Composer : Sri Vijaya Ramachandra Vithala
Picture Credit: Iskcon, Bangalore Twitter
ನಾರಸಿಂಹ ನಾರಸಿಂಹ ನಾರಸಿಂಹ || ಪ ||
ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯ ಕೃತ್ತಿ ಒತ್ತಿ ಪರಿಹರಿಸಿ
ಭೃತ್ಯನಾದ ಜೀವನ್ನ ತೃಪ್ತಿಪಡಿಸುವ ದೇವ ಭಕ್ತವತ್ಸಲ ನಾರಸಿಂಹ || 1 ||
ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿ ನಿಂದು ನಾ ನಿನ್ನ ಬೇಡೆ
ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿ ಮಂದೀಗೆ ಕುಂದು ಮಾಡಬ್ಯಾಡೆಂದೆ || 2 ||
ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾ ಪರಿ ಪೇಳಲಾರೆ
ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತ ತಂದೆ ಈ ಸುತನ ಕಾಯೋ || 3 ||
ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಎಂದು ಎನ್ನಗಲದೆ
ಬಂದು ನೆಲಸೆನ್ನಲ್ಲಿ ಅಜ್ಞಾನ ಕೊಡದಿರು ವಂದಿಸುವೆನು ನಾರಸಿಂಹ || 4 ||
ಮುಂದಾದರು ಹೃನ್ಮಂದಿರದಿ ನೆಲೆಗೊಂಡು ಸಂದರ್ಶನವನೀಯೊ ದೇವ
ಕಂದರ್ಪಹರ ವಿಜಯ ರಾಮಚಂದ್ರವಿಠಲರೇಯ ವಂದೆ ಭಕ್ತಿಯ ಪಾಲಿಸು || 5 ||
nārasinha nārasinha nārasinha || pa ||
nityadali baruva apamr̥tyuvina bādheya kr̥tti otti pariharisi bhr̥tyanāda jīvanna tr̥ptipaḍisuva dēva bhaktavatsala nārasinha || 1 ||
andu svapnadi bande dvandva pādakkeragi nindu nā ninna bēḍe sandhisi krūra dr̥ṣṭiyinda nōḍi mandīge kundu māḍabyāḍende || 2 ||
andinārabhya balu bandhanake silki nā pari pēḷalāre hindina aghaveṇisade bandu nāri sahita tande ī sutana kāyō || 3 ||
tande tāyiyu nīne bandhu baḷagavu nīne endu ennagalade bandu nelasennalli ajñāna koḍadiru vandisuvenu nārasinha || 4 ||
mundādaru hr̥nmandiradi nelegoṇḍu sandarśanavanīyo dēva kandarpahara vijaya rāmacandraviṭhalarēya vande bhaktiya pālisu || 5 ||
You can find several lyrics on Lord Narashima below: