Vaidya Banda Node Sri Venkatanembo Lyrics

The Nintha one once again from Shree Purandara Dasaru.

ವೈದ್ಯ ಬಂದ ನೋಡೇ ಶ್ರೀ ವೆಂಕಟನೆಂಬೊ |
ವೈದ್ಯ ಬಂದ ನೋಡೇ || pa ||

ವೈದ್ಯ ಬಂದನು ವೇದ ವೇದ್ಯ ನೋಡೀಗಲೇ
ಶ್ರೀದೇವಿ ರಮಣನು ಶ್ರೀನಿವಾಸನೆಂಬ || a. pa ||

ಎಷ್ಟು ಜನುಮದ ರೋಗಗಳ ತಾ ಬಲ್ಲ |
ಗಟ್ಟಿಯಾಗಿ ಧಾತುರಸಗಳನು ಬಲ್ಲ |
ಕಷ್ಟ ಪಡಿಸಲೆನ್ನ ಭವರೋಗ ಕಳೆಯುವ |
ಶಿಷ್ಟವಾದ ದೇಹ ಕೊಟ್ಟು ಕಾಯುವನೀತ || 1 ||

ಹೊನ್ನು ಹಣಂಗಳ ಅನ್ನವ ಅನುಸರಿಸಿ |
ತನ್ನ ದಾಸನೆಂಬ ನಿಜವ ನೋಡಿ |
ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |
ತನ್ನ ನಾಮಾಮೃತ ದಿವ್ಯ ಔಷಧವೀವ || 2 ||

ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |
ಈ ತನುವಿಗೆಂದೆಂದು ರೋಗ ಬರಲೀಯದು |
ಈತ ಅನಂತರೂಪದಿ ಜೀವರಿಗೆಲ್ಲ |
ಪ್ರೀತಿಯಿಂದಲಿ ಭವರೋಗ ಓಡಿಸುವ || 3 ||

ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |
ಮರ್ಮಬಲ್ಲ ರೋಗಜೀವಂಗಳ |
ನಿರ್ಮಲವಾಗಿಹ ತನ್ನ ನಾಮಸ್ಮರಣೆ |
ಒಮ್ಮೆ ಮಾಡಲು ಭವರೋಗ ಬಿಡಿಸುವ || 4 ||

ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ |
ಅನ್ನ ಮಂತ್ರ ತಂತ್ರ ಜಪವೇತಕೆ |
ಚೆನ್ನ ಶ್ರೀ ಪುರಂದರ ವಿಠಲನ್ನ ನೆನೆದರೆ |
ಮನ್ನಿಸಿ ಸಲಹುವ ವೈದ್ಯ ಶಿರೋಮಣಿ || 5 ||

Vaidya banda nōḍē

śrī veṅkaṭanembo | vaidya banda nōḍē || pa ||

vaidya bandanu vēda vēdya nōḍīgalē śrīdēvi ramaṇanu śrīnivāsanemba || a. Pa ||

eṣṭu janumada rōgagaḷa tā balla |

gaṭṭiyāgi dhāturasagaḷanu balla |

kaṣṭa paḍisalenna bhavarōga kaḷeyuva |

śiṣṭavāda dēha koṭṭu kāyuvanīta || 1 ||

honnu haṇaṅgaḷa annava anusarisi |

tanna dāsanemba nijava nōḍi |

cennāgi jihvege svādavāgiruvantha |

tanna nāmāmr̥ta divya auṣadhavīva || 2 ||

īta diṭṭisi nōḍe eḷḷaṣṭu rōgavilla |

ī tanuvigendendu rōga baralīyadu |

īta anantarūpadi jīvarigella |

prītiyindali bhavarōga ōḍisuva || 3 ||

dharmavaidyaniva jagakkella obbane |

marmaballa rōgajīvaṅgaḷa |

nirmalavāgiha tanna nāmasmaraṇe |

om’me māḍalu bhavarōga biḍisuva || 4 ||

an’ya vaidyanēke an’ya auṣadhavēke |

anna mantra tantra japavētake |

cenna śrī purandara viṭhalanna nenedare |

mannisi salahuva vaidya śirōmaṇi || 5 ||

You can listen to the tune here sung by: Mysore Ramachandrachar

One response to this post.

  1. Posted by shanthisethuraman on October 4, 2022 at 5:21 am

    Very inspired to listen the song Vaidya banda nōḍē by Purandra Dasu, feeling blessed by our Guru Rayaru and Tirupathi Venkataachalapathii.

    Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: