Archive for the ‘lyrics’ Category

TappugaLella Pariharisuva – ತಪ್ಪುಗಳೆಲ್ಲ ಪರಿಹರಿಸುವ Lyrics

Composer : Sree Prasanna Venkatesha Dasaru
Contributed by : Sri. Canchi Ravi.

ತಪ್ಪುಗಳೆಲ್ಲ ಪರಿಹರಿಸುವ ನಮ್ಮಪ್ಪನಲ್ಲವೇ ನೀನು   ||               (.)

ಒಪ್ಪಿದ ಬಳಿಕ ಅವಗುಣವೆಣಿಸದೆ ತಿಮ್ಮಪ್ಪ ಸಲಹೋ ನೀನು     (. .)

ಬೆಳಗಿನ ಝಾವದಿ ಹರಿ ನಿಮ್ಮ ಸ್ಮರಣೆಯ ಹಲುಬಿಕೊಳ್ಳದ ತಪ್ಪು

ಮಲಮೂತ್ರ ವಿಸರ್ಜನೆ ಮೃತ್ತ್ರಿಕೆಯಲಿ ನಾ ಮಲಿನವ ತೊಳೆಯದ ತಪ್ಪು

ತುಳಸಿ ಗೋ ವೃಂದಾವನ ಸೇವೆಗೆ ನಾ ಆಲಸ್ಯವ ಮಾಡಿದ ತಪ್ಪು

 

ನಳಿನ ಸಖೋದಯಗರ್ಘ್ಯವ ನೀಡದ ಕಲಿವ್ಯಾಸಂಗದ ತಪ್ಪು  || 1 ||

ಅನುದಿನ ವ್ರತ ನೇಮಗಳನು ಮಾಡದ ತನುವಂಚನೆಯ ತಪ್ಪು

ಕ್ಷಣಲವ ಹರಿಗುಣ ಜಿಜ್ಞಾಸಿಲ್ಲದ ಮನವಂಚೆನಯ ತಪ್ಪು

ಮುನಿಸುರಭೂಸುರ ರಾರಾಧಿಸದ ಧನ ವಂಚನೆಯ ತಪ್ಪು

ವನಜಾಕ್ಷನೆ ನಿನ್ನ ಪಾದ ವಿಮುಖ ದುರ್ಜನ ಸಂಸರ್ಗದ ತಪ್ಪು     || 2 ||

 

ಕಣ್ಣಿಲಿ ಕೃಷ್ಣಾಕ್ರುತಿ ನೋಡದೆ ಪರ ಹೆಣ್ಣಿನ ನೋಡುವ ತಪ್ಪು

ನಿನ್ನ ಕಥಾಮೃತ ಕೇಳದೆ ಹರಟೆಯ ಮನ್ನಿಸುವ ಕಿವಿ ತಪ್ಪು

ಅನ್ನವ ನಿನಗರ್ಪಿಸದ ಜ್ಞಾನದಿ ಉಣ್ಣುವ ನಾಲಿಗೆ ತಪ್ಪು

ಚಿನ್ಮಯ ಚರಣಕ್ಕೆರಗದೆ ಇಹ ಉನ್ಮತ್ತರ ನಮಿಸುವ ಶಿರ ತಪ್ಪು   ||  3 ||

           

ಆನಂದದಿ ಸತ್ಕೀರ್ತನೆ ಮಾಡದೆ ಹೀನ ವಿವಾದದ ತಪ್ಪು

ಶ್ರೀನಾಥಾರ್ಚನೆ   ಅಲ್ಲದೆ ನಾನಾ ಊಳಿಗ ಮಾಡುವ ಕರ ತಪ್ಪು

ಶ್ರೀನಿರ್ಮಾಲ್ಯದಿ ವಿರಹಿತ ಸುರಭಿಯ ಘ್ರಾಣಿಪ ನಾಸಿಕ ತಪ್ಪು

ಶ್ರೀನಾರಾಯಣ ಯಾತ್ರೆಯ ಮಾಡದ ನಾ ನಡೆಯುವ ಪಾದದ ತಪ್ಪು   || 4 ||

 

ಯಜ್ಞಾತ್ಮಗೆ ಯಜ್ಞರ್ಪಿಸದೆ ಕಾಮಾಗ್ನಿಯೊಳ್ಹೋರುವ ತನು ತಪ್ಪು

ಅಜ್ಞಾನಜ್ಞಾನದಿ ಕ್ಷಣಲವ ಶತವೆಗ್ಗಳ ಗಳಿಸುವ ಮನಸಿನ ತಪ್ಪು

ಯಜ್ಞದಿ ಕರ್ಮವ ಶೌಚವ ಹರಿದು ಸಮಗ್ರ ಗುಹ್ಯದ ಕೃತಿ ತಪ್ಪು

ಯಜ್ಞೇಶ್ವರ ಪ್ರಸನ್ನವೀಂಕಟ ಕೃಫ್ಣನ ನಾಮಾಗ್ನಿಗೆ ಭವತೃಣ ತಪ್ಪು   || 5 ||

 

tappugaLella pariharisuva nammappanallavE neenu ||                   (pa.)

oppida baLika avaguNaveNisade timmappa salahO neenu ||       (a. pa.)

 

BeLagina jhaavadi hari nimma smaraneya halubikoLLada tappu

Malamutravisarjane mruttikeyali naa malinava toLeyada tappu

Tulasi gO vrindavana sEvege naa Alasyava maaDida tappu

naLinasakhOdayagarghyava neeDada kalivyAsangada tappu    || 1 ||

 

Anudina vrata nEmagaLanu maaDada tanuvanchaneya tappu

Kshanalava HariguNa jijnAseyillada manavanchaneya tappu

MunisurabhoosurarAdhisada dhana vanchaneya tappu

Vanajakshajane ninna paada durjana samsargada tappu  || 2 ||

 

KaNNili Krishnakruti nODade para heNNina nODuva tappu

Ninna kathAmruta kElade haraTeya mannisuva kivi tappu

Annava ninagarpisada jyanadi uNNuva nAlige tappu

Chinmaya charaNekkeragade iha unmattara namisuva Sira tappuu ||  3 ||

 

Anandadi satkeertane maaDade heena vivAdada tappu

SreenathArchane illade naanaa ooLiga mAduva kara tappu

Sreenirmalyadi virahita surabhiya ghrANisupa nAsika tappu

Sreenarayana yaatreya maaDada naa naDeyuva paadada tappu || 4 ||

 

YagjnAtmage yagjnarpisade kaamaagniyoLhOruva tanu tappu

AgjnAna gjnAnadi kshaNa lavaveggaLagaLisuva manasina tappu

Yagjnadi karmava shouchava haridu samagra guhyada Sruti tappu

Yagjneswara prasanna venkatakrishnana naamaagnige bhavatruNa tappu  || 5 ||

Ee Pariya Sobagava – ಈ ಪರಿಯ ಸೋಬಗವ Lyrics

Composer : Sree Purandara Dasaru
Contributed by : Sri. Canchi Ravi.

ಪರಿಯ ಸೋಬಗವ ದೇವರಲಿ ನಾ ಕಾಣೆ  |
ಗೋಪಿಜನಪ್ರಿಯ ಗೋಪಾಲಗಲ್ಲದೆ      ||                           (.)
 
 
ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ  |
ಸಿರಿಯತನದಲಿ ನೋಡೆ ಶ್ರೀಕಾಂತನು ||
ಹಿರಿಯತನದಲಿ ನೋಡೆ ಸರಸಿಜೊದ್ಭವನಯ್ಯ |
ಗುರುವುತನದಲಿ ನೋಡೆ ಜಗದಾದಿ ಗುರುವು  ||                     .
 
ಪಾವನತ್ವದಿ ನೋಡೆ ಅಮರ ಗಂಗಾಜನಕ  |
ದೇವತ್ವದಲಿ ನೋಡೆ ದಿವಿಜರೊಡೆಯ ||
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ |
ಆವ ಧೈರ್ಯದಿ ನೋಡೆ ಅಸುರಾಂತಕ ||                             .
 
ಗಗನದಲಿ ಸಂಚರಿಪ ಗರುಡದೇವನೆ ತುರಗ |
ಜಗತೀಧರ ಶೇಷ ಪರಿಯಂಕ ಶಯನ ||
ನಿಗಮಗೋಚರ ಪುರಂದರ ವಿಠಲಗಲ್ಲದೇ   |
ಮಿಗಿಲಾದ ದೈವಗಳಿಗೀ ಭಾಗ್ಯ ಉಂಟೇ?  ||                          
 
                                               
                                                            ooooooooo
 
 
Ee pariya sobagAva dEvarali naa kANe  |
gOpijanapriya gOpAlagallade   ||                       (pa.)
 
doreyatanadali nODe dharanidEvige ramaNa  |
siriyatanadali nODe sreekAntanu  ||
hiriyatanadali nODe sarasijodbhavanayya  |
guruvutanadali nODe jagadaadiguruvu  ||          1.
 
pAvanatvadi nODe amaragangA janaka  |
dEvatvadali nODe divijaroDeya ||
lAvaNyadali nODe lOkamOhakanayya |
aava dhairyadi nODe asurAntaka  ||                     2.
 
Gaganadali sancharipa garuDa dEvane turaga |
Jagateedhara SeSha pariyanka Shayana ||
nigamagOchara Purandara VithalagalladE |
migilAda daivagaligee bhagya unte? ||                 3.

Ninna Magana Looti Ghanavamma – ನಿನ್ನ ಮಗನ ಲೂಟಿ ಘನವಮ್ಮ Lyrics

Composer : Sree Purandara Dasaru
Contributed by : Sri. Canchi Ravi.

Mr. CRavi says this song is about little Krishna’s leelegalu.

 

ನಿನ್ನ ಮಗನ ಲೂಟಿ ನವಮ್ಮ ||

ಕರೆದು ರಂಗಗೆ ಬುದ್ಧಿಯ ಪೇಳೇ ಗೋಪೆಮ್ಮ ||         ()

 

ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ |

ಕಾಲು ತಂದು ಕೇಲಿನೊಳಗೆ ಅತ್ತಿ ಪೋದನಮ್ಮ ||

ಕೋಲ ತಂದು ಹೊಡಿಯ ಹೋದರೆ ಓಡಿ ಪೋದನಮ್ಮ ||       ()

 

ಮೊಸರು ಮಾರುವಲ್ಲಿ ಇವನ ಗಾಳಿ ಘನವಮ್ಮ   |

ಮೊಸರು ಮಾರುವವರು ಮೊರೆಯಿಡುವಾರಮ್ಮ ||

ಶಿಶುವಿನ ಕೈಯಲ್ಲಿ ಬೆಣ್ಣೆ ಉಳಿಗೊಡನಮ್ಮ   |

ಶಶಿಮುಖಿಯರು ಹೀಗೆ ದೂರುವರಮ್ಮ         ||                       ()

 

ಊರೊಳು ಬರಲೀಸ ಕೇರಿಯೊಳು ಸುಳಿಯಲೀಸ |

ಈರೇಳು ಲೋಕಕ್ಕೆ ಒಡೆಯ ತಾನಂತೆ ||

ಧೀರಶ್ರಿ ಪುರಂದರ ವಿಠಲ ರಾಯನ |

ಕೇರಿ ಬಸವನ ಮಾಡಿಬಿಟ್ಟೆ ಗೋಪೆಮ್ಮ ||                                    || ೩ ||

 

Ninna magana looTi ghanavamma

Karedu rangage buddhiya pElE gopemma ||     (pa)

 

hAlu kAyuvalli ivana gALi ghanavamma

kAlu tandu kElinoLage athi podanamma

kOla tandu Hodiya hOdare Odipodanamma ||   1.

 

Mosaru maaruvalli ivana gALi ghanavamma

Mosaru mAruvavaru more iDuvAramma

ShiShuvina kaiyalli beNNe ooLigodanamma

ShaShimukhiyaru heege pELuvaramma ||           2.

 

OoroLu baraleesa kEriyoLu suLiyaleesa

EerElu lokakke oDeya taanantE

Dheerasri Purandara Vithala Rayana

kEri basavana maaDibiTTe gOpemma ||             3.

 

You can listen to the song here in kannadaaudio.com.

Jaganmohanane-Krishna by Puttur Narasimha Nayak

 

Kelano Hari Talano – ಕೇಳನೋ ಹರಿ ತಾಳನೊ Lyrics

Composer : Sree Purandara Dasaru
Contributed by : Sri. Canchi Ravi.

 
ಕೇಳನೋ  ಹರಿ ತಾಳನೊ
ತಾಳ  ಮೇಳಗಳಿದ್ದು  ಪ್ರೇಮವಿಲ್ಲದ  ಗಾನ ||ಪ||
ತಂಬೂರಿ ಮೊದಲಾದ  ಅಖಿಲ  ವಾದ್ಯಗಳಿದ್ದು  ಕೊಂಬು  ಕೊಳಲು  ಧ್ವನಿ  ಸ್ವರಗಳಿದ್ದು
ತುಂಬುರು  ನಾರದರ  ಗಾನ  ಕೇಳುವ  ಹರಿ  ನಂಬಲರ   ಈ  ಧಂಬಕದ  ಕೂಗಾಟ || ೧ ||
ನಾನಾ  ಬಗೆಯ  ರಾಗ  ಭಾವ  ತಿಳಿದು  ಸ್ವರ  ಜ್ಞಾನ  ಮನೋಧರ್ಮ  ಜಾತಿಯಿದ್ದು
ದಾನವಾರಿಯ  ದಿವ್ಯ  ನಾಮ  ರಹಿತವಾದ  ಹೀನ  ಸಂಗೀತ  ಸಾಹಿತ್ಯಕ್ಕೆ  ಮನವಿಟ್ಟು || ೨ ||
ಅಡಿಗಡಿಗಾನಂದ ಬಾಷ್ಪ  ಪುಳಕದಿಂದ  ನಡೆ  ನುಡಿಗೆ  ಶ್ರೀ ಹರಿಯೆನ್ನುತ
ದೃಢ  ಭಕ್ತರನು  ಕೂಡಿ  ಹರಿ ಕೀರ್ತನೆ  ಪಾಡಿ  ಕಡೆಗೆ  ಪುರಂದರ  ವಿಠಲನೆಂದರೆ  ಕೇಳವ || ೩ ||

kELanO hari tALano
tALa mELagaLiddu prEmavillada gAna || pa||
tambUri modalAda akhila vAdyagaLiddu kombu koLalu dhvani svaragaLiddu
tumburu nAradara gAna kELuva hari nambalAra I Dhambakada kUgATa || 1 ||
nAnA bageya rAga bhAva tiLidu svara jnAna manOdharma jAtiyiddu
dAnavAriya divya nAma rahitavAda hIna sangIta sAhityakke manavittu || 2||
aDigaDigAnanda bAShpa puLakadinda naDE nuDige shrI hariyennuta
drDha bhaktaranu kUDi hari kIrtane pADi kaDege purandara viTTalanendare kELva || 3||

Listen to the song here:

 

 

Ittige Mele Ninta Namma Vittala – ಇಟ್ಟಿಗೆ ಮೇಲೆ ನಿಂತಾ ನಮ್ಮ ವಿಠಲ Lyrics

I saw this lyrics posted on Facebook from Mr. Achyut Kumar. I asked for his permission to post this here. Thanks so much Sir for allowing me to post the lyrics.

LordVittala

ಇಟ್ಟಿಗೆ ಮೇಲೆ ನಿಂತಾ ನಮ್ಮ ವಿಠಲ ತಾನು |
ಪುಟ್ಟ ಪಾದ ಊರಿದಾನು ದಿಟ್ಟ ತಾನು || pa ||
ಪುಟ್ಟ ಪಾದ ಊರಿದಾನು ಗಟ್ಟಿಯಾಗಿ ನಿಂತಾ ನಮ್ಮ||
ಟೊಂಕದ ಮೇಲೆ ಕೈಯನ್ನಿಟ್ಟು |
ಭಕ್ತರು ಬರುವುದು ನೋಡುವನಮ್ಮ!
ಪಂಢರಪುರದಲಿ ಇರುವನಮ್ಮ!
ಪಾಂಡುರಂಗ ನೆಂಬುವರಮ್ಮ!
ಚಂದ್ರಭಾಗಾ ಪಿತನಿವನಮ್ಮ!
ಅಂಗನೆ ರುಕ್ಮಿಣಿ ಅರಸನಮ್ಮ !
ಕನಕದಾಸೆ ಇವಗಿಲ್ಲವಮ್ಮ!
ಹಣವು ಇವಗೆ ಬೇಕಿಲ್ಲವಮ್ಮ!
ನಾದಬ್ರಹ್ಮ ನೆಂಬುವರಮ್ಮ!
ಭಕ್ತರ ಭಜನೆ ಸಾಕಿವಗಮ್ಮ!
ಕರಿಯ ಕಂಬಳಿ ಹೊದ್ದಿಹನಮ್ಮ!
ಹಣೆಗೆ ನಾಮ ಹಚ್ಚಿಹನಮ್ಮ!
ತುಳಸಿ ಮಾಲೆ ಹಾಕಿಹನಮ್ಮ!
ಪುರಂದರ ವಿಠಲನಿಗೊಲಿದಿಹನಮ್ಮ!

I converted the same in English:

Ittige mele ninta namma vittala taanu

putta pada oridanu ditta taanu

putta pada oridanu gattiyagi ninta namma ||

Tonkada mele kaiyanittu

Bhaktaru baruvadu noduvaramma

pandarapuradalli iruvanamma

Panduranga nembuvaramma

Chandrabhaga pitanivanamma

Aangane rukmini arasanamma

Kanakadaase Ivagillamma

Hanavu Ivage bekillamma

Nada Brahma Nembuvaramma

Bhaktara Bhajane Sakivagamma

Kariya Kambali Hodihanamma

Hanege Nama Hachihanamma

Tulasi Maale Hakihanamma

Purandara Vitallage Olidihanamma

 

 

Rayare Gathiyu Namage – ರಾಯರೇ ಗತಿಯು ನಮಗೆ Lyrics

IMG_5360

How appropriate is this song for all of us who are devotees of our Beloved Rayau. I saw this song lyrics posted on Facebook by Sri. Nagaraju Haveri. I requested his permission to post this here. Thanks, Sir for the lyrics.
( ಶ್ರೀ ಶ್ಯಾಮಸುಂದರದಾಸರ ಕಣ್ಣಲ್ಲಿ ಶ್ರೀ ಗುರುಸಾರ್ವಭೌಮರು )

ರಾಗ : ಕಾಂಬೋಧಿ ತಾಳ : ಝಂಪೆ

ರಾಯರೇ ಗತಿಯು ನಮಗೆ ।
ವಾಯು ಮತ ಮತೋದ್ಧಾರ ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।।

ಶುಕ ಪಿಕ ಮೊದಲಾದ ವಿಕುಲಕ್ಕೆ ಮಧುರ ಫಲ ।
ಯುಕುತವಾಗಿಹ ಚೂತ ಸುಕುಜ ಗತಿಯೋ ।
ಮುಕುತಿಗೆ ಸುಜ್ಞಾನ ಭಕುತಿ ವಿರಕುತಿ ಗತಿಯು ।
ಅಕಳಂಕ ಶ್ರೀಮಂತ್ರ ಮಂದಿರದಿ ನೆಲೆಸಿಪ್ಪ ।। ಚರಣ ।।

ಋಷಿಗಳಿಗೆ ಪ್ರಣವೆ ಗತಿ ರುಷಗಳಿಗೆ ಜಲವೆ ಗತಿ ।
ಸಸಿಗಳಭಿವೃದ್ಧಿಗೆ ಶಶಿ ರವಿ ಗತಿಯೋ ।
ಶಿಶುಗಳಿಗೆ ಜನನಿ ಗತಿ ಪಶುಗಳಿಗೆ ತೃಣವೆ ಗತಿ ।
ಅಸಮ ಮಹಿಮೆಯಲಿ ಮೆರೆವ ಮಿಸುನಿಶಯ್ಯನಜರಾದ ।। ಚರಣ ।।

ಕಾಮಿನಿ ಮಣಿಯರಿಗೆ ಕೈಪಿಡಿದ ಕಾಂತ ಗತಿ ।
ಭೂಮಿ ಬುಧರಿಗೆ ಮಧ್ವ ಶಾಸ್ತ್ರ ಗತಿಯೋ ।
ತಾಮರಸ ಸಖ ಸುತನ ಧಾಮ ಭಯ ಪೋಪುದಕೆ ।
ಶ್ಯಾಮಸುಂದರವಿಠ್ಠಲ ಸ್ವಾಮಿ ನಾಮವೆ ಗತಿಯೋ ।। ಚರಣ ।।

ವಿವರಣೆ :

ಶುಕ = ಗಿಳಿ
ಪಿಕ = ಕೋಗಿಲೆ
ವಿಕುಲ = ಪಕ್ಷಿ ಕುಲ
ಚೂತ ಸುಕುಜ = ಒಳ್ಳೆಯ ಮಾವಿನ ಮರ
ಪ್ರಣವ = ಓಂಕಾರ
ರುಷಗಳು = ಜಲಚರ ಪ್ರಾಣಿಗಳು
ಮಿಸುನಿಶಯ್ಯಜ = ಹಿರಣ್ಯಕಶಿಪುವಿನ ಮಗ
ತಾಮರಸ ಸಖ = ಕಮಲದ ಹೂವಿಗೆ ಮಿತ್ರನಾದ ಸೂರ್ಯ
ಸುತನ = ಯಮಧರ್ಮರಾಜರ
ಧಾಮ = ಪುರಕ್ಕೆ

ಶ್ರೀ ರಾಯರನ್ನು ಯಾರು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಪೂಜಿಸುತ್ತಾರೋ, ಭಜಿಸುತ್ತಾರೋ, ಶ್ರೀ ರಾಯರೇ ಗತಿಯೆಂದು ಸರ್ವ ಕಾಲಗಳಲ್ಲಿಯೂ ಸೇವಿಸುತ್ತಾರೋ ಅವರಿಗೆ ಶ್ರೀ ಯಮಧರ್ಮರಾಜರ ಭಯವು ಅಂದರೆ ” ನರಕ ” ದ ಭಯ ಇಲ್ಲ ಎನ್ನುವುದನ್ನು ಶ್ರೀ ಶ್ಯಾಮಸುಂದರದಾಸರು ಶ್ರೀ ರಾಘವೇಂದ್ರ ಗುರುರಾಯರ ಅದ್ಭುತ ಮಹಿಮೆಯನ್ನು ಅತಿ ಮನೋಜ್ಞವಾಗಿ ಸರಳ ಸುಂದರವಾಗಿ ತಿಳಿಸಿದ್ದಾರೆ.

ನಮ್ಮ ನಿಮ್ಮೆಲ್ಲರಿಗೂ ರಾಯರೇ ಗತಿಯು ನಮಗೆ ಶ್ರೀ ರಾಘವೇಂದ್ರ ಗುರುರಾಯರೇ ಗತಿಯು!!!!!

Savadhanadindiru Manave – ಸಾವಧಾನದಿಂದಿರು ಮನವೇ Lyrics

Shri. Canchi Ravi who is one of the greatest admirers of my blog has sent us this amazing lyrics by Shree. Purandara Dasaru. I have attached lyrics in both Kannada and English. Thanks so much Sir for the lyrics. And I appreciate all your comments, your support, and the books you sent me about our Beloved Rayaru.

 

 Lyrics in Kannada:
ಸಾವಧಾನದಿಂದಿರು ಮನವೇ   |
ದೇವರು ಕೊಟ್ಟಾನು ಕೊಟ್ಟಾನು ಕೋಟ್ಟಾನು  || (pa)
ಡಂಭವ ನೀ ಬಿಡಲೊಲ್ಲೇ ರಂಗನ  |
ನಂಬಿದ ಆ ಕ್ಷಣದಲ್ಲೇ  ||                             (೧)

ದೃಢ ಮಾಡಾತನ ಸ್ಮರಣೆ  ಭಕ್ತರ  |
ಬಿಡಾತನು ಅತಿ ಕರುಣಿ              ||               (೨)

ಪುರಂದರ ವಿಠಲನ ನಂಬು ನಿನಗಿಹ  |
ಪರಲೋಕದ ಸಂಪದಗಳನೆಲ್ಲ    ||             (೩)
Lyrics in English:
Savadhanadindadiru Manave
Devaru Kottanu Kottanu Kottanu || pa||
Dhambhava nee Bidalolle Rangana |
Nambida Aa Kshanadalle || 1 ||
Drudha Maddatana Smarane Bhakthara |
Bhidatanu Aathi Karuni || 2 ||
Purandara Vittalana Nambu Ninagiha |
Paralokhada Sampadagalanella || 3||
And you can listen to the song sung by Puttur Narasimha Nayak
Follow

Get every new post delivered to your Inbox.

Join 1,569 other followers

%d bloggers like this: