Srinivasa Kalyana by Purandara Dasaru

Like I mentioned in my earlier post. I recite this one Saturday’s. And also during Dasara.

Composed by Shree Purandara Dasaru. Short and sweet.

There is no set tune, you can recite as you wish.

This one from my Bhajane book – StotrapadaMala.

ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ ||
ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ ||೧||

ಚೋಳಭೃತ್ಯನು ಶಿರವನೊಡೆದ ಗಾಯವ ನೋಡಿ ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ ||
ಹೇಳಿದೌಷದಮಾಡಿ ಕ್ರೋಢರೂಪಿಯ ಕಂಡು ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ ||೨||

ಇರುತಿರಲು ಒಂದಿನ ತುರಗವನೆ ಸ್ಮರಿಸುತಲಿ ತುರಗ ಬರಲು ಕಂಡು ಮುದದಿ ತಾನೇರಿ ||
ಪರಿಪರಿ ಮೃಗಗಳ ಅಡವಿಯಲಿ ಕೊಂದು ಕರುಣಾಸಾಗರ ಒಂದು ವನವ ಕಂಡನು ||೩||

ವನದಲ್ಲಿ ವನಜಾಕ್ಷಿ ರಾಜಪುರ್ತಿಯ ಕಂಡು ಮನಕೆ ಬಂದಂತಾಡಿ ಕಲಹ ಮಾಡಿದರು ||
ಮನಸಿಜಪಿತ ತಾನು ಅಶ್ವವ ಕಳಕೊಂಡು ಘನವಾದ ಗಿರಿ ಏರಿ ಮಲಗಿದ ಹರಿಯು ||೪||

ನಗಧರ ಮಲಗಲು ಬಕುಳಾವತಿಯು ಆಗ ಬಗೆಬಗೆ ಕೇಳಲು ಶೋಕದಿಂ ನುಡಿದ ||
ಗಗರಾಜನ ಪುತ್ರಿ ಪದ್ಮಾವತಿಯ ಕಂಡು ಹಗಲು ಇರಳು ಆಕೆ ಮುಖವ ಸ್ಮರಿಸುವೇನು ||೫||

ಅವಳಿಗೋಸುಗವಾಗಿ ಇದ್ದಲ್ಲಿಗೆ ಹೋದೆ ಅವಳಿಂದ ಎನ್ನಶ್ವ ಹತವಾಯಿತಮ್ಮ ||
ಅವಳ ಹೊರೆತು ಎನ್ನ ಪ್ರಾಣವೇ ನಿಲ್ಲದು ಅವಳ ಘಟನೆಯ ನೀನು ಮಾಡಬೇಕಮ್ಮ ||೬||

ಅಂದ ಮಾತನು ಕೇಳಿ ಬಕುಳಾವತಿಯು ಆಗ ಆನಂದದಿಂ ರಾಜಪುರಕೆ ತೆರಳಿದಳು ||
ಸುಂದರಿಯರ ಕಾರ್ಯ ಸ್ಥಿರವಾಗದೆಂದು ಚೆಂದುಳ್ಳ ಸ್ತ್ರೀರೂಪ ಧರಿಸಿದನು ಹರಿಯು ||೭||

ಕೊರವಂಜಿ ತಾನಾಗಿ ನೃಪನ ಪುರಕೆಹೋಗಿ ಧರಣಿeದೇವಿಯ ಮುಂದೆ ಶಕುನ ಹೇಳಿದನು
ತಿರುಗಿ ಬರಲಾತಗೆ ಮಗಳ ಕೊಡುವೆನೆಂದು ಹರಿಗೆ ನಿಶ್ಚಯ ಮಾಡಿ ಶuಕರ ಕಳುಹಿಸಿದನು ||೮||

ತಾಪಸೋತ್ತಮ ಬಂದು ಪತ್ರವನೆ ಕೊಡಲು ಶ್ರೀಪತಿಯು ತಾನೋದಿ ಬೆನ್ಹಿಂದೆ ಬರೆದ ||
ಆ ಪರಮವಂದ್ಯ ತಾ ಸುರಸ್ತೋಮವನೆ ಕರೆಸಿ ಈ ಪರಿ ವೈಭೋಗ ಮಾಡಿದ ಹರಿಯು ||೯||

ಆ ಕ್ಷಣದಲಿ ತಾನು ತರಣಿಯನ ಕರೆಸಿ ಇಕ್ಷುಚಾಪನ ಮಾತೆ ಬಳಿಗೆ ಪೋಗೆಂದ ||
ತಕ್ಷಣದಲಿ ಸೂರ್ಯ ಹೋಗಿ ನಿಲ್ಲಲು ಹರಿಯ ಆಕ್ಷೇಮವನೆ ಕೇಳಿ ತೆರಳಿದಳು ಬೇಗ ||೧೦||

ಬಂದ ಸತಿಯಳ ಕೂಡಿ ಮಂದಿರಕೆ ಪೋಗಿ ಹಿಂದೆ ಹೇಳಿದ ವಾಕ್ಯ ನಡೆಸೆಂದ ಹರಿಯು ||
ಸಂದೇಹವಿಲ್ಲದೇ ಸ್ವಾಮಿ ನಡೆಸೆಂದು ಇಂದಿರಾದೇವಿಯು ನುಡಿದಳು ಹರಿಗೆ ||೧೧||

ಸ್ವಸ್ತಿವಾಚನ ಮಾಡಿ ಕುಲದೇವರನಿಟ್ಟು ಪ್ರಸ್ಥವ ಮಾಡಿದ ದ್ವಿಜರ ಸ್ತೋಮಕ್ಕೆ ||
ಮರುದಿನ ಲಕ್ಷ್ಮೀಶ ರಾಜನ ಆ ಪುರಕೆ ಸುರಸ್ತೋಮವನೆ ಕೂಡಿ ತೆರಳಿ ಬಂದ ||೧೨ ||

ಬರುವ ಕೃಷ್ಣನ ಕಂಡು ಶುಕಮುನಿ ಸಂಸ್ತುತಿಸಿ ಹರಿಗೆ ಭೋಜನವನ್ನು ಮುದದಿ ಮಾಡಿಸಿದ ||
ಆಕಳಂಕಮಹಿಮನು ಬಂದ ವಾರ್ತೆಯ ಕೇಳಿ ಸಕಲ ಜನರ ಕೂಡಿ ಕರೆಯೆ ರಾಜ ||೧೩||

ಮುದದಿಂದ ಎದುರುಗೊಂಡು ಪರಿಮಳ ಪೂಸಿ ಸದಮಲಹೃದಯನ ಕರೆತಂದರು ಮನೆಗೆ ||
ಪದ್ಮನಾಭನ ಪೀಠದಲಿ ಕುಳ್ಳಿರಿಸಿ ಮಧುರ ಮಾತಿಲಿ ತನ್ನ ತರುಣಿ ಒಡಗೂಡಿ ||೧೪||

ಹೇಮ ಕುಂಭಗಳಿಂದ ದ್ವಿಜರ ಕೈಯೊಳು ಸ್ವಾಮಿಪುಷ್ಕರಣಿಯ ತೋಯವನ್ನೇ ತರಿಸಿ ||
ಹೇಮತಟ್ಟೆಯಲ್ಲಿ ಸ್ವಾಮಿ ಪಾದವನ್ನಿಟ್ಟು ಪ್ರೇಮದಿಂದಭಿಷೇಕ ಮಾಡಿದನು ರಾಜ ||೧೫||

ಚಿನ್ನದ ಕಿರೀಟ ಆಭರಣವನ್ನಿಟ್ಟು ಕನ್ಯಾದಾನವ ಮಾಡಿ ಧನ್ಯನಾದ ||
ತನ್ನ ಮಗಳನೆ ಶ್ರೀನಿವಸಗೆ ಒಪ್ಪಿಸಿ ಉನ್ನತ ಪದವಿಯಂ ಚೆನ್ನಾಗಿ ಪಡೆದ ||೧೬||

ಮಾವನಪ್ಪಣೆನೊಂಡು ಮೈದಗೊಸ್ತ್ರವ ಕೊಟ್ಟು ಭಾವಶುದ್ದದಿ ತನ್ನ ಮಾವಗೊಂದಿಸಿದ ||
ಯಾವಾಗ ಕರೆದರೂ ಬರುವೆನು ನಾನೆಂದು ಪಾವನ್ನ ಮಾಡೆಂದು ಧರಣೀಗೊಂದಿಸಿದ ||೧೭||

ಅಷ್ಟಗೋಪುರ ಏರಿ ಕಣ್ಣಿಟ್ಟು ನೋಡುತಲಿ ಎಷ್ಟು ಹೇಳಲಿ ಈಕೆ ಸುಕೃತಫಲವೆಂತೋ ||
ಅಜರುದ್ರ ಮೊದಲಾದ ಸುರರು ದ್ವಿಜರೆಲ್ಲ ಸುಜನರಂದಣವೇರಿ ಪುರಕೆ ಸಾಗಿದರು ||೧೮||

ಆರು (ಮೂರು) ತಿಂಗಳು ಮೀರಿ ಗಿರಿಗೆ ಪೋಗುವೆನೆಂದು ಧೀರ ತಾ ನಿಂತಾನೆ ಕುಂಭಜರಾಶ್ರಮದಿ ||
ಧರೆಯೊಳು ಅಣಕೇರಿ ಸುರಪತಿ ಪ್ರಿಯನಾದ ಸುಗುಣವೇಂಕಟರನ್ನ ಪುರಂದರವಿಠಲ ||೧೯||

Vaikuṇṭhapati tānu vaikuṇṭhavane biṭṭu vēṅkaṭādrige hōgi śrīkānta ninta ||

nālku kaḍeyū nōḍi valmīkavane kaṇḍu ēkāntasthaḷavendu bahukālavallidda ||1||

cōḷabhr̥tyanu śiravanoḍeda gāyava nōḍi tāḷalārade svāmi gurugaḷane karesi ||

hēḷidauṣadamāḍi krōḍharūpiya kaṇḍu kēḷi sthaḷavane koṇḍu līle tōrutali ||2||

irutiralu ondina turagavane smarisutali turaga baralu kaṇḍu mudadi tānēri ||

paripari mr̥gagaḷa aḍaviyali kondu karuṇāsāgara ondu vanava kaṇḍanu ||3||

vanadalli vanajākṣi rājapurtiya kaṇḍu manake bandantāḍi kalaha māḍidaru ||

manasijapita tānu aśvava kaḷakoṇḍu ghanavāda giri ēri malagida hariyu ||4||

nagadhara malagalu bakuḷāvatiyu āga bagebage kēḷalu śōkadiṁ nuḍida ||

gagarājana putri padmāvatiya kaṇḍu hagalu iraḷu āke mukhava smarisuvēnu ||5||

avaḷigōsugavāgi iddallige hōde avaḷinda ennaśva hatavāyitam’ma ||

avaḷa horetu enna prāṇavē nilladu avaḷa ghaṭaneya nīnu māḍabēkam’ma ||6||

anda mātanu kēḷi bakuḷāvatiyu āga ānandadiṁ rājapurake teraḷidaḷu ||

sundariyara kārya sthiravāgadendu cenduḷḷa strīrūpa dharisidanu hariyu ||7||

koravan̄ji tānāgi nr̥pana purakehōgi dharaṇiedēviya munde śakuna hēḷidanu tirugi baralātage magaḷa koḍuvenendu harige niścaya māḍi śaukara kaḷuhisidanu ||8||

tāpasōttama bandu patravane koḍalu śrīpatiyu tānōdi benhinde bareda ||

ā paramavandya tā surastōmavane karesi ī pari vaibhōga māḍida hariyu ||9||

ā kṣaṇadali tānu taraṇiyana karesi ikṣucāpana māte baḷige pōgenda ||

takṣaṇadali sūrya hōgi nillalu hariya ākṣēmavane kēḷi teraḷidaḷu bēga ||10||

banda satiyaḷa kūḍi mandirake pōgi hinde hēḷida vākya naḍesenda hariyu ||

sandēhavilladē svāmi naḍesendu indirādēviyu nuḍidaḷu harige ||11||

svastivācana māḍi kuladēvaraniṭṭu prasthava māḍida dvijara stōmakke ||

marudina lakṣmīśa rājana ā purake surastōmavane kūḍi teraḷi banda ||12 ||

baruva kr̥ṣṇana kaṇḍu śukamuni sanstutisi harige bhōjanavannu mudadi māḍisida ||

ākaḷaṅkamahimanu banda vārteya kēḷi sakala janara kūḍi kareye rāja ||13||

mudadinda edurugoṇḍu parimaḷa pūsi sadamalahr̥dayana karetandaru manege ||

padmanābhana pīṭhadali kuḷḷirisi madhura mātili tanna taruṇi oḍagūḍi ||14||

hēma kumbhagaḷinda dvijara kaiyoḷu svāmipuṣkaraṇiya tōyavannē tarisi ||

hēmataṭṭeyalli svāmi pādavanniṭṭu prēmadindabhiṣēka māḍidanu rāja ||15||

cinnada kirīṭa ābharaṇavanniṭṭu kan’yādānava māḍi dhan’yanāda ||

tanna magaḷane śrīnivasage oppisi unnata padaviyaṁ cennāgi paḍeda ||16||

māvanappaṇenoṇḍu maidagostrava koṭṭu bhāvaśuddadi tanna māvagondisida ||

yāvāga karedarū baruvenu nānendu pāvanna māḍendu dharaṇīgondisida ||17||

aṣṭagōpura ēri kaṇṇiṭṭu nōḍutali eṣṭu hēḷali īke sukr̥taphalaventō ||

ajarudra modalāda suraru dvijarella sujanarandaṇavēri purake sāgidaru ||18||

āru (mūru) tiṅgaḷu mīri girige pōguvenendu dhīra tā nintāne kumbhajarāśramadi ||

dhareyoḷu aṇakēri surapati priyanāda suguṇavēṅkaṭaranna purandaraviṭhala ||19||

One response to this post.

  1. […] Srinivasa Kalyana by Purandara Dasaru […]

    Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: