Fourth song in the series is composed by Shree Vadiraja Teertharu.
ವೃಂದಾವನದ ಸೇವೆಯ ಮಾಡಿ || ಪ ||
ವೃಂದಾವನದ ಸೇವೆ ಮಾಡಿದವರಿಗೆ ಭೂ-
ಬಂಧನ ಬಿಡುಗಡೆಯಾಗುವುದು || ಅ ಪ ||
ಏಳುತಾಲಿರೆ ಕಂಡು ಕರವ ಮುಗಿದು ಬೇಗೀ-
ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆ
ಏಳು ಪ್ರದಕ್ಷಿಣೆ ಮಾಡಿದವರಿಗೆ
ಏಳು ಜನಮದ ಪಾಪ ಹಿಂಗುವುದು || 1 ||
ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ
ಪನ್ನೀರನೆರೆದು ಪ್ರತಿದಿವಸದಲ್ಲಿ
ಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನ
ಸೇರಿಸುವಳು ತನ್ನ ಪದವಿಯನು || 2 ||
ಒಡೆಯನ ಮನೆಗೆ ನೀರು ತರುತಲೊಬ್ಬಳು
ಎಡವಿ ಬಿದ್ದಳು ತನ್ನ ಕೊಡನೊಡೆಯೆ
ಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನ
ಕೊಡಳೆ ಅವಳಿಗೆ ಮೋಕ್ಷ ಪದವಿಯನು || 3 ||
ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-
ದೇಶಿಸಿದನು ತನ್ನ ಭಾಗವತದಲ್ಲಿ
ಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-
ರಾಶೆಯಿಂದಲಿ ಮುಕ್ತಿ ದೊರಕುವುದು || 4 ||
ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮ
ಎಡ ಭಾಗದಲ್ಲಿ ಲಕ್ಷ್ಮಿ ದೇವಿಯ ಸಹಿತ
ಸಡಗರದಿಂದಲಿ ಹಯವದನನ ಪಾದ
ಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ || 5 ||
Vr̥ndāvanada sēveya māḍi || pa ||
vr̥ndāvanada sēve māḍidavarige bhū-
bandhana biḍugaḍeyāguvudu || a pa ||
ēḷutālire kaṇḍu karava mugidu bēgī-
rēḷu lōkada mātege namōyembōdallade
ēḷu pradakṣiṇeyannu māḍidavarige
ēḷu janamada pāpa hiṅguvudu || 1 ||
sārisi raṅgavalliyaniṭṭu mēle
pannīraneredu pratidivasadalli
sāri sēveya māḍidavarigolidu munna
sērisuvaḷu tanna padaviyanu || 2 ||
oḍeyana manege nīru tarutalobbaḷu
eḍavi biddaḷu tanna koḍanoḍeye
siḍidu śrītuḷasige tampāgalu munna
koḍaḷe avaḷige mōkṣa padaviyanu || 3 ||
kēśava emba bhūsurage śukayōgi upa-
dēśisidanu tanna bhāgavatadalli
kāsuvīsa honnu haṇa saveyadāmunna ni-
rāśeyindali mukti dorakuvudu || 4 ||
poḍavigadhikavāda sōde purada trivikrama
eḍa bhāgadalli lakṣmi dēviya sahita
saḍagaradindali hayavadanana pāda
biḍade pūjisi bhakti paḍeyirayya || 5 ||
Posted by shanthisethuraman on October 29, 2022 at 5:38 am
Excellent lyrics – song on Tulasi *Vr̥ndāvanada sēveya māḍi *|| pa || Tulasi Sothtram: Tulasi SriSagi Subay Babaharini Punnyathy Namasthy Narathanuthy Namo Narayanapriya.
Posted by meeraghu on October 29, 2022 at 8:38 am
Thanks Shanthi!