Archive for October, 2022

Uthwana Dwadashi-Tulasi Habba – November 5th 2022

ತುಲಸೀ ಹಬ್ಬವಿವಾಹ ಉತ್ವಾನ ದ್ವಾದಶಿ – Uthwana Dwadashi/Tulasi Habba – November 5th Saturday in USA and in India.
Last year’s pictures:

Tulasi-Pooje-2020Close up of our little Tulasi Plant:

IMG_6674
Uthwana Dwadashi – Tulasi Habba or Tulasi Pooje is celebrated a fortnight after Deepavali. It signifies the day Tulasi married Lord Vishnu. On this day, Tulasi katte is decorated like a bride. Amla trees are planted along with the tulsi plant.

Pooje to be done in the evening.

What’s Tulasi?

In most Hindu homes, you find a Tulasi plant growing out of a Tulasi katte . Tulasi is considered to be a holy plant and is worshiped every morning. Tulasi has medicinal value and is often used as a herb in curing the common cold and cough.

So what’s Tulasi Habba?
Tulasi came out of the ocean during Amrita Manthan as a younger sister of Lakshmi. She too was devoted to Lord Vishnu and wanted to marry him. But Lakshmi who was already married to him did not like the idea and cursed her to become a plant. Thus the tulasi plant was born. But the all merciful Lord Vishnu took pity and fulfilling her wish declared that when he will be in the form of a saligrama, found in most temples and madhwa houses, she will remain close to him in the form of a tulasi leaf. Therefore even today a saligrama will have a tulsi leaf along with it. In front of every Hindu home there will be a tulasi katte in which a plant grows round the year.
Although the prayers are offered to Tulasi everyday by watering the plant in the morning and lighting an oil lamp before it in the evening, on Kartik Shukla Dwadashi there will be an annual Tulasi Pooja in the evening when the tulasi katte will be beautifully decorated with clay lamps.

Attached below is a screen shot of the Tulasi Vivaha Slokas and Procedure as printed in the Uttaradi Matta Panchanga. If you click on the image a bigger picture will display which has the words very very clear.

tulasi-vivaha-sloka

Here is the link for all the Tulasi slokas and songs I have recorded.

1. Slokas

2. Daily Tulasi Pooja Procedure

3. Several Songs on Tulasi

You can also listen to several songs I have recorded on YouTube and created a Playlist below:

 Ugabhoga’s on Tulasi

Seventh is a small Ugabhoga in the series is composed by Shree Purandara dasaru.

ಉಗಾಭೋಗ – 1

ಇಲ್ಲದಿದ್ದರೆ ಮುಗುಳುತೆನೆ

ಇಲ್ಲದಿದ್ದರೆ ಚಿಗುರೆಲೆ

ಇಲ್ಲದಿದ್ದರೆ ಬರಲುಕಟ್ಟಿಗೆ

ಇಲ್ಲದಿದ್ದರೆ ಬೇರುಮಣ್ಣು

ಅದೂ ಇಲ್ಲದಿದ್ದರೆ ತುಳಸಿ ತುಳಸಿ ಎಂದು ಕೂಗಿದರೆ ಸಾಕು

ಎಲ್ಲ ವಸ್ತುಗಳನೀಡಾಡುವ ಪುರಂದರವಿಠಲ ||

Ugābhōga – 1

illadiddare muguḷutene

illadiddare cigurele

illadiddare baralukaṭṭige

illadiddare bērumaṇṇu

adū illadiddare tuḷasi tuḷasi endu kūgidare sāku

ella vastugaḷanīḍāḍuva purandaraviṭhala 1।

ಉಗಾಭೋಗ – 2

ಶ್ರೀತುಲಸಿ ಇಲ್ಲದಿರೆ, ಶ್ರೀಕೃಷ್ಣತುಳಸಿ

ತುಳಸಿದಳ ಇಲ್ಲದಿರೆ, ತುಳಸಿಕಾಷ್ಠ ಇಲ್ಲದಿರೆ, ತುಳಸಿ ಶುಷ್ಕ ಅದು ಹಳೆತಾದರೆ ಏನು

ಅವನಿಗರ್ಪಿಸಬಹುದು ಇಲ್ಲದಿರೆ, ಚಿಗುರುತುಳಸಿ ಇಲ್ಲದಿರೆ, ಮುಗುಳುತೆನೆ

ಇಲ್ಲದಿದ್ದರೆ, ಬೇರು, ಮಣ್ಣು ಇಲ್ಲದಿರೆ, ತುಳಸಿ ತುಳಸಿ ಎಂದು ಕೂಗಿದರೆ ಸಾಕು

ಇಲ್ಲದಿರೆ, ಪುರಂದರವಿಠಲಯ್ಯ ಎಲ್ಲ ವಸ್ತುಗಳ ಈಡ್ಯಾಡುವ

Ugābhōga – 2

Śrītulasi illadire, śrīkr̥ṣṇatuḷasi

tuḷasidaḷa illadire, tuḷasikāṣṭha

illadire, tuḷasi śuṣka adu haḷetādare ēnu

avanigarpisabahudu

illadire, cigurutuḷasi illadire, muguḷutene

illadiddare, bēru, maṇṇu

illadire, tuḷasi tuḷasi endu kūgidare sāku

illadire, purandaraviṭhalayya ella vastugaḷa īḍyāḍuva

The meaning of the two: one should worship the Lord with Tulasi in whatever form available, be it Sri Tulasi, be it Krishna Tulasi, Tulasi seed, or even if that is not available the root of Tulasi, or even the soil in which seeds are grown, if none of the above Tulasi is available, just by reciting Tulasi Tulasi is sufficient to Lord Vittala.

A slight variation in both Ugabhoga but the gist is the same.

November Important Dates

Few keys dates to remember in November. Tulasi Pooja. Please check dates in your local calendar.

USA

03rd – Dashami – Sri Vijaya Dasara Aaradhane

04th – Ekadashi, Chaturmasa Ends
05th – Dwadashi, Tulasi Vivaha, Tulasi Kalyana
07th – Karthika Poornima
, Hunnime

19th – Ekadashi

23rd – Amavasya

24th – Hemanta Rutu, Marghashira Masa Begins

India

03rd – Dashami – Sri Vijaya Dasara Aaradhane

04th – Ekadashi, Chaturmasa Ends
05th – Dwadashi, Tulasi Vivaha, Tulasi Kalyana
08th – Karthika Poornima
, Hunnime

20th – Ekadashi

23rd – Amavasya

24th – Hemanta Rutu, Marghashira Masa Begins

All details about Tulasi Pooje at the following link:

https://meerasubbarao.wordpress.com/category/tulasi-pooja/

 Arati Jaya Tulasi Lyrics

Sixth song in the series is composed by Shree Indiresha dasaru.

ಆರತಿ ಜಯ ತುಳಸಿ

ಆರತಿ ಜಯ ತುಳಸಿ ಕಾರ್ತಿಕ ದಾಮೋದರನರಸಿ || pa ||

ನೀರನು ಎರೆದು ನೀರೆಯರ ಮನ್ನಿಸಿ ಭಾರಿ ಸುಖವ ಸುರಿಸಿ ಮೆರೆಯುವಿ || 1 ||

ಮನೆಯ ಹಿತ್ತಲದ ಅಂಗಳದೊಳ್ ನೆಲೆಸಿ ಸರ್ವ ಮಾನ್ಯಳೆನಿಸಿ ಮೆರೆಯುವಿ || 2 ||

ರಾಧಾ ಮಾಧವರೊಂದಿಗೆ ವಾಸಿಪ ಇಂದಿರೇಶನ ರಾಣಿ ಎಂದೆನಿಸಿ || 3 ||

Ārati jaya tuḷasi

ārati jaya tuḷasi kārtika dāmōdaranarasi || pa ||

nīranu eredu nīreyara mannisi bhāri sukhava surisi mereyuvi || 1 ||

maneya hittalada aṅgaḷadoḷ nelesi sarva mān’yaḷenisi mereyuvi || 2 ||

rādhā mādhavarondige vāsipa indirēśana rāṇi endenisi || 3 ||

Poojisuvene Tulasi Lyrics

Fifth song in the series is composed by Shree Gopala Krishna Vittala Dasaru.

ಪೂಜಿಸುವೆನೆ ತುಳಸಿ ನಿನ್ನ ಬೇಗ ಸಲಹೆ ನೀ || pa ||

ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯವೆ || a.pa ||

ಧ್ಯಾನ ಆವಾಹನೆಯಿಂದ ಶ್ರೀ ವರನ ಸಹ

ನಾನಾ ಮಂಗಳ ದ್ರವ್ಯದಿ ನಾನು ಪೂಜಿಪೆ ||1||

ವೃಂದಾವನದಿ ಮೆರೆಯುವವಳೆ ಸುಂದರಾಂಗಿಯೆ

ನಂದಕಂದಗೆ ಮಾಲೆಯವಳೆ ಇಂದು ಕರುಣಿಸೆ ||2||

ಗೋಪಾಲಕೃಷ್ಣವಿಠ್ಠಲನ ರೂಪ ತೋರೆ ನೀ

ಶ್ರೀಪತಿಯ ಪಾದ ತೋರಿ ಕಾಪಾಡೆ ದೇವಿ ||3||

Pūjisuvene tuḷasi ninna bēga salahe nī || pa || 

jāji mallige kusumadinda pūjegaiyyave || a.Pa || 

dhyāna āvāhaneyinda śrī varana saha 

nānā maṅgaḷa dravyadi nānu pūjipe ||1|| 

vr̥ndāvanadi mereyuvavaḷe sundarāṅgiye 

nandakandage māleyavaḷe indu karuṇise ||2|| 

gōpālakr̥ṣṇaviṭhṭhalana rūpa tōre nī 

śrīpatiya pāda tōri kāpāḍe dēvi ||3||

Vrndavanada Seveya Madi Lyrics

Fourth song in the series is composed by Shree Vadiraja Teertharu.

ವೃಂದಾವನದ ಸೇವೆಯ ಮಾಡಿ  || ಪ ||

ವೃಂದಾವನದ ಸೇವೆ ಮಾಡಿದವರಿಗೆ ಭೂ-

ಬಂಧನ ಬಿಡುಗಡೆಯಾಗುವುದು || ಅ ಪ ||

ಏಳುತಾಲಿರೆ ಕಂಡು ಕರವ ಮುಗಿದು ಬೇಗೀ-
ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆ
ಏಳು ಪ್ರದಕ್ಷಿಣೆ ಮಾಡಿದವರಿಗೆ
ಏಳು ಜನಮದ ಪಾಪ ಹಿಂಗುವುದು  || 1 ||

ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ
ಪನ್ನೀರನೆರೆದು ಪ್ರತಿದಿವಸದಲ್ಲಿ
ಸಾರಿ ಸೇವೆಯ  ಮಾಡಿದವರಿಗೊಲಿದು ಮುನ್ನ 

ಸೇರಿಸುವಳು ತನ್ನ ಪದವಿಯನು || 2 ||

ಒಡೆಯನ ಮನೆಗೆ ನೀರು ತರುತಲೊಬ್ಬಳು
ಎಡವಿ ಬಿದ್ದಳು ತನ್ನ ಕೊಡನೊಡೆಯೆ
ಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನ
ಕೊಡಳೆ ಅವಳಿಗೆ ಮೋಕ್ಷ ಪದವಿಯನು || 3 ||

ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-

ದೇಶಿಸಿದನು ತನ್ನ ಭಾಗವತದಲ್ಲಿ
ಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-

ರಾಶೆಯಿಂದಲಿ ಮುಕ್ತಿ ದೊರಕುವುದು || 4 ||

ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮ
ಎಡ ಭಾಗದಲ್ಲಿ ಲಕ್ಷ್ಮಿ ದೇವಿಯ ಸಹಿತ
ಸಡಗರದಿಂದಲಿ ಹಯವದನನ ಪಾದ
ಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ  || 5 ||

Vr̥ndāvanada sēveya māḍi || pa ||
vr̥ndāvanada sēve māḍidavarige bhū- 

bandhana biḍugaḍeyāguvudu || a pa || 

ēḷutālire kaṇḍu karava mugidu bēgī-
rēḷu lōkada mātege namōyembōdallade
ēḷu pradakṣiṇeyannu māḍidavarige
ēḷu janamada pāpa hiṅguvudu || 1 || 

sārisi raṅgavalliyaniṭṭu mēle
pannīraneredu pratidivasadalli
sāri sēveya māḍidavarigolidu munna 

sērisuvaḷu tanna padaviyanu || 2 || 

oḍeyana manege nīru tarutalobbaḷu
eḍavi biddaḷu tanna koḍanoḍeye
siḍidu śrītuḷasige tampāgalu munna
koḍaḷe avaḷige mōkṣa padaviyanu || 3 || 

kēśava emba bhūsurage śukayōgi upa- 

dēśisidanu tanna bhāgavatadalli
kāsuvīsa honnu haṇa saveyadāmunna ni- 

rāśeyindali mukti dorakuvudu || 4 || 

poḍavigadhikavāda sōde purada trivikrama
eḍa bhāgadalli lakṣmi dēviya sahita
saḍagaradindali hayavadanana pāda
biḍade pūjisi bhakti paḍeyirayya || 5 ||

Elli Sritulasiya Vanavu  Lyrics

Third song in the series is composed by Shree Purandara Dasaru. The lyrics are different at my web sites. My book has 2 completely new paragraphs.

ಎಲ್ಲಿ ಶ್ರೀತುಳಸಿಯ ವನವು 

ಅಲ್ಲೊಪ್ಪುವರು ಸಿರಿನಾರಾಯಣರು || pa ||

ಗಂಗೆ ಯಮುನೆ ಗೋದಾವರಿ ಕಾವೇರಿ 

ಕಂಗೊಳಿಸುವ ಮಣಿಕರ್ಣಿಕೆಯು
ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ 

ಸಂಗಡಿಸುತ ವೃಕ್ಷಮೂಲದಲ್ಲಿರುವುವು || 1 ||

ಧರೆಯೊಳು ಸುಜನರ ಮರೆಯದೇ

ಸಲಹುವ ವರಲಕ್ಷ್ಮಿ ಶ್ರೀತುಳಸಿ

ಪರಮ ಭಕ್ತರ ಪಾಪಗಳನೆಲ್ಲ

ತರಿದು ಪಾವನ ಮಾಡುವಳು ತುಳಸಿ || 2 ||

ಸಿರಿ ಆಯು ಪುತ್ರಾದಿ ಸಂಪದಗಳನಿತ್ತು

ಹರುಷವೀವಳು ತುಳಸಿ

ಪುರಂದರವಿಠ್ಠಲನ ಚರಣ ಕಮಲಗಳ

ಸ್ಮರಣೆಯೀವಳು ತುಳಸಿ || 3 ||

ಋಗ್ವೇದ ಯಜುರ್ವೇದ ಸಾಮ ಅಥರ್ವಣ 

ಅಗ್ಗಳಿಸಿದ ವೇದಘೋಷಗಳು
ಅಗ್ರಭಾಗದಲಿವೆ ಬೆಟ್ಟದೊಡೆಯನಲ್ಲಿ 

ಶ್ರೀಘ್ರದಿ ಒಲಿವ ಶ್ರೀಪುರಂದರವಿಠಲ || 4 ||

Elli śrītuḷasiya vanavu 

alloppuvaru sirinārāyaṇaru || pa || 

gaṅge yamune gōdāvari kāvēri 

kaṅgoḷisuva maṇikarṇikeyu
tuṅgabhadre kr̥ṣṇavēṇi tīrthagaḷella 

saṅgaḍisuta vr̥kṣamūladalliruvuvu || 1 || 

dhareyoḷu sujanara mareyadē 

salahuva varalakṣmi śrītuḷasi 

parama bhaktara pāpagaḷanella 

taridu pāvana māḍuvaḷu tuḷasi || 2 || 

siri āyu putrādi sampadagaḷanittu 

haruṣavīvaḷu tuḷasi 

purandaraviṭhṭhalana cāraṇa kamalagaḷa 

smaraṇeyīvaḷu tuḷasi || 3 || 

r̥gvēda yajurvēda sāma atharvaṇa 

aggaḷisida vēdaghōṣagaḷu
agrabhāgadalive beṭṭadoḍeyanalli 

śrīghradi oliva śrīpurandaraviṭhala || 4 ||

Elamma Tulasi Komalaveni Lyrics

Second song in the series is composed by Shree Purandara Dasaru.

ಏಳಮ್ಮಾ ತುಳಸಿ ಕೋಮಲವೇಣಿ 

ನೀಲವರ್ಣನ ರಾಣಿ ನಿತ್ಯ ಕಲ್ಯಾಣಿ || ಪ ||

ಏಳುತ್ತಲೆದ್ದು ಶ್ರೀತುಳಸಿಗೆ ಕೈಮುಗಿದು
ಏಳು ಪ್ರದಕ್ಷಿಣೆ ಹಾಕುತಲಿ
ಏಳು ಜನ್ಮದ ಪಾಪ ಕಳೆವಂಥ ತಾಯೆ ನೀ

ಕೇಳೆನ್ನ ಪ್ರಾರ್ಥನೆಯ ಶ್ರೀಹರಿಯ ರಾಣಿ || 1 ||

ಉಟ್ಟ ಪೀತಾಂಬರ ಹೃದಯದೊಳ್ ಕೌಸ್ತುಭ
ತೊಟ್ಟ ಮುತ್ತಿನ ಅಂಗಿ ತೋಳ ಬಾಪುರಿಯು
ಇಟ್ಟ ದ್ವಾದಶನಾಮ ನೊಸಲಲ್ಲೆ ತಿಲಕವು
ಲಕ್ಷ್ಮೀರಮಣನು ನಿನಗೊಪ್ಪಿದನಲ್ಲ ತುಳಸಿ || 2 ||

ಎಡದ ಕೈಯಲ್ಲಿ ಶಂಖ ಬಲದ ಕೈಯಲ್ಲಿ ಚಕ್ರ
ಎಡಬಲಕೊಪ್ಪುವ ಛತ್ರಚಾಮರವು
ಮುಡಿದ ಮಲ್ಲಿಗೆ ಹೂ ಮುಡಿಯಿಂದಲುದುರುತ
ಒಡೆಯ ಶ್ರೀ ಪುರಂದರವಿಠಲನ ರಾಣೀ ||3 ||

Ēḷam’mā tuḷasi kōmalavēṇi 

nīlavarṇana rāṇi nitya kalyāṇi || pa || 

yeluttha leddu śrītuḷasige kaimugidu
ēḷu pradakṣiṇe hākutali
ēḷu janmada pāpa kaḷevantha tāye nī 

kēḷenna prārthaneya śrīhariya rāṇi || 1 || 

uṭṭa pītāmbara hr̥dayadoḷ kaustabha
toṭṭa muttina aṅgi tōḷa bāpuriyu
iṭṭa dvādaśanāma nosalalle tilakavu
lakṣmīramaṇanu ninagoppidanalla tuḷasi || 2 || 

eḍada kaiyalli śaṅkha balada kaiyalli cakra
eḍabalakoppuva chatracāmaravu
muḍida mallige hū muḍiyindaluduruta
oḍeya śrī purandaraviṭhalana rāṇī ||3 ||

Tulasi Madhyadi Iruva Krishnana Lyrics

Hope you all had a wonderful Deepavali festival. It is the beginning of Kaartika Maasa from today, Tulasi Pooje begins. I found a book given to me by my Aunt Smt. Jayalaxmi Shamarao in 2014 called “Lakshmi Bhajanamurtha”. Last month when we visited our Maryland home, I brought back several books. This book has close to 180 songs on Goddess Lakshmi and almost 20 songs on Tulasi Devi. Thanks Jayu Aunty so much for such an amazing book.

So, I thought of posting one song each day until Tulasi Vivaha which falls on Uthwana Dwadashi November 5th. I am also traveling this weekend and next week, but hope to make sure I schedule posts.

Composed by : Shree Vysarajaru

ತುಳಸಿ ಮಧ್ಯದಿ ಇರುವ ಕೃಷ್ಣನ 

ಬಳಸಿ ನೋಡುವ ಬನ್ನಿರೆ || pa ||

ಗೊಲ್ಲ ಸತಿಯರ ಗಲ್ಲ ಪಿಡಿದು

ಎಲ್ಲ ನಟನೆಯ ತೋರುವ

ಫುಲ್ಲ ನಾಭನ ಮೆಲ್ಲ ಮೆಲ್ಲನೆ

ಎಲ್ಲ ಹೆಂಗಳು ನೋಡಿರೆ || 1 ||

ಕಾಮಿ ಜನರಿಗೆ ಕಾಮಿತಾರ್ಥವ

ಪ್ರೇಮದಿಂದಲಿ ಕೊಡುತಿಹ

ಕಾಮನೈಯನ ಚರಣ ಕಮಲವ

ನಂಬಿ ಬದುಕುವ ಬನ್ನಿರೆ || 2 ||

ಅಂಗರಾಗ ಶ್ರೀರಂಗ ಮಂಗಳ

ಸಿಂಗರದಿ ತಾ ನಿಂತಿಹ

ಮಂಗಳಾಂಗನ ಮಂಗಳಾರತಿ

ಎಲ್ಲ ಹೆಂಗಳು ನೋಡಿರೆ || 3 ||

ಒಂದು ಕೈಯಲಿ ಗಂಧಪುಷ್ಪ ಮ-

ತ್ತೊಂದು ಕೈಯಲಿ ರಂಗನು

ಮಂದಹಾಸದಿ ಇಂದುಮುಖಿಯರಿ-

ಗ್ಹೊಂದಿಸುವನತಿ ಚಂದದಿ || 4 ||

ಶುಕ್ರವಾರದಿ ಪೂಜೆಗೊಂಬುವ

ಚಕ್ರಧರ ಶ್ರೀಕೃಷ್ಣನು

ನಕ್ರಹರ ತ್ರಿವಿಕ್ರಮನು ಮನ-

ವಾಕ್ರಮಿಸಿ ಸುಖ ಕೊಡುತಿಹ || 5 ||

Tulasi madhyadi iruva krishnana
Balasi noduva bannire || pa ||

Golla satiyara galla pididu
Ella nataneya toruva
Pullanabana mella mellane
Ella hengalu nodire || 1 ||

Kami janarige kamitarthava
Premadindali kodutiha
Kamanayyana charana kamalava
Nambi badukuva bannire || 2 ||

Angaraga sriranga mangala
Singaradi ta nintiha
Mangalangana mangalarati 

ella hengalu nodire || 3 ||

Ondu kaiyalli gandha pushpa ma-
thondu kaiyali ranganu
Mandahasadi indumukiyarige-
hondisuvanati chandadi || 4 ||

Shukravaradi pujegombuva
Chakradhara srikrishnanu
Nakrahara trivikramanu mana-
vaakramisi suka kodutiha || 5 ||

Sri Vidyabhushana Avaru has rendered an amazing tune for the same.

Sarasadaratiya Belagire – Deepavali Song -Part 3

A very common song which is sung while doing Aarathi during Diwali. I have posted several years back two songs for Deepavali. And a third one now.

ಎಣ್ಣೆ ಹಚ್ಛಿದ ಹಾಡು – Diwali Song Lyrics -Part 1

ಜಯ ಜಯ ರಘುರಾಮಗೆ – Diwali Song Lyrics -Part 2

I have recorded tune for all three songs and posted on Youtube.

Amazing song composed by Shree Harapanalli Bheemavva. Bheemesha Krishna is her ankita.

Sing this while doing Aarathi on Naraka Chatrudasi.

ಸರಸದಾರತಿಯ ಬೆಳಗಿರೆ

ಸರಸಿಜ ನಯನಗೆ ಸಾಗರ ಶಯನಗೆ
ನಿರುತ ಸುಖಾನಂದ ಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯರ
ರಸಿರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ||ಪಲ್ಲ||

ನಿಂದ್ಯ ಪರಿಹರಿಸಲು ಬಂದು ಯುಧ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರ ಗೊಂದಿಸುತ
ತಂದು ಮಗಳ ಧಾರೆ ಮಂದರೋಧ್ಧರಗೆರೆಯೆ
ಜಾಂಬುವಂತ್ಯೇರ  ಸಹಿತಾನಂದದಿ ಕುಳಿತ ಹರಿಗೆ||೧||

ಮಿತ್ರೆ ಕಾಳಂದಿ ಭದ್ರಾ ಅಚ್ಯುತನೆಡಬಲ
ಲಕ್ಷಣ ನೀಲಾ ನಕ್ಷತ್ರದಂದದಲಿ
ಒಪ್ಪುವ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ||೨||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸು ಜನ್ಮದ ಪುಣ್ಯ ಒದಗಿ ಶ್ರೀ ಹರಿಯು
ಶ್ರೀಶನೊಲಿದ ಭೀಮೇಶ ಕೃಷ್ಣನು ಸೋಳ
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ||೩||

Sarasadāratiya beḷagire

sarasija nayanage sāgara śayanage

niruta sukhānanda bharitanādavage baresi uttarava kaḷuhi haruṣadi tanda

satiyara rasirukmiṇi sahita haruṣadi kuḷita harige||palla||

nindya pariharisalu bandu yudhdhava māḍi sindhugaṭṭida rāmacandra gondisuta tandu magaḷa dhāre mandarōdhdharagereye jāmbuvantyēra  sahitānandadi kuḷita harige||1||

mitre kāḷandi bhadrā acyutaneḍabala lakṣaṇa nīlā nakṣatradandadali oppuva candranantha vārijākṣanu iralu aṣṭabhāryeyara sahita nakku kuḷita harige||2||

nāśavāgali narakāsurana mandira pokku ēsu janmada puṇya odagi śrī hariyu śrīśanolida bhīmēśa kr̥ṣṇanu sōḷa sāsira satiyarindvilāsadi kuḷita harige||3||

%d bloggers like this: