Composer : Sri Prasanna Venkata Dasaru
Book Ref: ಶ್ರೀ ಪ್ರಸನ್ನ ವೆಂಕಟ ದಾಸರ ಸಮಗ್ರ ಕೀರ್ತನೆಗಳು ಸಂಪುಟ ೧
Image Credit : Udupi Mutta, Twitter
ನೋಡಬಾರದೆ ಕೃಷ್ಣಾ ಕರುಣದಿ
ನೋಡಬಾರದೆ ಕೃಷ್ಣ
ಹಾಡಿ ಹರಸಿ ನಿನ್ನನೆ ಹೊಗಳುವ ಪರಿ
ಮಾಡಬಾರದೆ ಹರಿಯೆ || ಪ ||
ಹಾನಿ ಹಿತಗಳನರಿಯೆ ಸು-
ಜ್ಞಾನ ಭಕುತಿಗಳರಿಯೆ
ದೀನ ದೇಶಿಗನುದ್ಧರಿಸೆಲೆ ದೇವ
ಸಾನುರಾಗದಿ ದೇವ || 1 ||
ಏಸು ಜನ್ಮದಿ ಬಂದೆ ನಾ
ಘಾಸಿಯಾದೆನೊ ತಂದೆ
ದಾಸರೊಳು ಆವಕಾಲಭಿ-
ಲಾಷೆಯುಳ್ಳ ಶ್ರೀಲೋಲ || 2 ||
ಏನು ಹೇಳಲಿ ಮನವು ನಿನ್ನ
ಧ್ಯಾನಕೊದಗದು ಕ್ಷಣವು
ತಾನೆ ಹರಿದಡೆ ಕೇಡು ಅದರಿಂದ
ಪ್ರಾಣನಾಥ ಮುಕುಂದ || 3 ||
ಕುಂಬಳವು ಕೈಗತ್ತಿ ಕ-
ರಾಂಬುಜಕೆ ನಿನಗಿತ್ತೆ
ನಂಬಿದವಗನ್ನೇನಾರೆ ಮಾಡಯ್ಯ
ಅಂಬುಜಜ ಸ್ಮರರಯ್ಯ || 4 ||
ಕಿಂಕರೌಘದೊಳಿಡೊ ನಿ
ಶ್ಶಂಕನೆ ( ಶಶಂಕನೆ) ದಯಮಾಡೊ
ಪಂಕಜಾಕ್ಷ ಮುರಾರಿ ಪ್ರಸನ್ನ
ವೆಂಕಟಾದ್ರಿ ಪಾವನ್ನ || 5 ||
Nodabarade Krishna Karunadi Nodabarade Krishna Hadi Harasi Ninnane Hogaluva Pari Madabarade Hariye || Pa ||
Hani Hitagalanariye Su- Jnana Bhakutigalariye Dina Desiganud’dharisele Deva Sanuragadi Deva || 1 ||
Esu Janmadi Bande Na Ghasiyadeno Tande Dasarolu Avakalabhi- Laseyulla Srilola || 2 ||
Enu Helali Manavu Ninna Dhyanakodagadu Ksanavu Tane Haridade Kedu Adarinda Prananatha Mukunda || 3 ||
Kumbalavu Kaigatti Ka- Rambujake Ninagitte Nambidavaginnenare Madayya Ambujaja Smararayya || 4 ||
Kinkaraughadolido Ni Ssankane Dayamado Pankajaksa Murari Prasanna Venkatadri Pavanna || 5 ||
Posted by shanthisethuraman on January 6, 2023 at 4:43 am
Excellent song and lyrics on Udupi Krishna, the lyrics Nodabarade Krishna Karunadi Nodabarade Krishna Hadi Harasi Ninnane Hogaluva Pari Madabarade Hariye || Pa || so inspiring and the song you sang also so nice. Udupi Krishna Saranam.
Posted by meeraghu on January 6, 2023 at 9:02 am
100%. I loved the song.