Archive for October 1st, 2022

Devi Devi Jagadamba Durga Devi Jagadamba Lyrics

The sixth one. No idea who has composed this song. Found lyrics here and there. I added a line or two. I also recorded my own tune.

ದೇವಿ ದೇವಿ ಜಗದಾಂಬ ದುರ್ಗಾ ದೇವಿ ಜಗದಾಂಬ ||ಪ ||

ಮಹಿಷಾಸುರನ ವಧೆ ಮಾಡಿ ಮೈಸೂರಿನಲ್ಲಿ ಸ್ಥಿರವಾದೆ |

ಚಾಮುಂಡೇಶ್ವರಿ ನೀನಾದೆ ಚಾಮುಂಡೇಶ್ವರಿ ನಮೋಸ್ತುತೇ || ೧ ||

ಮೂಕಾಸುರನ ವಧೆ ಮಾಡಿ ಕೊಲ್ಲೂರಿನಲ್ಲಿ ಸ್ಥಿರವಾದೆ |

ಮೂಕಾಂಬಿಕೆಯು ನೀನಾದೆ ಮೂಕಾಂಬಿಕೆಗೆ ನಮೋಸ್ತುತೇ ||೨ ||

ಶಂಕರಾಚಾರ್ಯರಿಗೆ ಕೃಪೆಗೈದು ಶೃಂಗೇರಿಯಲ್ಲಿ ಸ್ಥಿರವಾದೆ |

ಶಾರದಾಂಬೆಯು ನೀನಾದೆ ಶಾರದಾಂಬೆಗೆ ನಮೋಸ್ತುತೇ || ೩ ||

ಭಕ್ತರ ಮೊರೆಯನು ಆಲಿಸುತ ಶಿವಮೊಗ್ಗದಲ್ಲಿ ಸ್ಥಿರವಾದೆ |

ಸೀತಾದೇವಿಯು ನೀನಾದೆ ಸೀತಾದೇವಿಗೆ ನಮೋಸ್ತುತೇ || ೪ ||

ಬಿಂದುಮಾಧವಗೆ ನೀನೊಲಿದು  ಬೆಲಗೂರಿನಲ್ಲಿ ಸ್ಥಿರವಾದೆ |

ಮಹಾಲಕ್ಷ್ಮಿ ತಾಯಿ ನೀನಾದೆ ಮಹಾಲಕ್ಷ್ಮಿ ತಾಯೆ ನಮೋಸ್ತುತೇ || ೫ ||

Devi devi jagadamba durga devi jagadamba

Devi devi jagadamba durga devi jagadamba llPll

Mahishasurana vadhe madi maisurinalli sthiravaade |

Chamundaeshvari neenade Chamundaeshvari namostute ll1ll

Mookasurana vadhe madi kollurinalli sthiravaade |

Mookambikryu neenade Mookambikryu namostute ll2ll

Shankaracharyarige krupegaidu shringeriyalli sthiravaade |

Sharadambeyu neenade Sharadambeyu namostute ll3ll

Bhaktara Moreyanu aalisutta shivamoggadalli sthiravaade |

Seetadeviyu neenade Seetadeviyu namostute ll4ll

Bindumaadhavage neenolidu belagurinalli sthiravaade |

Mahalakshmi taayi neenade Mahalakshmi taye namostute ll5ll

Srinivasa Enna Bittu Ninagalade Lyrics

The sixth one once again from our Shree Purandara Dasaru.

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ || ಪ ||

ಮನವೆಂಬೊ ಮಂಟಪ

ತನುವೆಂಬೊ ಹಾಸು ಮಂಚ

ಜ್ಞಾನವೆಂಬೊ ದಿವ್ಯ ದೀಪದ ಬೆಳಗಿಲಿ

ಸನಕಾದಿ ವಂದ್ಯ ನೀ ಬೇಗ ಬಾರೋ || 1 ||

ಪಂಚದೈವರು ಯಾವಾಗಲು ಎನ್ನ

ಹೊಂಚು ಹಾಕಿ ನೋಡುತಾರೆ

ಕೊಂಚಗಾರರು ಆರು ಮಂದಿ ಅವರ-

ಹಿಂಚುಮುಂಚಿಲ್ಲದೆ ಎಳೆಯುತಾರೆ || 2 ||

ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ

ಇನ್ನಾದರು ಎನ್ನ ಕೈ ಪಿಡಿಯೊ

ಘನ್ನಮಹಿಮ ಶ್ರೀ ಪುರಂದರ ವಿಠಲ

ಮನ್ನಿಸಿ ಎನ್ನನು ಕಾಯಬೇಕೋ || 3 ||

Śrīnivāsa enna biṭṭu nīnagalade || pa ||

manavembo maṇṭapa

tanuvembo hāsu man̄ca

jñānavembo divya dīpada beḷagili

sanakādi vandya nī bēga bārō || 1 ||

pan̄cadaivaru yāvāgalu enna

hon̄cu hāki nōḍutāre

kon̄cagāraru āru mandi avara-

hin̄cumun̄cillade eḷeyutāre || 2 ||

munna māḍida duṣkarmadi baḷalide

innādaru enna kai piḍiyo

ghannamahima śrī purandara viṭhala

mannisi ennanu kāyabēkō || 3 ||

%d bloggers like this: