In our Bhajane whatsapp group, I saw a message about Shree Jagannatha Dasara Aaradhane on September 4th 2022. I was also looking at calendar’s to update in Bhadrapada Masa and saw the same.
Looking through the songs I had posted on Shree Jagannatha Dasara, updating the page, I came across another amazing song in my Bhajane book.
The page which has songs composed by Shree Jagannatha Dasara is below:
The songs above are not sorted, just a list of all songs in this blog.
Sharing another amazing song composed by Shree Jagannatha Dasara.
ಸಿರಿರಮಣ ತವ ಚರಣ ದೊರಕುವುದು ಹ್ಯಾಂಗಿನ್ನು
ಪರಮ ಪಾಪಿಷ್ಠ ನಾನು | ಪ |
ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ | ನರಕಕ್ಕೆ ಗುರಿಯಾದೆನೋ | ಹರಿಯೇ | | ಅ.ಪ |
ಕೆರೆ ಭಾವಿ ದೇವ ಮಂದಿರಗಳನ್ನು ಕೆಡವಿ ನಾ ಹಿರಿದಾಗಿ ಮನೆ ಕಟ್ಟಿದೆ |
ನೆರೆನಡೆವ ಮಾರ್ಗದಾ ಅರವಟ್ಟಿಗೆಗಳನು ಥರಥರದಿ ಬಿಚ್ಚಿ ತೆಗೆದೆ |
ಪರಮ ಸಂಭ್ರಮದಿಂದ ಅರಳೆಯಮರ ಕಡಿಸೆ ಕೊರೆಸಿ ಬಾಗಿಲ ಮಾಡಿದೆ | ವರಮಂದಿರವ ಮುಗಿಸಿ ಹರುಷ ಚಿತ್ರವ ತೆಗೆಸಿ ಪರಿಪರಿಯ ಸೌಖ್ಯ ಸುರಿದೆ | ಮೆರೆದೆ || ೧ ||
ಹೊಸ ಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ದಬ್ಬುತಾ |
ಶಶಿಮುಖಿಯೇ ಬಾರೆಂದು ಅಸುವನೆ ಬಣ್ಣಿಸುತ ಹಸನಾಗಿ ಅವಳೊಲಿಯುತ |
ದಶಮಿ ಏಕಾದಶಿ ದ್ವಾದಶಿ ದಿನತ್ರಯದಿ ಅಶನವೆರಡು ಹೊತ್ತುಣ್ಣು ತಾ |
ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು ಕುಸುಮಗಂಧಿಯ ರಮಿಸುತಾ | ಸತತಾ | ೨ |
ಸ್ನಾನ ಸಂಧ್ಯಾನ ಅತಿಮೌನ ಗಾಯತ್ರಿ ಜಪ ಭಾನುಗರ್ಥ್ಯವನ್ನು ಕೊಡದೆ |
ಶ್ರೀನಿವಾಸನೆ ನಿನ್ನ ಜ್ಞಾನಪೂರ್ವಕ ಪೂಜೆ ನಾನೊಂದು ಕ್ಷಣ ಮಾಡದೆ |
ಬೇನೆ ಬಂದಂತಾಗಿ ಹೀನ ಸಕೇಶಿಯ ಕೈಲಿ ನಾನಾ ವಿಧಾನ್ನ ಉಂಡೆ |
ಜೀನತ್ವದಲ್ಲಿ ದುಡ್ಡು ದಾನ ಧರ್ಮವ ಕೊಡದೆ ಜ್ಞಾನನಂದದಿ ಚರಿಸಿದೆ | ಬರಿದೆ | ೩ |
ಸಾಕಲ್ಯದಿಂದ ಶಾಲಿಗ್ರಾಮದಭಿಷೇಕ ಆಕಾಲಲಿ ಮಾಡದೆ |
ನಾಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕಬೇಕೆಂದು ಹಾಲು ಹೊಯ್ದೆ |
ಕಾಕುಬುದ್ಧಿಗಳಿಂದ ಗುಡಗುಡಿ ನಶ್ಯಮಡಿ ಹಾಕಿ ಭಂಗಿಯ ಸೇದಿದೆ |
ಲೋಕನಿಂದಕನಾಗಿ ಪಾತಕವನ ಅನೇಕ ಜೂಜುಗಳಾಡಿದೆ | ಹರಿಯೇ || ೪ ||
ಉತ್ತಮ ಬ್ರಾಹ್ಮಣರ ವೃತ್ತಿಯನೆ ಕೆಡೆಸಿ ಬ್ರಹ್ಮತ್ಯಗಾರನೆನಿಸಿದೆ |
ಮತ್ತೆ ಮುಂಜಿ ಮದುವೆ ಮನೆಯೊಳಗೆ ನಾ ಹೋಗಿ ಸತ್ತ ಸುದ್ದಿಯ ಪೇಳೆದೆ |
ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ ಕುತ್ತಿಗೆಯ ನಾ ಕೊಯಿಸಿದೆ |
ಹತ್ತು ಜನ ಎನ್ನೆಣಕೆ ನಿತ್ಯ ಕಲ್ಲೊಡೆಯುತಿರೆ ಮೃತ್ಯು ದೇವತೆ ಎನಿಸಿದೆ | ಬಿಡದೇ || ೫ ||
ಬಾದರಾಯಣ ಕೃತ ಭಾಗವತ ಕೇಳಲ್ಲಿ ಆದರವು ಪುಟ್ಟಲಿಲ್ಲ |
ವಾದಿಗಳ ಮತವಳಿದು ಮಧ್ವಸಿದ್ಧಾಂತದ ಹಾದಿಗೇ ಹೋಗಲಿಲ್ಲ |
ಶೋಧಿಸಿದ ಚಿನ್ನಕ್ಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ |
ವೇದ ಬಾಹಿರವಾಗಿ ಅಪಸವ್ಯಮನನಾಗಿ ಓದಿಕೊಂಡೆನೊ ಇದೆಲ್ಲ | ಸುಳ್ಳಾ || ೬ ||
ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರೆನಗೆ ಗತಿಯೇನು ಪೇಳ್ವ ಕೊನೆಗೆ |
ಸತತ ತವ ಧ್ಯಾನದಲ್ಲಿ ರತನಾಗಿ ಇರುವ ಸನ್ಮತಿಯನೆ ಪಾಲಿಸಿಗ |
ಪತಿತ ಪಾವನನೆಂಬೊ ಬಿರುದು ಅವನಿಯ ಮೇಲೆ ಶೃತಿ ಸಾರುತಿದೆಯೋ ಹೀಗೆ |
ಶಿತಿಕಂಠನುತ ಜಗನ್ನಾಥ ವಿಠಲ ನಿನ್ನ ತುತಿಸಿ ಮೊರೆಹೊಕ್ಕೆ ಹರಿಯೇ | ದೊರೆಯೇ || ೭ ||
Siriramaṇa tava caraṇa dorakuvudu hyāṅginnu
parama pāpiṣṭha nānu | pa |
narahariye ninna nāmasmaraṇe māḍade |
narakakke guriyādenō | hariyē | | a.Pa |
kere bhāvi dēva mandiragaḷannu keḍavi nā hiridāgi mane kaṭṭide |
nerenaḍeva mārgadā aravaṭṭigegaḷanu tharatharadi bicci tegede |
parama sambhramadinda araḷeyamara kaḍise koresi bāgila māḍide |
varamandirava mugisi haruṣa citrava tegesi paripariya saukhya suride | merede || 1 ||
hosa maneya kaṇḍu balu hasidu bhūsuraru bare kosari hākuta dabbutā |
śaśimukhiyē bārendu asuvane baṇṇisuta hasanāgi avaḷoliyuta |
daśami ēkādaśi dvādaśi dinatrayadi aśanaveraḍu hottuṇṇu tā |
ghasaghasane tāmbūla paśuvinandadi meddu kusumagandhiya ramisutā | satatā | 2 |
snāna sandhyāna atimauna gāyatri japa bhānugarthyavannu koḍade |
śrīnivāsane ninna jñānapūrvaka pūje nānondu kṣaṇa māḍade |
bēne bandantāgi hīna sakēśiya kaili nānā vidhānna uṇḍe |
jīnatvadalli duḍḍu dāna dharmava koḍade jñānanandadi cariside | baride | 3 |
sākalyadinda śāligrāmadabhiṣēka ākālali māḍade|
Nākeṇṭu nāyigaḷa sāki maneyoḷu badukabēkendu hālu hoyde |
kākubud’dhigaḷinda guḍaguḍi naśyamaḍi hāki bhaṅgiya sēdide |
lōkanindakanāgi pātakavana anēka jūjugaḷāḍide | hariyē || 4 ||
uttama brāhmaṇara vr̥ttiyane keḍesi brahmatyagāraneniside |
matte mun̄ji maduve maneyoḷage nā hōgi satta suddiya pēḷede |
vittaviddavara benhatti dūtara kaḷuhi kuttigeya nā koyiside |
hattu jana enneṇake nitya kalloḍeyutire mr̥tyu dēvate eniside | biḍadē || 5 ||
bādarāyaṇa kr̥ta bhāgavata kēḷalli ādaravu puṭṭalilla |
vādigaḷa matavaḷidu madhvasid’dhāntada hādigē hōgalilla |
śōdhisida cinnakke samarāda vaiṣṇavara pādakke bīḷalilla |
vēda bāhiravāgi apasavyamananāgi ōdikoṇḍeno idella | suḷḷā || 6 ||
kṣitiyoḷage innāru hitava bayasuvarenage gatiyēnu pēḷva konege |
satata tava dhyānadalli ratanāgi iruva sanmatiyane pālisiga |
patita pāvananembo birudu avaniya mēle śr̥ti sārutideyō hīge |
śitikaṇṭhanuta jagannātha viṭhala ninna tutisi morehokke hariyē | doreyē | 7 |
And an amazing rendition by Mysore Ramachandrachar