Archive for February 26th, 2023

Ninna Angaladolage Hidi Anna Hako

P.S: Shree Raghavendra Swamy Vardhanti (Birthday) Sunday, Feb 26th 2023 today. Rayaru bless each and everyone of us.

Picture Credit :SRS Mutta Mantralaya

Book Reference : Bhajaneya Haadugalu

An extremely rare and unique tune I composed. Many emotions were rushing through me when I was recording this song.

ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ
ಘನ್ನ ಗುರು ಶ್ರೀರಾಘವೇಂದ್ರ ಸಂಪನ್ನಾ ।।ಪ ।।

ವರುಷವರುಷಕೆ ನಿನ್ನ ದರುಶನವ ದಯಾಮಾಡೋ
ದುರಿತನಾಶನಗೈದು ಪರಿಶುದ್ಧಗೊಳಿಸೋ
ಅರಿತು ಅರಿಯದೆ ಗೈದ ಪಾಪಕರ್ಮವ ಕಳೆದು
ನಿರುತ ಶ್ರೀಹರಿಕೃಪೆಗೆ ಪಾತ್ರನಾಗಿರಿಸೋ ।।೧।।

ನಿನ್ನ ಭಕುತರ ಪಾದ ರಜದೊಳೀಡಾಡಿಸೋ
ನಿನ್ನ ಗುಣಕೀರ್ತನೆಯ ಕಿವಿಗಳಲಿ ನಿಲಿಸೋ
ನಿನ್ನ ಪಾದೋದಕದಿ ಪಾವನ್ನ ಮಾಡೆನ್ನ
ನಿನ್ನ ರಘುಪತಿ ದಿವ್ಯ ದರುಶನವ ಕೊಡಿಸೋ ।।೨।।

ಮಂತ್ರಸದನ ನಿನ್ನ ಸಂತಸಮಹೋತ್ಸವದಿ
ಶಾಂತಿಸುಖ ಸಂಭ್ರಮದಿ ಸನ್ನಿಧಿಯೊಳಿರಿಸೋ
ಸಂತ ಶರಣರ ಭಕುತಿ ನೃತ್ಯಗೀತೆಗಳಲ್ಲಿ
ನಿಂತು ನಲಿಯುವ ಭಾಗ್ಯ ಕೊಡು ಎನಗೆ ಪ್ರಭುವೇ ।।೩।।

ಪ್ರಲ್ಹಾದರಾಜ ನೀ ಬಲ್ಲಿದನು ಜಗದೊಳಗೆ
ನಿಲ್ಲದೆ ಕಾಯ್ವನರಹರಿ ದೂತನಹುದೋ
ಎಲ್ಲ ರಾಜರರಾಜ ವ್ಯಾಸರಾಜನೇ ಸತ್ಯ
ಇಲ್ಲಿ ಶ್ರೀ ಪರಿಮಳಾರ್ಯರ ಮಹಿಮೆ ಸ್ತುತ್ಯ ।।೪।।

ಏನುಬೇಡಲಿ ನಾನು ದಾನಿ ಕರ್ಣನೇ ನಿನ್ನ
ಜ್ಞಾನಿ ಸದ್ಗುರು ಕಲ್ಪವೃಕ್ಷ ಸುರಧೇನು
ದೀನರಕ್ಷಕ ವಿಠಲೇಶ ಕರುಣಾಭರಣ
ಸಾನುರಾಗದಿ ನಿನ್ನ ಸೇವಕರೊಳಿರಿಸೋ।।೫।।

Ninna angaladolage hidi anna hako

ghanna guru sriraghavendra sampanna।।pa।।

varusavarusake ninna darusanava dayamado duritanasanagaidu parisud’dhagoliso

aritu ariyade gaida papakarmava kaledu niruta sriharikrpege patranagiriso।।1।।

ninna bhakutara pada rajadolidadiso ninna gunakirtaneya kivigalali niliso

ninna padodakadi pavanna madenna ninna raghupati divya darusanava kodiso।।2।।

mantrasadana ninna santasamahotsavadi santisukha sambhramadi sannidhiyoliriso

santa saranara bhakuti nrtyagitegalalli nintu naliyuva bhagya kodu enage prabhuve।।3।।

pral’hadaraja ni ballidanu jagadolage nillade kayvanarahari dutanahudo

ella rajararaja vyasarajane satya illi sri parimalaryara mahime stutya।।4।।

enubedali nanu dani karnane ninna jnani sadguru kalpavrksa suradhenu

dinaraksaka vithalesa karunabharana sanuragadi ninna sevakaroliriso।।5।।

%d bloggers like this: