Hope you all had a wonderful New Year. Today being Vaikunta Ekadashi thought of posting this amazing lyrcis on Lord Venkateshwara.
Composer : Sri Purandara Dasaru
Book Referred : Haridasara Bhajaneya Haadugalu
Picture Credit : Isckon, Bangalore
ಇಂದು ನಾನೇನು ಸುಕೃತವ ಮಾಡಿದೆನೊ
ಮಂಗಳ ಮಹಿಮ ವೇಂಕಟ ಬಂದ ಮನೆಗೆ ||ಪ||
ಹಾರ ಕೇಯೂರ ಹೊನ್ನುಂಗುರ ಬೆರಳ |
ಹಾರದ ನಡುವೆ ಹಾಕಿದ ಏಳು ಪದಕ ||
ತೋರ ಮುತ್ತಿನ ಕಂಠಮಾಲೆ ಮಾಲಿಕೆಯ |
ಮೇಲುಗಿರಿಯ ವೇಂಕಟ ಬಂದ ಮನೆಗೆ || 1 ||
ಎಸಳು ಸುತ್ತಿದ ಪಟ್ಟೆ ಎಸೆವ ಕಸ್ತೂರಿಯು |
ಹಸನ ಸಣ್ಣ ನಾಮ ಸಾದೂ ತಿಲಕವು ||
ಕುಸುಮ ಮಲ್ಲಿಗೆ ಜಾಜಿ ಎಸೆವ ಸಂಪಿಗೆಯು |
ವಸುಧೇಶ ಸೊಬಗ ವೇಂಕಟ ಬಂದ ಮನೆಗೆ || 2 ||
ಬಿಗಿದು ಸುತ್ತಿದ ಓಲೆ ಬಿಡುಮುತ್ತಿನೊಂಟಿ |
ಬಗೆಬಗೆಯುಂಗುರ ಧಗಧಗಿಸುತಲಿ ||
ಅಗಣಿತ ಹಸ್ತ ಕಂಕಣ ಹೊಳೆವುತಲಿ |
ಜಗದೊಳಧಿಕನು ವೇಂಕಟ ಬಂದ ಮನೆಗೆ || 3 ||
ಪಿಡಿದ ಸುದರ್ಶನ ಎಡಗೈಯ ಶಂಖ |
ಪಿಡಿದಿದ್ದ ಖಡ್ಗದಿ ಜಡರ ಮರ್ದಿಸುತ ||
ಉಡಿದಾರ ನಡುವೆ ಹೃದಯದೊಳು ಲಕ್ಷ್ಮೀ |
ಬಡವರ ಧ್ಯೇಯ ವೇಂಕಟ ಬಂದ ಮನೆಗೆ || 4 ||
ಬಾಲಚಂದ್ರನ ಪೋಲ್ವ ಓಲೆ ಕುಂಡಲವು |
ಮೇಲು ಮಾಣಿಕ್ಯ ನವರತ್ನದುಂಗುರವು ||
ಕಾಲಲಂದುಗೆಯು ನವರತ್ನದ್ಹಾವುಗೆಯು |
ಮೇಲುಗಿರಿವಾಸ ವೇಂಕಟ ಬಂದ ಮನೆಗೆ || 5 ||
ಇಂದಿರೆರಮಣ ನೀ ಎನ್ನ ಕುಲತಿಲಕ ||
ನಂದನ ಕಂದ ಮುಕುಂದ ಗೋವಿಂದ |
ಬಂದೆನ್ನ ಪಾಪಬಂಧನ ಪರಿಹರಿಸೊ ||
ಕಂದರ್ಪಜನಕ ವೇಂಕಟ ಬಂದ ಮನೆಗೆ || 6 ||
ಪಾಷಾಣ ರೂಪದ ಅಹಲ್ಯಾಶಾಪವನು |
ಶೋಷಣೆ ಮಾಡಿದ ಸೊಬಗು ರೂಪಿನಲಿ ||
ಶೇಷಾಚಲಧೀಶ ಮಹಶೇಷಶಯನ |
ದಾಸಪಾಲಕನು ವೇಂಕಟ ಬಂದ ಮನೆಗೆ || 7 ||
ಹೊಳೆವ ಪೀತಾಂಬರ ಉಡುಗೆ ಕಠಾರಿ |
ಹೊಳೆವ ಕಂಗಳ ನೋಟ ಹೊಸ ಪಂಚಬಾಣ ||
ವೀಳ್ಯದ ಬಾಯ ಕರ್ಪೂರ ಕರಡಿಗೆಯು |
ಚೆಲುವ ಶರೀರ ವೇಂಕಟ ಬಂದ ಮನೆಗೆ || 8 ||
ಗರುಡನನೇರಿ ಮೂಜಗವ ಮೋಹಿಸುತ |
ಪರಮ ವೈಷ್ಣವರ ಪಾವನವ ಪಾಲಿಸುತ ||
ಪರಿಪರಿಯ ತನ್ನ ಬಿರುದ ಪೊಗಳಿಸುತ |
ಪುರಂದರವಿಠಲ ವೇಂಕಟ ಬಂದ ಮನೆಗೆ || 9 ||
Indu Nanenu Sukrtava Madideno Mangala Mahima Venkata Banda Manege ||pa||
Hara Keyura Honnungura Berala | Harada Naduve Hakida Elu Padaka ||
Tora Muttina Kanthamale Malikeya | Melugiriya Venkata Banda Manege || 1 ||
Esalu Suttida Patte Eseva Kasturiyu | Hasana Sanna Nama Sadu Tilakavu ||
Kusuma Mallige Jaji Eseva Sampigeyu | Vasudhesa Sobaga Venkata Banda Manege || 2 ||
Bigidu Suttida Ole Bidumuttinonti | Bagebageyungura Dhagadhagisutali ||
Aganita Hasta Kankana Holevutali | Jagadoladhikanu Venkata Banda Manege || 3 ||
Pidida Sudarsana Edagaiya Sankha | Pidididda Khadgadi Jadara Mardisuta ||
Udidara Naduve Hrdayadolu Laksmi | Badavara Dhyeya Venkata Banda Manege || 4 ||
Balacandrana Polva Ole Kundalavu | Melu Manikya Navaratnadunguravu ||
Kalalandugeyu Navaratnad’havugeyu | Melugirivasa Venkata Banda Manege || 5 ||
Indireramana Ni Enna Kulatilaka || Nandana Kanda Mukunda Govinda | Bandenna Papabandhana Parihariso ||
Kandarpajanaka Venkata Banda Manege || 6 ||
Pasana Rupada Ahalyasapavanu | Sosane Madida Sobagu Rupinali ||
Sesacaladhisa Mahasesasayana | Dasapalakanu Venkata Banda Manege || 7 ||
Holeva Pitambara Uduge Kathari | Holeva Kangala Nota Hosa Pancabana ||
Vilyada Baya Karpura Karadigeyu | Celuva Sarira Venkata Banda Manege || 8 ||
Garudananeri Mujagava Mohisuta | Parama Vaisnavara Pavanava Palisuta ||
Paripariya Tanna Biruda Pogalisuta | Purandaravithala Venkata Banda Manege || 9 ||
Several lyrics on Lord Venkatesha can be found here : https://meerasubbarao.wordpress.com/lyrics/lord-sreenivasa/
Recent Comments