There are two of these lyrics one written by Sri Purandara Dasaru and another one by Sri Sreepada Rajaru.
The one written by Sri Purandara Dasaru has been posted since 2009 at the below link: https://meerasubbarao.wordpress.com/2009/04/22/vyarthavallave-janma-vyarthavallave-lyrics/
Composer : Sri Sreepada Rajaru – Ankita : Rangavittala
Picture Credit: Isckon Temple.
ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ || ಪ ||
ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮ || ಅ.ಪ ||
ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾಡಿ
ಅರಳು ಮಲ್ಲಿಗೆ ಮಾಲೆ ಹರಿಯ ಚರಣಕರ್ಪಿಸದವನ ಜನ್ಮ || ೧ ||
ಒಂದು ಶಂಖ ಉದಕ ತಂದು ಚಂದದಿಂದ ಹರಿಗೆ ಎರೆದು
ಗಂಧ ಪುಷ್ಪದಿಂದ ಹರಿಯ ವಂದನೆ ಮಾಡದವನ ಜನ್ಮ || ೨ ||
ಮುಗುಳು ತೆನೆಯಲೆಸೆವ ತುಳಸಿದಳವ ತಂದು ಪ್ರೇಮದಿಂದ
ಜಗನ್ಮಯಗೆ ಅರ್ಪಿಸಿ ಕರವ ಮುಗಿದು ಸ್ತುತಿಸದವನ ಜನ್ಮ || ೩ ||
ಭೋಗಿಶಯನನ ದಿನದಿ ಸಕಲ ಭೋಗಗಳನು ತಾನು ತೊರೆದು
ಭಾಗವತರ ಮ್ಯಾಳದಿಂದ ಜಾಗರಣೆ ಮಾಡದವನ ಜನ್ಮ || ೪ ||
ಜಂಗಮರೊಳಗಧಿಕವನಿಪ ಭಂಗುರ ಮನುಷ್ಯ ದೇಹ ಪಡೆದು
ರಂಗವಿಠ್ಠಲನೆನಿಪ ಪಶ್ಚಿಮರಂಗಗರ್ಪಿಸದವನ ಜನ್ಮ || ೫ ||
Vyarthavallave Janma Vyarthavallave || Pa ||
Tirthapadara Bhajisi Krtarthanagadavana Janma || A.pa ||
Aruna Udayadalli Eddu Saritadali Snanava Madi Aralu Mallige Male Hariya Caranakarpisadavana Janma || 1 ||
Ondu Sankha Udaka Tandu Candadinda Harige Eredu Gandha Puspadinda Hariya Vandane Madadavana Janma || 2 ||
Mugulu Teneyaleseva Tulasidalava Tandu Premadinda Jaganmayage Arpisi Karava Mugidu Stutisadavana Janma || 3 ||
Bhogisayanana Dinadi Sakala Bhogagalanu Tanu Toredu Bhagavatara Myaladinda Jagarane Madadavana Janma || 4 ||
Jangamarolagadhikavanipa Bhangura Manusya Deha Padedu Rangaviththalanenipa Pascimarangagarpisadavana Janma || 5 ||
Recent Comments