Archive for September 19th, 2022

Srinivasa Kalyana by Harapanahalli Bheemavva

I was trying to find new songs for the upcoming Dasara Navarathri festival. I found a book written by Shri Jayasimha written in 1992, almost 30 years back on Harapanahalli Bheemavva and numerous amazing song compositions. One of them was on Lord Srinivasa and can be sung during the upcoming Navarathri, Dasara.

It is customary to sing Srinivasa Kalyana during these 9 days. Also, many recite Lakshmi Shobhane.

Srinivasa Kalyana has been written by so many seers. Shree Vadirajaru, the one I have in my blog. Shree Purandara Dasaru that I recite most Saturday’s in my book, will post it soon. And this one written by Harapanahalli Bheemavva. There is no set tune, you can recite as you wish.

Again, the book is Harapanahalli Bhimavva by Sri Jayasimha published in 1992.

ಅಪ್ಪ ವೆಂಕೋಬನ ನೇತ್ರದಲಿ ನೋಡಿ

ಅಪ್ಪ ವೆಂಕೋಬನ ನೇತ್ರದಲಿ ನೋಡಿ ಪವಿತ್ರಳಾದೆನೋ ಇಂದಿಗೆ
ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ
ಒಪ್ಪಿಕೊಳ್ಳಬೇಕೋ ತಿಮ್ಮಪ್ಪ ಕರುಣಾನಿಧಿಯೇ ।। pa ।।

ಹೆದರದೆ ಭೃಗು ಋಷಿಯು ಒದೆಯೆ ಪಾದಗಳಿಂದ
ಎದೆಯಮೇಲಿರುವ ಲಕ್ಷ್ಮಿ ಕದನ ಮಾಡುತವೆ ಕೊಲ್ಹಾಪುರಕ್ಕೆ ನಡೆತರಲು
ಒದಗಿ ವೈಕುಂಠ ಬಿಟ್ಟು ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರಿ
ಇದು ನಿನಗೆ ಸದನಾಯಿತೋ ದೇವಾ ।। 1 ।।

ಹುತ್ತದಲ್ಲಡಗಿ ನೀ ಗುಪ್ತದಿಂದಿರುತಿರಲು ಉತ್ತಮ ಗೋವು ಬಂದು
ನಿತ್ಯದಲಿ ಕ್ಷೀರವನು ಕ್ರಿಯೆ ಗೋವಳನಿಂದ ನೆತ್ತಿಯ ನೊಡೆದುಕೊಂಡು
ಸಿಟ್ಟಿನಿಂದಲಿ ಚೋಳರಾಯಗೆ ಶಾಪವನು ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವಾ ।। 2 ।।

ಮಾಯಾ ರಮಣನೆ ನಿನ್ನ ಗಾಯದೌಷಧಕ್ಕಾಗಿ ಭೂರಮಣ ವರಾಹನಿಂದ
ನೂರು ಪಾದ ಭೂಮಿ ಕೊಟ್ಟರೆ ಸಾಕೆಂದು ಪಾಯದಿಂದದ್ವ್ಯಾಪಿಸಿ
ತಾಯಿ ಬಕುಳಾದೇವಿ ಯಿಂದ ಪೂಜೆಯಗೊಂಬೋ ಶ್ರೀಯರಸು ನಿನಗೆ ಸರಿಯೇ ದೇವಾ ।। 3 ।।

ನಾಟಕಧಾರಿ ಕಿರಾತ ರೂಪವ ಧರಿಸಿ ಬೇಟೆಗೆನುತಲಿ ಪೋಗಲು
ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ ನೋಟದಿ ಮನಸೋಲಿಸಿ
ಬೂಟಕ ತನದಿ ಜಗಳಾಟವನ್ನೇ ಮಾಡಿ ಪಾಟು ಬಟ್ಟು ಕಲ್ಲಲೇಟು ತಿಂದೆಯೋ ದೇವಾ ।। 4 ।।

ಗಡಗಡನೆ ನಡುಗುತಲಿ ಕುದುರೆಯನು ಕಳಕೊಂಡು ಪದ್ಮಾವತೀ ವಾರ್ತೆಯನ್ನು
ಬಳಿಯಲಿದ್ದ ಬಕುಳೆ ಮಾಲಿಕೆಗೆ ಬೋಧೀಸಿ ಕಳಿಸಿದಾಕಾಶನಲ್ಲಿ

ಚದುರಮಾತಿನ ಚಪಲಕೊರವಂಜಿ ನೀನಾಗಿ ಕಣಿಯ ಹೇಳಲು ಎಲ್ಲಿ ಕಲಿತಿಯೋ ಮಹದೇವಾ ।। 5 ।।

ಬಂಧು ಬಳಗವ ಕೂಡಿ ಭಾರಿ ಸಾಲವ ಮಾಡಿ ಕೊಂಡು ಕರವೀರದಿಂದೆ
ಅಂಡಲೆದು ಕರೆಸಿ ಕಾಣುತಲಿ ಲಕ್ಷ್ಮೀಯನಪ್ಪಿಕೊಂಡು ಪರಮಹರುಷದಿಂದ
ಮಂದಗಮನೆಯೆ ನಿನ್ನ ಮಾತು ಲಾಲಿಸಿ ಮಾಡಿ ಕೊಂಡೆ ಪದ್ಮಾವತಿಯ ಅಂದೆಯೋ ದೇವಾ ।। 6 ।।

ಆಕಾಶರಾಜ ಅನೇಕ ಹರುಷದಿ ಮಾಡೆ ತಾ ಕನ್ಯಾದಾನವನ್ನು
ಹಾಕಿದ ರತ್ನ ಮಾಣಿಕ್ಯದ ಕಿರೀಟವನು ಬೇಕಾದಾಭರಣ ಭಾಗ್ಯ
ಸಾಕಾಕಗದೇನೋ ಬಡವರ ಕಾಡಿ ಬೇಡುವುದು ಶ್ರೀಕಾಂತ ನಿನಗೆ ಸರಿಯೇ ದೇವಾ ।। 7 ।।

ಹೇಮಗೋಪುರದಿ ವಿಮಾನ ಶ್ರೀನಿವಾಸ ದೇವರನು ನೋಡಿ ನಮಿಸಿ
ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡಗಂಬದ ಸುತ್ತ ಪ್ರಾಕಾರವೋ
ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ಪಾನವ ಮಾಡಿ ನೋಡಿದೆನೋ ನಿನ್ನ ಭಕುತರ ದೇವಾ ।। 8 ।।

ಪನ್ನಗಾದ್ರಿ ವೆಂಕಟನ್ನ ರಥ ಶೃಂಗಾರ ವರ್ಣಿಸಲಳವೇ ನಮಗೆ
ಕಣ್ಣಾರೆ ಕಂಡೆ ಗರುಡೋತ್ಸವದಲಂಕಾರ ಇನ್ನೆಲ್ಲೂ ಕಾಣೆ ಜಗದಿ
ಅನ್ನಪೂರ್ಣೆಯ ನೋಡೆ ಅಧಿಕ ಘಂಟೆಯ ನಾದ ಎನ್ನ ಕಿವಿಗಾನಂದವೋ ದೇವಾ ।। 9 ।।

ಪಾದದಲೊಪ್ಪೋ ಪಗಡಾರಳಿ ಕಿರಿಗೆಜ್ಜೆ ಮೇಲಲವೋ ಪೀತಾಂಬರ
ನೀಲ ಮಾಣಿಕದ ಉಡುದಾರವೋ ವೈಜಯಂತೀ_ಮಾಲೆ ಶ್ರೀವತ್ಸದಾ ಹಾರ
ಮೇಲಾದ ಸಾರಿಗೆ ಸರ ಪದಕವೋ ಕಮಲದ ಳಾಯತಾಕ್ಷನ ನೋಡಿದೆ ದೇವಾ ।। 10 ।।

ಕರಗಳಲ್ಲಿಟ್ಟು ಕಂಕಣ ಕಡಗ ಭುಜ ಕೀರ್ತಿ ವರ ಶಂಖ ಚಕ್ರ ಧಾರಿ
ಗಿರಿಯ ಭೂ ವೈಕುಂಠವೆಂದು ತೋರುತ ನಿಂತ ಶಿರದಿ ಕಿರೀಟ ಧರಿಸಿ
ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ ಹೊಳೆವ ಮೂರ್ತಿಯ ನೋಡಿ ಹೇ ದೇವ ।। 11 ।।

Appa veṅkōbana nētradali nōḍi

pavitraḷādenō indige

tappugaḷella ninagarpisuve nanīga oppikoḷḷabēkō tim’mappa karuṇānidhiyē।। pa।।

hedarade bhr̥gu r̥ṣiyu odeye pādagaḷinda Edeya mēliruva lakṣmi kadana māḍutave kol’hāpurakke naḍetaralu odagi vaikuṇṭha biṭṭu yadunātha yārilladante guḍḍava sēri idu ninage sadanāyitō dēvā।। 1।।

huttadallaḍagi nī guptadindirutiralu uttama gōvu bandu nityadali kṣīravanu kriye gōvaḷaninda nettiya noḍedukoṇḍu siṭṭinindali cōlarāyage śāpavanu koṭṭu kirīṭavanu iṭṭu mereyuva dēvā।। 2।।

māyā ramaṇane ninna gāyadauṣadhakkāgi bhūramaṇa varāhaninda nūru pāda bhūmi koṭṭare sākendupāyadindadvyāpisi tāyi bakuḷādēviyinda pū_ jeyagombō śrīyarasu ninage sariyē dēvā।। 3।।

nāṭakadhāri kirāta rūpava dharisi bēṭegenutali pōgalu tōṭadali celve padmāvatiya kaḍegaṇṇa nōṭadi manasōlisi būṭakatanadi jagaḷāṭavannē māḍi pāṭubaṭṭu kallalēṭutindeyō dēvā।। 4।।

gadagadane naḍugutali kudureyanu kaḷakoṇḍu padmāvatī vārteyannu baḷiya_ lidda bakuḷe mālikege bōdhīsi kaḷi_ sidākāśanalli caduramātina capalakoravan̄ji nīnāgi kaṇiya hēḷalu elli kalitiyō mahadēvā।। 5।।

bandhubaḷagava kūḍi bhāri sālava māḍi koṇḍu kara vīradinde aṇḍaledu karesi kāṇutali lakṣmīyanappi koṇḍu parama haruṣadinda manda gamaneye ninna mātu lālisi māḍikoṇḍe padmāvatiya andeyō dēvā।। 6।।

ākāśarāja anēka haruṣadi māḍe tā kan’yādānavannu hākida ratna māṇikyada kirīṭavanu bēkādābharaṇa bhāgya sākākagadēnō baḍavara kāḍi bēḍuvudu śrīkānta ninage sariyē dēvā।। 7।।

hēmagōpuradi vimāna śrīnivāsa dēvaranu nōḍi namisi kāmisi kaṇḍe honnhostilu garuḍa gambada sutta prākāravō svāmi puṣkaraṇiyalli snāna pānava māḍi nōḍidenō ninna bhakutara dēvā।। 8।।

pannagādri veṅkaṭanna ratha śr̥ṅgāra varṇisalaḷavē namage kaṇṇāre kaṇḍe garuḍōtsavadalaṅkāra innellū kāṇe jagadi annapūrṇeya nōḍe adhika ghaṇṭeya nāda enna kivigānandavō dēvā।। 9।।

pādadaloppō pagaḍāraḷi kirigejje mēlalavō pītāmbara nīla māṇikada uḍudāravō vaijayantī_ māle śrīvatsadā hāra mēlāda sārige sara padakavō kamala daḷāyatākṣana nōḍide dēvā।। 10।।

karagaḷalliṭṭu kaṅkaṇa kaḍaga bhuja kīrti vara śaṅkha cakra dhāri giriya bhūvaikuṇṭhavendu tōruta ninta śiradi kirīṭa dharisi biḷiya trināma bhīmēśakr̥ṣṇana mukhadi hoḷeva mūrtiya nōḍi hē dēva।।

And audio and video available by none other than Sri Mysore Ramachandrachar

%d bloggers like this: