Mangala Slokas at Shri Krishna Vrundavana, North Carolina

Like I mentioned in my previous posts, we visit the temple twice or thrice a week here in North Carolina. Thursday’s for the evening Bhajane 100% we have been all 4 weeks. We also visit the temple Saturday’s after our visit to the Venkateshwara temple.

On Thursday’s after reciting Rayaru Stotra, Mangalashtaka, Jaya Jaya Veeve, at the end they recite Managala Slokas. Thought of posting so if you are doing Bhajane you can recite it as well at the end.

As always Lyrics in Kannada followed by in English. I will also post a video soon.

ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ ||pa||

ಅಕ್ರೂರಗೊಲಿದ ತ್ರಿವಿಕ್ರಮಗೆ

ನಕ್ರನ ಗೆಲಿದ ಪರಾಕ್ರಮಿಗೆ

ಶಕ್ರನ ಗರ್ವ ಪಹಾರವ ಮಾಡಿದ

ಶುಕ್ರನ ಶಿಷ್ಯನ ಗೆಲಿದವಗೆ ||1||

ಗಂಗೆಯ ಪಡೆದ ಶ್ರೀರಂಗನಿಗೆ

ರಂಗುಮಾಣಿಕದುಂಗುರದವಗೆ

ಭೃಂಗಕುಂತಳೆಯರ ವ್ರತವನೆ ಕೆಡಿಸಿದ

ಅಂಗಜನಯ್ಯ ಶುಭಾಂಗನಿಗೆ ||2||

ಧರೆಯೊಳಧಿಕ ವೆಂಕಟಾಚಲಗೆ

ಸ್ಥಿರವಾಗಿ ಪುಷ್ಕರಿಣಿಲಿ ನೆಲಸಿಹಗೆ

ಪರತತ್ವ ಶ್ರೀಪುರಂದರವಿಠಲಗೆ

ವರವೆಂಕಟೇಶ ಶ್ರೀನಿವಾಸಗೆ ||3||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್‌

ಕರೋಮಿ ಯದ್ಯತ್‌ ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ ||

ಹಗಲು ನಿನ್ನ ನೆನೆಯಲಿಲ್ಲ ಹಸಿವೆ ತೃಷೆಯಿಂದ


ಇರುಳು ನಿನ್ನ ನೆನೆಯಲಿಲ್ಲ ನಿದ್ರೆಯ ಭರದಿಂದ


ಇವೆರಡರ ಭಾಧೆಗೆ ನಾ ಒಳಗಾದೆನೋ ಪುರಂದರ ವಿಠಲ

ಕರುಣಿಸಿ ಕಾಯೋ ಪುರಂದರ ವಿಠಲ||

ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ

ಇಂದಿನ ದಿನವೇ ಶುಭ ದಿನವೂ |

ಇಂದಿನ ವಾರ ಶುಭ ವಾರ |

ಇಂದಿನ ತಾರೆ ಶುಭ ತಾರೆ |

ಇಂದಿನ ತಾರೆ ಶುಭ ತಾರೆ |

ಇಂದಿನ ಕರಣ ಶುಭ ಕರಣ |

ಇಂದಿನ ಲಗ್ನ ಶುಭ ಲಗ್ನ |

ಇಂದು ಶ್ರೀ ಪುರುಂದರ ವಿಠಲರಾಯನ ಪಾಡಿದ ದಿನವೇ ಶುಭ ದಿನವೂ ||

ಶುಭವಿದು ಶೋಭನಾ ಹರಿಗೆ |

ಶುಭವಿದು ಶೋಭನಾ ಸಿರಿಗೆ |

ಶುಭವಿದು ಪುರಂದರ ವಿಠ್ಠಲ ರಾಯಗೆ |

ಶುಭವಿದು ಶೋಭನಾ ಹರಿಗೆ |

ಶುಭವಿದು ಪುರಂದರ ವಿಠ್ಠಲ ರಾಯಗೆ |

ಶುಭವಿದು ಶೋಭನಾ ಸಿರಿಗೆ ||

Maṅgaḷaṁ jayamaṅgaḷaṁ maṅgaḷaṁ śubhamaṅgaḷaṁ ||pa||

akrūragolida trivikramage


nakrana gelida parākramige


śakrana garvapahārava māḍida


śukrana śiṣyana gelidavage ||1||

gaṅgeya paḍeda śrīraṅganige


raṅgumāṇikaduṅguradavage


bhr̥ṅgakuntaḷeyara vratavane keḍisida


aṅgajanayya śubhāṅganige ||2||

dhareyoḷadhika veṅkaṭācalage


sthiravāgi puṣkariṇili nelasihage


paratatva śrīpurandaraviṭhalage


varaveṅkaṭēśa śrīnivāsage ||3|| 

kāyēna vācā manasēndriyairvā budhyātmanā vā prakr̥tēḥ svabhāvāt‌ ।
karōmi yadyat‌ sakalaṁ parasmai nārāyaṇāyēti samarpayāmi ||

Hagalu ninna neneyalilla hasive thrusheyinda


Irulu ninna neneyalilla nidreya bharadinda


Iveradara bhaadhege naa olagaadeno purandaravitala


Karunisi kayo purandara vitala||

Indina dinave shubha dinavu |
Indina vaara shubha vaara |
Indina taare shubha taare |
Indina yoga shubha yoga |
Indina karana shubha karana |
Indina lagna shubha lagna |
Indu shree purundara vittalaraayana |
Paadida dinave shubha dinavu |

Shubhavidu shobhana harige |
Shubhavidu shobhana sirige |
Shubavidu purandara vittala raayage
Shubhavidu shobhana harige |
Shubavidhu purandara vittala raayage
Shubhavidu shobhana sirige |

Lord KrishnaSri Mukhyaprana Devaru

ShreeRaghavendra Gurugalu

Attached is the link for the temple website.

https://skvnc.org/temple/

2 responses to this post.

  1. Posted by Padma Guruprasad on July 9, 2022 at 11:53 am

    Thank you, Meera. It was good seeing you in Krishna Vrindavana on Thursady. I also had downloaded ‘Jo Jo’ song from your website which is different lyrics than what they sing at the matha. Do you have that? If so, please share it.

    Reply

    • Posted by meeraghu on July 9, 2022 at 12:47 pm

      Hi Padma, same here. I heard them just reciting the one posted below, and maybe the last one. Let me listen keenly this Thursday again.
      ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ
      ಮನೆಯ ಕೆಲಸವಾರು ಮಾಡುವರಯ್ಯ
      ಮನಕೆ ಸುಖನಿದ್ರೆ ತಂದುಕೋ ಬೇಗ
      ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋಜೋ ||

      ಅಂಡಜವಾಹನ ಅನಂತಮಹಿಮ
      ಪುಂಡರೀಕಾಕ್ಷ ಶ್ರೀ ಪರಮಪಾವನ
      ಹಿಂಡು ದೈವದ ಗಂಡ ಉದ್ದಂಡನೆ
      ಪಾಂಡುರಂಗ ಶ್ರೀ ಪುರಂದರ ವಿಠಲ ಜೋಜೋ ||

      Reply

Leave a reply to Padma Guruprasad Cancel reply