Fifth song in the series is composed by Shree Gopala Krishna Vittala Dasaru.
ಪೂಜಿಸುವೆನೆ ತುಳಸಿ ನಿನ್ನ ಬೇಗ ಸಲಹೆ ನೀ || pa ||
ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯವೆ || a.pa ||
ಧ್ಯಾನ ಆವಾಹನೆಯಿಂದ ಶ್ರೀ ವರನ ಸಹ
ನಾನಾ ಮಂಗಳ ದ್ರವ್ಯದಿ ನಾನು ಪೂಜಿಪೆ ||1||
ವೃಂದಾವನದಿ ಮೆರೆಯುವವಳೆ ಸುಂದರಾಂಗಿಯೆ
ನಂದಕಂದಗೆ ಮಾಲೆಯವಳೆ ಇಂದು ಕರುಣಿಸೆ ||2||
ಗೋಪಾಲಕೃಷ್ಣವಿಠ್ಠಲನ ರೂಪ ತೋರೆ ನೀ
ಶ್ರೀಪತಿಯ ಪಾದ ತೋರಿ ಕಾಪಾಡೆ ದೇವಿ ||3||
Pūjisuvene tuḷasi ninna bēga salahe nī || pa ||
jāji mallige kusumadinda pūjegaiyyave || a.Pa ||
dhyāna āvāhaneyinda śrī varana saha
nānā maṅgaḷa dravyadi nānu pūjipe ||1||
vr̥ndāvanadi mereyuvavaḷe sundarāṅgiye
nandakandage māleyavaḷe indu karuṇise ||2||
gōpālakr̥ṣṇaviṭhṭhalana rūpa tōre nī
śrīpatiya pāda tōri kāpāḍe dēvi ||3||
Recent Comments