Composer : Sri Khakandaki KrishnaDasaru
Book Ref: Samagra Dasa Sahitya vol 11-1
ಇದೋ ಶಿವ ಬಂದಾ ವೇದಾಂತ ವೇದದಯೋದದಿ ಬಂದಾ || ಪ ||
ಇಂದುಧರನು ಬಂದಾ ಕಂದುಗೋರಳ ಬಂದಾ
ನಂದಿವಾಹನ ಚಿದಾನಂದನು ಬಂದಾ || 1 ||
ಶಂಭುಶಂಕರ ಬಂದಾ ಜಂಭಾರಿಸುತ ಬಂದಾ
ಅಂಬಿಕಾರಮಣ ತ್ರಯಂಬಕ ಬಂದಾ || 2 ||
ಕಂತುಹರನು ಬಂದಾ ಅಂತರಾತ್ಮನು ಬಂದಾ
ಚಿಂತಿತಾರ್ಥೀವ ತ್ರಿಪುರಾಂತಕ ಬಂದಾ || 3 ||
ಗಂಗಾಧರನು ಬಂದಾ ಮಂಗಳಾಂಗನು ಬಂದಾ
ಸಂಗ ರಹಿತ ಮಹಾಲಿಂಗನು ಬಂದಾ || 4 |\
ಉರಗ ಭೂಷಣ ಬಂದಾ ಸುರರ ಪೋಷಣ ಬಂದಾ
ಗುರು ಮಹಿಪತಿ ಪ್ರಭು ಕರುಣದಿ ಬಂದಾ || 5 ||
Ido Siva Banda Vedanta Vedadayodadi Banda || Pa ||
Indudharanu Banda Kandugorala Banda Nandivahana Cidanandanu Banda || 1 ||
Sambhusankara Banda Jambharisuta Banda Ambikaramana Trayambaka Banda || 2 ||
Kantuharanu Banda Antaratmanu Banda Cintitarthiva Tripurantaka Banda || 3 ||
Gangadharanu Banda Mangalanganu Banda Sanga Rahita Mahalinganu Banda || 4 |\
Uraga Bhusana Banda Surara Posana Banda Guru Mahipati Prabhu Karunadi Banda || 5 ||
You can find several lyrics on Lord Shiva here :
1 – https://meerasubbarao.wordpress.com/lyrics/lord-shiva/
2 – https://meerasubbarao.wordpress.com/category/lord-shiva/
Recent Comments