The second one from our Shree Purandara Dasaru.

ಗೋವಿಂದ ಎನ್ನಿರೋ ಹರಿ
ಗೋವಿಂದ ನಾಮವ ಮರೆಯದಿರೋ ||ಪ||
ತುಂಬಿರುವ ಪಟ್ಟಣಕೊಂಭತ್ತು ಬಾಗಿಲು
ಸಂಭ್ರಮದರಸುಗಳೈದು ಮಂದಿ
ಡಂಭಕತನದಿಂದ ಕಾಯುವ ಜೀವನ
ನಂಬಿ ನೆಚ್ಚಿ ಕೆಡಬೇಡಿ ಕಾಣಿರೋ || 1 ||
ನೆಲೆಯು ಇಲ್ಲದ ಕಾಯವೆಲುಬಿನ ಪಂಜರವು
ಒಲಿದು ಸುತ್ತಿದ ಚರ್ಮದ ಹೊದಿಕೆ
ಮಲ ಮೂತ್ರಂಗಳಿರವು ಕೀವು ಕ್ರಿಮಿಗಳು
ಬರಿಯ ತೊಗಲ ಮೆಚ್ಚಿ ಕೆಡಬೇಡಿರೋ || 2 ||
ಹರ ಬ್ರಹ್ಮ ಸುರರಿಗೆ ವಂದಿತನಾಗಿಪ್ಪ
ಹರಿ ಸರ್ವೋತ್ತಮನೆಂದೆನ್ನಿರೋ
ಪುರಂದರ ವಿಠಲನ ಚರಣವ ಭಜಿಸಿರೋ
ದುರಿತಭಯಗಳೆಲ್ಲವು ಪರಿಹರವು || 3 ||
Govinda enniro hari
Govinda nAmava mareyadiro || Pa||
tumbiruva paTTaNakombhattu bAgilu
sambhramadharasugaLaidu mandi
Dambhakatanadinda kAyuva jIvana
nambi necchi keDabEDi kANirO || 1 ||
neleyu illada kayavelubina panjaravu
olidu suttida carmada hodike
mala mUtragaLiravu kIvu krimigaLu
bariya togala mecci keDa bEDirO || 2 ||
hara brahma surarige vanditanAgippa
hari sarvOttamanendennirO
purandara viTTalana caraNava bhajisirO
duritabhayagaLellavu pariharavu || 3 ||
Posted by shanthisethuraman on September 27, 2022 at 5:04 am
The lyrics on Govinda – Govinda enniro hari written by Purandra Das excellent. Govinda Govinda Govinda. Feeling blessed by Perumal.
Posted by meeraghu on September 27, 2022 at 8:56 am
100% Shanthi.