A very common song which is sung while doing Aarathi during Diwali. I have posted several years back two songs for Deepavali. And a third one now.
ಎಣ್ಣೆ ಹಚ್ಛಿದ ಹಾಡು – Diwali Song Lyrics -Part 1
ಜಯ ಜಯ ರಘುರಾಮಗೆ – Diwali Song Lyrics -Part 2
I have recorded tune for all three songs and posted on Youtube.
Amazing song composed by Shree Harapanalli Bheemavva. Bheemesha Krishna is her ankita.
Sing this while doing Aarathi on Naraka Chatrudasi.
ಸರಸದಾರತಿಯ ಬೆಳಗಿರೆ
ಸರಸಿಜ ನಯನಗೆ ಸಾಗರ ಶಯನಗೆ
ನಿರುತ ಸುಖಾನಂದ ಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯರ
ರಸಿರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ||ಪಲ್ಲ||
ನಿಂದ್ಯ ಪರಿಹರಿಸಲು ಬಂದು ಯುಧ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರ ಗೊಂದಿಸುತ
ತಂದು ಮಗಳ ಧಾರೆ ಮಂದರೋಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ||೧||
ಮಿತ್ರೆ ಕಾಳಂದಿ ಭದ್ರಾ ಅಚ್ಯುತನೆಡಬಲ
ಲಕ್ಷಣ ನೀಲಾ ನಕ್ಷತ್ರದಂದದಲಿ
ಒಪ್ಪುವ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ||೨||
ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸು ಜನ್ಮದ ಪುಣ್ಯ ಒದಗಿ ಶ್ರೀ ಹರಿಯು
ಶ್ರೀಶನೊಲಿದ ಭೀಮೇಶ ಕೃಷ್ಣನು ಸೋಳ
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ||೩||
Sarasadāratiya beḷagire
sarasija nayanage sāgara śayanage
niruta sukhānanda bharitanādavage baresi uttarava kaḷuhi haruṣadi tanda
satiyara rasirukmiṇi sahita haruṣadi kuḷita harige||palla||
nindya pariharisalu bandu yudhdhava māḍi sindhugaṭṭida rāmacandra gondisuta tandu magaḷa dhāre mandarōdhdharagereye jāmbuvantyēra sahitānandadi kuḷita harige||1||
mitre kāḷandi bhadrā acyutaneḍabala lakṣaṇa nīlā nakṣatradandadali oppuva candranantha vārijākṣanu iralu aṣṭabhāryeyara sahita nakku kuḷita harige||2||
nāśavāgali narakāsurana mandira pokku ēsu janmada puṇya odagi śrī hariyu śrīśanolida bhīmēśa kr̥ṣṇanu sōḷa sāsira satiyarindvilāsadi kuḷita harige||3||
Recent Comments