The fifth one, once again from our Shree Purandara Dasaru. This one truly brought tears. Touches your heart in so many ways.

ಗೋವಿಂದಾ ನಮೋ ಗೋವಿಂದಾ ನಮೋ
ಗೋವಿಂದಾ ನಾರಾಯಣ |
ಗೋವರ್ಧನ ಗಿರಿಯನೆತ್ತಿದ
ಗೋವಿಂದಾ ನಮ್ಮ ರಕ್ಷಿಸೋ || Pa ||
ಮಂಚ ಬಾರದು ಮಡದಿ ಬಾರಳು
ಕಂಚು ಕನ್ನಡಿ ಬಾರದು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿದ ಧರ್ಮವೆ || 1 ||
ಅರ್ಥವ್ಯಾರಿಗೆ ಪುತ್ರರ್ಯಾರಿಗೆ
ಮಿತ್ರ ಬಾಂಧವರ್ಯಾರಿಗೆ
ಕರ್ತು ಯಮನವರೆಳೆದು ಒಯ್ವಾಗ
ಅರ್ಥ ಪುತ್ರರು ಕಾಯ್ವರೆ || 2 ||
ತಂದು ಬಂದರೆ ತನ್ನ ಪುರುಷನ
ಹಸಿದು ಬಳಲಿದಿರೆಂಬಳು
ಒಂದು ದಿವಸವು ತಾರದಿದ್ದರೆ
ಹಂದಿ ನಾಯಂತೆ ಕೆಲೆವಳು || 3 ||
ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣ ಹೋಗುವ ಸಮಯದಲ್ಲಿ
ಜಾಣೆ ಕರೆದರು ಬಾರಳು || 4 ||
ಉಂಟುಕಾಲಕೆ ನೆಂಟರಿಷ್ಟರು
ಬಂಟರಾಗಿ ಕಾಯ್ವರು
ಕಂಟಕ ಯಮನವರು ಎಳೆವಾಗ
ನೆಂಟರಿಷ್ಟರು ಬಾರರು || 5 ||
ಒಡೆವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ
ಬಡಿದು ಹೊಡೆದು ಯಮನವರೆಳೆವಾಗ
ಎಡವಿ ಬಿದ್ದಿತು ನಾಲಿಗೆ || 6 ||
ದಿಟ್ಟತನದಲಿ ಪಟ್ಟವಾಳುವ
ಕೃಷ್ಣರಾಯನ ಚರಣವ
ಮುಟ್ಟಿ ಭಜಿಸಿರೊ ಸಿರಿ ಪುರಂದರ
ವಿಠಲೇಶನ ಪಾದವ || 7 ||
Gōvindā namō gōvindā namō
gōvindā nārāyaṇa |
gōvardhana giriyanettida
gōvindā nam’ma rakṣisō || pa ||
man̄ca bāradu maḍadi bāraḷu
kan̄cu kannaḍi bāradu
san̄citārthada dravya bāradu
mun̄ce māḍida dharmave || 1 ||
arthavyārige putraryārige
mitra bāndhavaryārige
kartu yamanavareḷedu oyvāga
artha putraru kāyvare || 2 ||
tandu bandare tanna puruṣana
hasidu baḷalidirembaḷu
ondu divasavu tāradiddare
handi nāyante kelevaḷu || 3 ||
prāṇavallabhe tanna puruṣana
kāṇade nillalāraḷu
prāṇa hōguva samayadalli
jāṇe karedaru bāraḷu || 4 ||
uṇṭukālake neṇṭariṣṭaru
baṇṭarāgi kāyvaru
kaṇṭaka yamanavaru eḷevāga
neṇṭariṣṭaru bāraru || 5 ||
oḍeve arasige oḍalu agnige
maḍadi mattobba celuvage
baḍidu hoḍedu yamanavareḷevāga
eḍavi bidditu nālige || 6 ||
diṭṭatanadali paṭṭavāḷuva
kr̥ṣṇarāyana caraṇava
muṭṭi bhajisiro siri purandara
viṭhalēśana pādava || 7 ||
Beautifully rendered by Puttur Narasimha Nayak Avaru.
Posted by shanthisethuraman on October 1, 2022 at 5:49 am
Excellent song
Gōvindā namō gōvindā namō
gōvindā nārāyaṇa |
Posted by meeraghu on October 1, 2022 at 4:26 pm
Agree.