I have posted so many lyrics composed Sri Jagannatha Dasaru. There is a page created as well.
1. https://meerasubbarao.wordpress.com/lyrics/composers/sri-jaganatha-vittala-dasaru/
2. https://meerasubbarao.wordpress.com/?s=Sri+Jagannatha+Dasaru
Composer : Sri Jagannatha Dasaru
Book Ref: Samagra Dasa Sahitya vol14
ಶರಣು ಶರಣು || ಪ ||
ಶರಣು ಶರಣು ಮೃತ್ಯುಂಜಯ ಶರಣು ಸಜ್ಜನರ ಭಯ ಪರಿಹರಿಸು ಕರುಣಾಳು ಬಿನ್ನಪವ ಕೇಳು || ಅ.ಪ ||
ವಾಸವಾದ್ಯಮರನುತ ವನಜಸಂಭವನ ಸುತ
ನೀ ಸಲಹೊ ಕೈಲಾಸವಾಸ ಈಶ
ಕೇಶ ಮೋದಾದಿ ಸಮ ತಿಳಿದು ಅಶ್ವತ್ಥಾಮ
ಶ್ರೀಶುಕ ದುರ್ವಾಸ ಸ್ಪಟಿಕ ಸಮಭಾಸ || 1 ||
ವೈಕಾರಿಕಾದಿ ತೈರೂಪ ನಿನ್ನಯ ಕೋಪ
ಶೋಕಕೊಡುವುದು ದೈತ್ಯಜನಕೆ ನಿತ್ಯ
ಲೌಕಿಕಗಳೆಲ್ಲ ವೈದಿಕವಾಗಲೆನಗೆ ಮೈ
ನಾಕಿ ಹೃತ್ಕುಮುದೇಂದು ಭಕ್ತಜನ ಬಂಧು || 2 ||
ಪವಮಾನತನಯ ನಿನ್ನವರಲ್ಲಿ ಕೊಡು ವಿನಯ
ದಿವಸ ಸವನಗಳಲ್ಲಿ ಎನ್ನಿರುವ ನೀ ಬಲ್ಲಿ
ಪವನ ದ್ವಿತಿಯರೂಪ ಸತತ ಎನ್ನಯಪಾಪ
ಅವಲೋಕಿಸದಲೆನ್ನ ಸಲಹೊ ಸುರಮಾನ್ಯ || 3 ||
ಶೇಷನಂದನ ಶೇಷಭೂಷಣನೆ ನಿಶೇಷ
ದೋಷರಹಿತನ ತೋರು ಕರುಣವನು ಬೀರು
ಶ್ರೀ ಷಣ್ಮುಖನ ತಂದೆ ಸತತ ನೀ ಗತಿಯೆಂದ
ಶೋಷಿಸು ಭವಾಮಯವ ಬೇಡುವೆನು ದಯವ || 4 ||
ಗರ್ಗ ಮುನಿಕರಪದುಮ ಪೂಜ್ಯ ಚರಣಾಬ್ಬ ಮಮ
ದುರ್ಗುಣಗಳೆಣಿಸದಲೆ ಜಗದೆ ಮೇಲೆ
ನಿರ್ಗತಾಶನ ಜಗನ್ನಾಥ ವಿಠಲನ ಸ
ನ್ಮಾರ್ಗವನೆ ತೋರು ಈ ದೇಹ ನಿನ ತೇರು || 5 ||
Saranu Saranu || Pa ||
Saranu Saranu Mrtyunjaya Saranu Sajjanara Bhaya Pariharisu Karunalu Binnapava Kelu || A.pa ||
Vasavadyamaranuta Vanajasambhavana Suta Ni Salaho Kailasavasa Isa Kesa Modadi Sama Tilidu Asvat’thama Srisuka Durvasa Spatika Samabhasa || 1 ||
Vaikarikadi Tairupa Ninnaya Kopa Sokakoduvudu Daityajanake Nitya Laukikagalella Vaidikavagalenage Mai Naki Hrtkumudendu Bhaktajana Bandhu || 2 ||
Pavamanatanaya Ninnavaralli Kodu Vinaya Divasa Savanagalalli Enniruva Ni Balli Pavana Dvitiyarupa Satata Ennayapapa Avalokisadalenna Salaho Suraman’ya || 3 ||
Sesanandana Sesabhusanane Nisesa Dosarahitana Toru Karunavanu Biru Sri Sanmukhana Tande Satata Ni Gatiyenda Sosisu Bhavamayava Beduvenu Dayava || 4 ||
Garga Munikarapaduma Pujya Caranabba Mama Durgunagalenisadale Jagade Mele Nirgatasana Jagannatha Vithalana Sa Nmargavane Toru I Deha Nina Teru || 5 ||
You can find several lyrics on Lord Shiva here :
1 – https://meerasubbarao.wordpress.com/lyrics/lord-shiva/
2 – https://meerasubbarao.wordpress.com/category/lord-shiva/
Recent Comments