Archive for January 7th, 2023

Madhvesharpanamasthu Lyrics

As I was browsing my book, the last page has the lyrics for Madhvesharpanamasthu. I had posted the video way back in 2009, but forgot to post the lyrics. This one is sung by my Father. 

Composed by : Indiresha Vittala Dasaru

ಮಧ್ವೇಶಾರ್ಪಣ ಮಧ್ವೇಶಾರ್ಪಣ ಮಧ್ವೇಶಾರ್ಪಣಮಸ್ತು

ಶುದ್ಧ ಶ್ರುತಿ ಪದ್ಧತಿ ನಡೆಸುವೆ ಮಧ್ವೇಶಾರ್ಪಣಮಸ್ತು
ವಂದಿಸುವೆನು ಗೋವಿಂದನ ಚರಣಕೆ ಮಧ್ವೇಶಾರ್ಪಣಮಸ್ತು || 1 ||

ನಿಂದು ಕರಂಗಳ ವಂದಿಸಿ ಪ್ರಾರ್ಥನೆ ಮಧ್ವೇಶಾರ್ಪಣಮಸ್ತು
ಅಂಬುಜನಾಭನ ನಿತಂಬಿನಿ ಕಮಲಕೆ ಮಧ್ವೇಶಾರ್ಪಣಮಸ್ತು || 2 ||

ಡಿಂಗರಿಗನು ನಾಜಗದಂಟೆಯ ಪ್ರಾರ್ಥನೆ ಮಧ್ವೇಶಾರ್ಪಣಮಸ್ತು
ಸಂಧ್ಯಾದೇವಿಗೆ ವಂದಿಸುತಿರುವೆನು ಮಧ್ವೇಶಾರ್ಪಣಮಸ್ತು || 3 ||

ಒಂದಿನ ಬಿಡದೆ ತ್ರಿಕಾಲದಿ ಮಧ್ವೇಶಾರ್ಪಣಮಸ್ತು
ಚಾಮರ ಹಾಕುವೆ ಶ್ರೀಮನೋಹರಗೆ ಮಧ್ವೇಶಾರ್ಪಣಮಸ್ತು || 4 ||

ಕೋಮಲ ಶಯನದಿ ಮಲಗಿಸುವೆನು ಮಧ್ವೇಶಾರ್ಪಣಮಸ್ತು
ಕೃಷ್ಣನ ಮಲಗಿಸಿ ತೊಟ್ಟಿಲ ತೂಗುವೆ ಮಧ್ವೇಶಾರ್ಪಣಮಸ್ತು || 5 ||

ಬಿಟ್ಟು ಅಭಿಮತ ಘಟ್ಟಿಸಿ ಪಾಡುವೆ ಮಧ್ವೇಶಾರ್ಪಣಮಸ್ತು
ಶ್ರೀಪತಿ ತೊಟ್ಟಿಲ ಈ ಪರಿ ತೂಗುವೆ ಮಧ್ವೇಶಾರ್ಪಣಮಸ್ತು || 6 ||

ಗುರು ಪುಷ್ಕರ ಮುನಿ ಸುರದ್ವಾರದಿ ಮಧ್ವೇಶಾರ್ಪಣಮಸ್ತು
ಕರ್ಮವು ಸಿರಿಯಂದು ಹರಿಗರ್ಪಿಸುವೆ ಮಧ್ವೇಶಾರ್ಪಣಮಸ್ತು || 7 ||

ದಾಸರ ಚರಣಕೆ ಶಿರಬಾಗುವೆ ನಾ ಮಧ್ವೇಶಾರ್ಪಣಮಸ್ತು
ದಾಸರ ಕೃತಿ ಇಂದಿರೇಶಗರ್ಪಿಸುವೆ ಮಧ್ವೇಶಾರ್ಪಣಮಸ್ತು || 8 ||

Madhvesarpana Madhvesarpana Madhvesarpanamastu

Sud’dha Sruti Pad’dhati Nadesuve Madhvesarpanamastu Vandisuvenu Govindana Caranake Madhvesarpanamastu || 1 ||

Nindu Karangala Vandisi Prarthane Madhvesarpanamastu Ambujanabhana Nitambini Kamalake Madhvesarpanamastu || 2 || Dingariganu Najagadanteya Prarthane Madhvesarpanamastu Sandhyadevige Vandisutiruvenu Madhvesarpanamastu || 3 ||

Ondina Bidade Trikaladi Madhvesarpanamastu Camara Hakuve Srimanoharage Madhvesarpanamastu || 4 ||

Komala Sayanadi Malagisuvenu Madhvesarpanamastu Krsnana Malagisi Tottila Tuguve Madhvesarpanamastu || 5 ||

Bittu Abhimata Ghattisi Paduve Madhvesarpanamastu Sripati Tottila I Pari Tuguve Madhvesarpanamastu || 6 ||

Guru Puskara Muni Suradvaradi Madhvesarpanamastu Karmavu Siriyandu Harigarpisuve Madhvesarpanamastu || 7 ||

Dasara Caranake Sirabaguve Na Madhvesarpanamastu Dasara Krti Indiresagarpisuve Madhvesarpanamastu || 8 ||

%d bloggers like this: