Third song in the series is composed by Shree Purandara Dasaru. The lyrics are different at my web sites. My book has 2 completely new paragraphs.
ಎಲ್ಲಿ ಶ್ರೀತುಳಸಿಯ ವನವು
ಅಲ್ಲೊಪ್ಪುವರು ಸಿರಿನಾರಾಯಣರು || pa ||
ಗಂಗೆ ಯಮುನೆ ಗೋದಾವರಿ ಕಾವೇರಿ
ಕಂಗೊಳಿಸುವ ಮಣಿಕರ್ಣಿಕೆಯು
ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ
ಸಂಗಡಿಸುತ ವೃಕ್ಷಮೂಲದಲ್ಲಿರುವುವು || 1 ||
ಧರೆಯೊಳು ಸುಜನರ ಮರೆಯದೇ
ಸಲಹುವ ವರಲಕ್ಷ್ಮಿ ಶ್ರೀತುಳಸಿ
ಪರಮ ಭಕ್ತರ ಪಾಪಗಳನೆಲ್ಲ
ತರಿದು ಪಾವನ ಮಾಡುವಳು ತುಳಸಿ || 2 ||
ಸಿರಿ ಆಯು ಪುತ್ರಾದಿ ಸಂಪದಗಳನಿತ್ತು
ಹರುಷವೀವಳು ತುಳಸಿ
ಪುರಂದರವಿಠ್ಠಲನ ಚರಣ ಕಮಲಗಳ
ಸ್ಮರಣೆಯೀವಳು ತುಳಸಿ || 3 ||
ಋಗ್ವೇದ ಯಜುರ್ವೇದ ಸಾಮ ಅಥರ್ವಣ
ಅಗ್ಗಳಿಸಿದ ವೇದಘೋಷಗಳು
ಅಗ್ರಭಾಗದಲಿವೆ ಬೆಟ್ಟದೊಡೆಯನಲ್ಲಿ
ಶ್ರೀಘ್ರದಿ ಒಲಿವ ಶ್ರೀಪುರಂದರವಿಠಲ || 4 ||
Elli śrītuḷasiya vanavu
alloppuvaru sirinārāyaṇaru || pa ||
gaṅge yamune gōdāvari kāvēri
kaṅgoḷisuva maṇikarṇikeyu
tuṅgabhadre kr̥ṣṇavēṇi tīrthagaḷella
saṅgaḍisuta vr̥kṣamūladalliruvuvu || 1 ||
dhareyoḷu sujanara mareyadē
salahuva varalakṣmi śrītuḷasi
parama bhaktara pāpagaḷanella
taridu pāvana māḍuvaḷu tuḷasi || 2 ||
siri āyu putrādi sampadagaḷanittu
haruṣavīvaḷu tuḷasi
purandaraviṭhṭhalana cāraṇa kamalagaḷa
smaraṇeyīvaḷu tuḷasi || 3 ||
r̥gvēda yajurvēda sāma atharvaṇa
aggaḷisida vēdaghōṣagaḷu
agrabhāgadalive beṭṭadoḍeyanalli
śrīghradi oliva śrīpurandaraviṭhala || 4 ||
Recent Comments