11 th Sat | Aaradhana Of Sri Vyasaraja Theertharu – Nava Brindavana | https://meerasubbarao.wordpress.com/?s=VyasaRaja |
Book Ref : samagra-dasa-sahitya-samputa26
Composer : Sri Guru Jagannatha Vittala Dasaru
ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ || pa ||
ವ್ಯಾಸರಾಯಾ ತವೋಪಾಸನ ಮಾಳ್ಪ
ವಿಶೇಷ ಸುಜ್ಞಾನ ಭಕ್ತಿ ಲೇಸಾಗಿ ಸಲಿಸಯ್ಯಾ || a.pa ||
ದಾಸನಾಮಕ ದ್ವಿಜ ದೇಶಮುಖನ ಮನಿ –
ಕೂಸಾಗಿ ಜನಿಸಿದೆ ಭೂಸ್ಪರ್ಶವಿಲ್ಲದೆ || 1 ||
ಶ್ರೀಪಾದರಾಯರು ಈ ಪರಿ ನಿನ್ನನು
ಕಾಪಾಡಿ ನವವರ್ಷ ಭೂಪತಿ ಮಾಡಿದರೋ || 2 ||
ದಶಮವತ್ಸರದಲ್ಲಿ ಅಸಮ ಜ್ಞಾನಿ ಎನಿಸಿ
ವಸುದೇವ ಸುತನನ್ನು ಸುಸಮಾಧಿಯಲಿ ಪಡೆದೆ || 3 ||
ಅಲವಭೋಧರ ಮತ ಜಲಧಿನಿಶಾಕರ
ಕಲೆಯಂತೆ ದಿನದಿನದಲಿ ವೃದ್ಧನಾದೆ ನೀ || 4 ||
ಚಂಪಕ ತರು ಮುಖ್ಯ ಕಂಪಿತ ನದಿಯುತ
ಪಂಪಾಕ್ಷೇತ್ರದಿ ಮಹಾ ಸಂಪತ್ತಿನಿಂದಿದ್ದೆ || 5 ||
ಚಕ್ರತೀರ್ಥದಲಿ ಮರ್ಕಟ ಬರಲಂದು
ತರ್ಕಿಸಿ ಯಂತ್ರಸ್ಥ ಚಕ್ರದಿ ಬಂಧಿಸಿದೆ || 6 ||
ಪದ್ಮತೀರ್ಥದಲಿ ಇದ್ದ ನಿಜಗುರು
ಮಧ್ವರಾಯರ ತಂದು ಸಿದ್ಧಮಾಡಿ ಇಟ್ಟೆ || 7 ||
ಮಂದಜನಕೆ ಸುಧಾ ಛಂದಾಗಿ ಇದರರ್ಥ
ಪೊಂದದೆಂದು ನೀನು ಚಂದ್ರಿಕೆ ರಚಿಸಿದೆ || 8 ||
ಇನಿತೆ ಮಹಾಮಹಿಮೆ ಘನವಾಗಿ ಜನರಿಗೆ
ಅನುಭವ ಮಾಡಿಸಿದೆ ಅನುಪಮ ಚರಿತನೆ || 9 ||
ಇಭಗುಹವರತುಂಗ ಉಭಯ ಪ್ರವಾಹಮಧ್ಯ
ಶುಭಮಯ ಸ್ಥಳದಲ್ಲಿ ಅಭಯನಾಗಿ ನಿಂತೆ ನೀ || 10 ||
ಬಂದ ಜನರಘ ನಿಂದ್ರಾದೆ ಕಳೆಯುತ
ಛಂದದ ನವಶುಭವೃಂದಾವನದೊಳಿದ್ದೆ || 11 ||
ಇಂದು ನಿಮ್ಮಯ ಪಾದ ಪೊಂದಿ ಎನ್ನಯ ವೃಜಿನ –
ವೃಂದ ಪೋದವು ಅರ್ಕನಿಂದ ತಿಮಿರದಂತೆ|| 12 ||
ಮಂದಜನರಿಗೆ ಅಮಂದ ಭಾಗ್ಯನಿಧೆ
ವಂದಿಸಿ ಬೇಡುವೆ ನಂದದಿ ಸಲಹಯ್ಯ || 13 ||
ತಂದೆ ತಾಯಿಗಳು ಅಂದೆ ಬಿಟ್ಟರೆನ್ನ
ಇಂದು ರಕ್ಷಕರಿಲ್ಲವೆಂದು ನಿನ್ನನು ಸಾರ್ದೆ || 14 ||
ಪೊಂದಿ ಕೊಂಡಿರುವವನೆಂದು ಎನ್ನನು ಕೃಪೆ
ಯಿಂದ ಕರೆದು ಕಾಯೋ ನಂದಾದಾಯಕ ನೀನೆ|| 15 ||
ಇಷ್ಟದಾಯಕ ನಿನ್ನ ಮುಟ್ಟಿಭಜಿಪ ದಿವ್ಯ
ದೃಷ್ಟಿ ಪಾಲಿಸೊ ಸರ್ವೋತ್ಕøಷ್ಟ ಮಹಿಮ ನೀನೆ || 16 ||
ಮಾತು ಲಾಲಿಸೊ ನಿಜತಾತ ನೀನೆ ಸೀತಾ –
ನಾಥ ಗುರುಜಗನ್ನಾಥವಿಠಲನಾಣೆ || 17 ||
Vyāsarāyā asmadgurō vyāsarāyā || pa ||
vyāsarāyā tavōpāsana māḷpa viśēṣa sujñāna bhakti lēsāgi salisayyā || a.Pa ||
dāsanāmaka dvija dēśamukhana mani – kūsāgi janiside bhūsparśavillade || 1 ||
śrīpādarāyaru ī pari ninnanu kāpāḍi navavarṣa bhūpati māḍidarō || 2 ||
daśamavatsaradalli asama jñāni enisi vasudēva sutanannu susamādhiyali paḍede || 3 ||
alavabhōdhara mata jaladhiniśākara kaleyante dinadinadali vr̥d’dhanāde nī || 4 ||
campaka taru mukhya kampita nadiyuta pampākṣētradi mahā sampattinindidde || 5 ||
cakratīrthadali markaṭa baralandu tarkisi yantrastha cakradi bandhiside || 6 ||
padmatīrthadali idda nijaguru madhvarāyara tandu sid’dhamāḍi iṭṭe || 7 ||
mandajanake sudhā chandāgi idarartha pondadendu nīnu candrike raciside || 8 ||
inite mahāmahime ghanavāgi janarige anubhava māḍiside anupama caritane || 9 ||
ibhaguhavaratuṅga ubhaya pravāhamadhya śubhamaya sthaḷadalli abhayanāgi ninte nī || 10 ||
banda janaragha nindrāde kaḷeyuta chandada navaśubhavr̥ndāvanadoḷidde || 11 ||
indu nim’maya pāda pondi ennaya vr̥jina – vr̥nda pōdavu arkaninda timiradante|| 12 ||
mandajanarige amanda bhāgyanidhe vandisi bēḍuve nandadi salahayya || 13 ||
tande tāyigaḷu ande biṭṭarenna indu rakṣakarillavendu ninnanu sārde || 14 ||
pondi koṇḍiruvavanendu ennanu kr̥pe yinda karedu kāyō nandādāyaka nīne|| 15 ||
iṣṭadāyaka ninna muṭṭibhajipa divya dr̥ṣṭi pāliso sarvōtkaøṣṭa mahima nīne || 16 ||
mātu lāliso nijatāta nīne sītā – nātha gurujagannāthaviṭhalanāṇe || 17 ||
Plain English
Vyasaraya Asmadguro Vyasaraya || Pa ||
Vyasaraya Tavopasana Malpa Visesa Sujnana Bhakti Lesagi Salisayya || A.pa ||
Dasanamaka Dvija Desamukhana Mani – Kusagi Janiside Bhusparsavillade || 1 ||
Sripadarayaru I Pari Ninnanu Kapadi Navavarsa Bhupati Madidaro || 2 ||
Dasamavatsaradalli Asama Jnani Enisi Vasudeva Sutanannu Susamadhiyali Padede || 3 ||
Alavabhodhara Mata Jaladhinisakara Kaleyante Dinadinadali Vrd’dhanade Ni || 4 ||
Campaka Taru Mukhya Kampita Nadiyuta Pampaksetradi Maha Sampattinindidde || 5 ||
Cakratirthadali Markata Baralandu Tarkisi Yantrastha Cakradi Bandhiside || 6 ||
Padmatirthadali Idda Nijaguru Madhvarayara Tandu Sid’dhamadi Itte || 7 ||
Mandajanakea Sudha Chandagi Idarartha Pondadendu Ninu Candrike Raciside || 8 ||
Inite Mahamahime Ghanavagi Janarige Anubhava Madiside Anupama Caritane || 9 ||
Ibhaguhavaratunga Ubhaya Pravahamadhya Subhamaya Sthaladalli Abhayanagi Ninte Ni || 10 ||
Banda Janaragha Nindrade Kaleyuta Chandada Navasubhavrndavanadolidde || 11 ||
Indu Nim’maya Pada Pondi Ennaya Vrjina – Vrnda Podavu Arkaninda Timiradante|| 12 ||
Mandajanarige Amanda Bhagyanidhe Vandisi Beduve Nandadi Salahayya || 13 ||
Tande Tayigalu Ande Bittarenna Indu Raksakarillavendu Ninnanu Sarde || 14 ||
Pondi Kondiruvavanendu Ennanu Krpe Yinda Karedu Kayo Nandadayaka Nine|| 15 ||
Istadayaka Ninna Muttibhajipa Divya Drsti Paliso Sarvotkaøsta Mahima Nine || 16 ||
Matu Laliso Nijatata Nine Sita – Natha Gurujagannathavithalanane || 17 ||
Recent Comments