The third one from my other book on Helavanakatte Giriyamma. A very rare composition. I saw several others versions from so many other Dasaru as well, with slight differences in lyrics.

ಆಡುತ ಬಾರಮ್ಮ ನಲಿ ನಲಿದಾಡುತ ಬಾರಮ್ಮ ||ಪ||
ಆಡುತ ವರಗಳ ನೀಡುತ ಕರುಣದಿ |
ನೋಡುತ್ತಾ ದಯದಿಂದಾ ಲಕ್ಷ್ಮೀ ||ಅ. ಪ||
ಬೇಸರವು ಬೇಡಮ್ಮಾ ದಾಸರ ದಾಸಿಯು ನಾ ನಿಮ್ಮ |
ವಾಸನ ಪೂರಿತೆ ವನರುಹನೇತ್ರೆ |
ಸಾಸಿರ ನಾಮದ ವಾಸುದೇವನ ಸತಿ ||೧||
ಕರೆದರೆ ಓ ಎಂದು ತಾಯೆ ಎನ್ನ ಮೊರೆಯಲಾಲಿಸೆ ನೀ ಬಂದು |
ದುರಿತಗಳನೆಲ್ಲಾ ಪರಿಹರಿಸುವ ನಿಮ್ಮ |
ಕರುಣಾಮೃತವನು ಸ್ಮರಿಸುವೆ ಅನುದಿನ ||೨||
ಧರೆಯೊಳುನ್ನತವಾದ ಹೆಳವನ ಕಟ್ಟೆ ಗಿರಿಯೊಳು ನೆಲೆಸಿದ |
ಪರಮ ಪವಿತ್ರಳೆ ಕರುಣಾ ಸಿಂಧುವೆ |
ವರವನು ಕೊಡುತ್ತಾ ಬೇಗಾದಿಂದಲಿ ||೩||
Āḍuta bāram’ma nali nalidāḍuta bāram’ma ||pa||
āḍuta varagaḷa nīḍuta karuṇadi | nōḍuttā dayadindā lakṣmī ||a. Pa||
bēsaravu bēḍam’mā dāsara dāsiyu nā nim’ma |
vāsana pūrite vanaruhanētre |
sāsira nāmada vāsudēvana sati ||1||
karedare ō endu tāye enna moreyalālise nī bandu |
duritagaḷanellā pariharisuva nim’ma |
karuṇāmr̥tavanu smarisuve anudina ||2||
dhareyoḷunnatavāda heḷavana kaṭṭe giriyoḷu nelesida |
parama pavitraḷe karuṇā sindhuve |
varavanu koḍuttā bēgādindali ||3||
Recent Comments