Banda Candra Candadinda Banda Nodai

P.S: Shree Raghavendra Swamy Vardhanti (Birthday) Sunday, Feb 26th 2023

Picture Credit : SKV Temple 2022 Aaradhane Pictures

Book Reference : Bhajaneya Haadugalu

ಬಂದ ಚಂದ್ರಾ ಚಂದದಿಂದ ಬಂದ ನೋಡೈ
ಬೃಂದಾವನದಿಂದ ಮೆರೆದುಬಂದ ನೋಡೈ-ಅಕೋ !! || ಪ ||

ರಾಘವೇಂದ್ರನೆಂಬ ಚಂದ್ರ ಬಂದ ನೋಡೈ
ರಾಘವೇಶನಂಘ್ರಿಧ್ಯಾನದಿಂದ ನೋಡೈ
ಯೋಗ ಕೀರ್ತಿಕಾಂತಿಯಿಂದ ಬಂದ ನೋಡೈ
ತ್ಯಾಗರಾಜ ರಥವನೇರಿ ಬಂದ ನೋಡೈ-ಅಕೋ !! || 1 ||

ಬಾಲ ಪ್ರಹ್ಲಾದ ಚಂದ್ರ ಬಂದ ನೋಡೈ
ಲೀಲೆಯಿಂದ ಗರಳಕುಡಿದ ಕಂದ ನೋಡೈ
ಖೂಳಪಾಪಿಖಳನ ಗತಿಸಿ ಬಂದ ನೋಡೈ
ಲೋಲ ನಾರಸಿಂಹನನು ತಂದ ನೋಡೈ-ಅಕೋ !! || 2 ||

ವ್ಯಾಸರಾಜೇಂದ್ರ ಚಂದ್ರಾ ಬಂದ ನೋಡೈ
ವೇಷತಾಳಿ ರಾಜ್ಯಭಾರದಿಂದ ನೋಡೈ
ದೋಷ ಕಳೆವ ದಿವ್ಯಬೋಧದಿಂದ ನೋಡೈ
ರಾಶಿ ಗ್ರಂಥ ರಚನೆ ಗೈದು ತಂದ ನೋಡೈ-ಅಕೋ !! || 3 ||

ಕರೆವ ಕಾಮಧೇನುವೆನಿಸಿ ಬಂದ ನೋಡೈ
ಮೆರೆವ ಕಲ್ಪವೃಕ್ಷನಾಗಿ ನಿಂದ ನೋಡೈ
ಮೊರೆಯ ಕೇಳಿ ಭಕ್ತಜನಕೆ ಬಂದನೋಡೈ
ಧರೆಯ ಭಾಗ್ಯಜ್ಯೋತಿಯೆನಿಸಿ ನಿಂದ ನೋಡೈ-ಅಕೋ !! || 4 ||

ಧರಮರಾಜ್ಯಚಕ್ರವರ್ತಿ ಬಂದ ನೋಡೈ
ಪರಮಪೂಜ್ಯ ಕಾವ್ಯಮೂರ್ತಿ ನಿಂದ ನೋಡೈ
ದುರುಮತಾದ್ರಿ ಕುಲಿಶಕೀರ್ತಿಚಂದ್ರ ನೋಡೈ
ಪರಿಮಳಾರ್ಯ ಸಾರ್ವಭೌಮ ಬಂದ ನೋಡೈ-ಅಕೋ !! || 5 ||

ಸುರರು ಪುಷ್ಪವೃಷ್ಟಿಗೈವ ಸಿರಿಯು ನೋಡೈ
ಮೊರೆವ ವಾದ್ಯ ವೇದಘೋಷಸ್ವರವ ಕೇಳೈ
ಕರವಮುಗಿದು ಕುಣಿವ ಪರಿಯ ನೋಡೈ
ಸುರಪನಂತೆ ಶೋಭಿಸುವನು ತ್ವರದಿ ನೋಡೈ-ಅಕೋ !! || 6 ||

ಭವದತಾಪದಿಂದ ಗುರುವೆ-ನೊಂದೆ ನೋಡೈ
ಕವಿದ ತಾಮಸಾಂಧನಾಗಿ ನಿಂದೆ ನೋಡೈ
ಆವಿದು ಕಂದನೆಂದು ಕರುಣದಿಂದ ನೋಡೈ
ಜವದಿ ವಿಠಲೇಶನನಲ್ಮೆ ತಂದ ನೋಡೈ-ಅಕೋ !! 7 ||

Banda candra candadinda banda nodai brndavanadinda meredubanda nodai-ako!! || Pa ||

raghavendranemba candra banda nodai raghavesananghridhyanadinda nodai

yoga kirtikantiyinda banda nodai tyagaraja rathavaneri banda nodai-ako!! || 1 ||

Bala prahlada candra banda nodai lileyinda garalakudida kanda nodai

khulapapikhalana gatisi banda nodai lola narasinhananu tanda nodai-ako!! || 2 ||

Vyasarajendra candra banda nodai vesatali rajyabharadinda nodai

dosa kaleva divyabodhadinda nodai rasi grantha racane gaidu tanda nodai-ako!! || 3 ||

Kareva kamadhenuvenisi banda nodai mereva kalpavrksanagi ninda nodai

moreya keli bhaktajanake bandanodai dhareya bhagyajyotiyenisi ninda nodai-ako!! || 4 ||

Dharamarajyacakravarti banda nodai paramapujya kavyamurti ninda nodai

durumatadri kulisakirticandra nodai parimalarya sarvabhauma banda nodai-ako!! || 5 ||

Suraru puspavrstigaiva siriyu nodai moreva vadya vedaghosasvarava kelai

karavamugidu kuniva pariya nodai surapanante sobhisuvanu tvaradi nodai-ako!! || 6 ||

Bhavadatapadinda guruve-nonde nodai kavida tamasandhanagi ninde nodai

avidu kandanendu karunadinda nodai javadi vithalesananalme tanda nodai-ako!! 7 ||

2 responses to this post.

  1. Om Sree Guru raghavendtraya Namah🙏🌺🌞🌸

    Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: