Composer : Sri Prasanna Venkata Dasaru
Book Ref: Bhajaneya Hadugalu
ಬೇಸರದಿಂದ ಸದಾಶಿವನೆನ್ನಿ
ಕಾಶಿಯ ಪ್ರಭು ವಿಶ್ವೇಶ್ವರನೆನ್ನಿ || pa ||
ನಂದಿವಾಹನ ಆನಂದನೆನ್ನಿ
ಸುಂದರ ಗಣಪನ ತಂದೆಯೆನ್ನಿ || 1 ||
ನಂಬಿ ಭವಾಂಬುಧಿ ಅಂಬಿಗನೆನ್ನಿ
ಅಂಬಿಕೆಯರಸು ತ್ರಿಯಂಬಕನೆನ್ನಿ || 2 ||
ಕರ್ಪುರಾಭಾಂಗ ಕಂದರ್ಪಹರನೆನ್ನಿ
ಸರ್ಪಭೂಷಣಗೆ ಸುಖಾರ್ಪಣವೆನ್ನಿ || 3 ||
ಬೇಡಿದ ಭಾಗ್ಯವನೀಡುವನೆನ್ನಿ
ಬೇಡನ ಭಕುತಿಗೆ ಕೂಡಿದನೆನ್ನಿ || 4 ||
ಶಂಭು ಗಜದ ಚರ್ಮಾಂಬರನೆನ್ನಿ
ಸಾಂಬ ಸುಗುಣ ಕರುಣಾಕರನೆನ್ನಿ || 5 ||
ಎಂದಿಗೂ ಭಾವುಕ ಮಂದಾರನೆನ್ನಿಂ
ಇಂದುಶೇಖರ ನೀಲಕಂಧರನೆನ್ನಿ || 6 ||
ದುರ್ದನುಜಾಸುರ ಮರ್ದಕನನ್ನಿ ಕ
ಪರ್ದಿಕಪಾಲಿಕ ವರ್ಧಕನೆ || 7 ||
ಶರಣು ಸುರಾರ್ಚಿತ ಚರಣನೆ ಎನ್ನಿ
ಪರಮ ಭಕ್ತರನು ಪೊರೆಯುವನೆನ್ನಿ || 8 ||
ತ್ರಿಪುರಾಂತಕ ನಿಷ್ಕಪಟನು ಎನ್ನಿ
ಅಪಮೃತಿಹರ ಖಳರಪಹರನೆನ್ನಿ || 9 ||
ದಕ್ಷನಯಜ್ಞ ವಿಶಿಕ್ಷಕನೆನ್ನಿ
ಪಕ್ಷಿಗಮನ ಭಟ ರಕ್ಷಕನೆನ್ನಿ || 10 ||
ಈಪರಿ ನೆನೆದರೆ ಪಾಪದೂರೆನ್ನಿ
ಶ್ರೀ ಪ್ರಸನ್ವೇಂಕಟಗೆ ಪ್ರಿಯನೆನ್ನಿ || 11 ||
Besaradinda sadasivanenni kasiya prabhu visvesvaranenni || pa ||
nandivahana anandanenni sundara ganapana tandeyenni || 1 ||
nambi bhavambudhi ambiganenni ambikeyarasu triyambakanenni || 2 ||
karpurabhanga kandarpaharanenni sarpabhusanage sukharpanavenni || 3 ||
bedida bhagyavaniduvanenni bedana bhakutige kudidanenni || 4 ||
sambhu gajada carmambaranenni samba suguna karunakaranenni || 5 ||
endigu bhavuka mandaranennim indusekhara nilakandharanenni || 6 ||
durdanujasura mardakananni ka pardikapalika vardhakane || 7 ||
saranu surarcita caranane enni parama bhaktaranu poreyuvanenni || 8 ||
tripurantaka niskapatanu enni apamrtihara khalarapaharanenni || 9 ||
daksanayajna visiksakanenni paksigamana bhata raksakanenni || 10 ||
ipari nenedare papadurenni sri prasanvenkatage priyanenni || 11 ||
The lyrics are self-explanatory. When you are in distress or in trouble say Sadashiva, Pray to the Father of Lord Ganesha. The one who fulfills all your wishes.
You can find several lyrics on Lord Shiva here :
1 – https://meerasubbarao.wordpress.com/lyrics/lord-shiva/
2 – https://meerasubbarao.wordpress.com/category/lord-shiva/
Recent Comments