವ ಶಿವ ಶಿವ ಎನ್ನಿರೋ
ನೀವು ಭವನ ಪದವಿಯನು ಪಡೆಯಬೇಕಾದರೆ ಶಿವ ಶಿವ ಶಿವ ಎನ್ನಿರೊ || 4 ||
ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವ ಶಿವ ಶಿವ ಎನ್ನಿರೋ
ಮುಂದೆ ಪರಮಾತ್ಮನ ನೀವು ತಿಳಿಯಬೇಕಾದರೆ ಶಿವ ಶಿವ ಶಿವ ಎನ್ನಿರೊ || 5 ||
ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವ ಶಿವ ಶಿವ ಎನ್ನಿರೋ
ನೀವು ತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವ ಶಿವ ಶಿವ ಎನ್ನಿರೊ || 6 ||
Siva siva siva enniro mujagadavarella siva siva siva enniro ||pa||
agama sid’dhanta mulada japavidu siva siva siva enniro nim marogada mulava kedipa ausadhavidu siva siva siva enniro ||a.Pa||
manuja janmadi hutti maimaredirabedi siva siva siva enniro nim matanumana pranava vyarthava madade siva siva siva enniro || 1 ||
aparadhada kote tyajisabekadare siva siva siva enniro munde upamitarormitarariyada japavidu siva siva siva enniro || 2 ||
javana badheya nivu jayisabekadare siva siva siva enniro nija savimala muktiya padeyabekadare siva siva siva enniro || 3 ||
bhuvanake ballidaragabekadare siva siva siva enniro nivu bhavana padaviyanu padeyabekadare siva siva siva enniro || 4 ||
gurulinga jangamava ariyabekadare siva siva siva enniro munde paramatmana nivu tiliyabekadare siva siva siva enniro || 5 ||
prthvige sadguru agabekadare siva siva siva enniro nivu tattvapati adikesavana kudabekadare siva siva siva enniro || 6 ||
Recent Comments