Archive for January 27th, 2023

Anandatirtharembo Arthiya Pesarulla Gurumadhva Muniraya Lyrics

P.S: Madhwa Navami Jan 29th 2023 USA & Jan 30th India

Composer : Sri Guru Pranesha Vittala Dasaru

Book Ref: Bhajana Manjari

ಆನಂದತೀರ್ಥರೆಂಬೊ ಅರ್ಥಿಯ ಪೆಸರುಳ್ಳ ಗುರುಮಧ್ವ ಮುನಿರಾಯಾ ।
ಏನೆಂಬೆ ನಾ ನಿನ್ನ ಕರುಣಕ್ಕೆ ಎಣೆಗಾಣೆ ಗುರುಮಧ್ವ ಮುನಿರಾಯಾ ॥ pa ||

ಬೇಸರದೆ ಸರ್ವರೊಳು ಶ್ವಾಸ ಜಪಗಳ ಮಾಡಿ ಗುರುಮಧ್ವ ಮುನಿರಾಯಾ |

ಶ್ರೀಶಗರ್ಪಿಸುತ ನಿನ್ನ ದಾಸರನ್ನು ಸಲಹಿದೆ ಗುರುಮಧ್ವ ಮುನಿರಾಯಾ ।| 1 ||

ಅಂದು ಹನುಮಂತನಾಗಿ ಬಂದು ಸುಗ್ರೀವಗೆ ಗುರುಮಧ್ವ ಮುನಿರಾಯಾ |

ಅಂದವಾದ ಪದವಿತ್ತಾನಂದದಿಂದ ಸಲಹಿದೆ ಗುರುಮಧ್ವ ಮುನಿರಾಯಾ ॥ 2 ||

ಕುಂತಿಯ ಕುಮಾರನಾಗಿ ಹಂತ ಕೌರವರ ಕೊಂದೆ ಗುರುಮಧ್ವ ಮುನಿರಾಯಾ ।
ಅನಂತ ಪುಣ್ಯಗಳಿಸಿ ಶ್ರೀಕಾಂತನಿಗೆ ಅರ್ಪಿಸಿದೆ ಗುರುಮಧ್ವ ಮುನಿರಾಯಾ ॥ 3 ||

ಅದ್ವೈತರನು ಕಾದಿ ಗೆದ್ದು ನಿನ್ನ ಭಕ್ತರಿಗೆ ಗುರುಮಧ್ವ ಮುನಿರಾಯಾ ।
ಶುದ್ಧ ತಾತ್ಪರ್ಯವಾಕ್ಯ ಪದ್ಧತಿಯ ತೋರಿಸಿದಿ ಗುರುಮಧ್ವ ಮುನಿರಾಯಾ ॥ 4 ||

ಗುರುಪ್ರಾಣೇಶ ವಿಠ್ಠಲ ಪರನೆಂದು ಡಂಗುರುವ ಗುರುಮಧ್ವ ಮುನಿರಾಯಾ ।
ಸಾರಿ ಸಜ್ಜನರಿಗೆ ಹರಿಯ ಲೋಕ ತೋರಿಸಿದ ಗುರುಮಧ್ವ ಮುನಿರಾಯಾ ॥ 5 ||

Anandatirtharembo Arthiya Pesarulla Gurumadhva Muniraya।

Enembe Na Ninna Karunakke Enegane Gurumadhva Muniraya॥ Pa ||

Besarade Sarvarolu Svasa Japagala Madi Gurumadhva Muniraya |

Srisagarpisuta Ninna Dasarannu Salahide Gurumadhva Muniraya।| 1 ||

Andu Hanumantanagi Bandu Sugrivage Gurumadhva Muniraya |

Andavada Padavittanandadinda Salahide Gurumadhva Muniraya॥ 2 ||

Kuntiya Kumaranagi Hanta Kauravara Konde Gurumadhva Muniraya।

Ananta Punyagalisi Srikantanige Arpiside Gurumadhva Muniraya॥ 3 ||

Advaitaranu Kadi Geddu Ninna Bhaktarige Gurumadhva Muniraya।

Sud’dha Tatparyavakya Pad’dhatiya Torisidi Gurumadhva Muniraya॥ 4 ||

Gurupranesa Viththala Paranendu Danguruva Gurumadhva Muniraya।

Sari Sajjanarige Hariya Loka Torisida Gurumadhva Muniraya॥ 5 ||

%d bloggers like this: