Shri Vadirajaru


vadirajaru
A new song of Guru Jagannatha Dasaru which is rarely available shared by Mr. Canchi Ravi.  This is on the lines of ‘Tunga teeradi ninta suyativaran yaare peLammayya’ on Rayaru.
ಸೊದಾ ಪುರದಲ್ಲಿ ನಿಂತ ಸುಯತಿವರನ್ ಯಾರೇ ಪೇಳಮ್ಮಯ್ಯ |        (ಪ.)
 
ಭೂಧರ ಹಯಮುಖ ಪಾದವ ಭಜಿಸುವ 
ವಾದಿಗಜಕೆ ಮೃಗರಾಜ ಕಾಣಮ್ಮ      (ಅ. ಪ.)
 
ಅಂಚೆವಾಹನ ಪ್ರಪಂಚದಿ ಪೊಳೆವ ವಿ
ರಿಂಚಿಗೆ ಸಮನೇನೆ ಪೇಳಮ್ಮಯ್ಯ |
ಸಂಚಿತ ಕರ್ಮವ ಕುಂಚಿಸಿ ಭಕ್ತರ
ಚಂಚಲ ಬಿಡಿಸುವನ್ಯಾರೇ ಪೇಳಮ್ಮಯ್ಯ |
ಮಿಂಚುರಾಶಿಗೆ ಸಮ ಪಂಚವೃಂದಾವನ
ಲಾಂಚಿತನಾಗಿಹನ್ಯಾರೆ ಪೇಳಮ್ಮಯ್ಯ |
ಚಂಚಲಾಕ್ಷಿ ತಿಳಿ ಪಂಚರೂಪಾತ್ಮಕ
ಮುಂಚಿಗೆ ಪ್ರಾಣ ವಿರಿಂಚಿ ಕಾಣಮ್ಮ  ||                         (೧)
 
ಮಂದಹಾಸ ಮುಖ ಕುಂದ ಕಟ್ಮಲರದ
ದಿಂದ ಶೊಭಿಪನ್ಯಾರೆ ಪೇಳಮ್ಮಯ್ಯ |
ವಂದಿಪ ಜನರಘ ವೃಂದ ಕಳೆದು ಆ
ನಂದವ ನೀಡುವನ್ಯಾರೆ ಪೇಳಮ್ಮಯ್ಯ |
ಬೃಂದಾರಕ ಪ್ರತಿ ಸುಂದರ ಯತಿವರ
ರಿಂದ ಪೂಜಿತನ್ಯಾರೆ ಪೇಳಮ್ಮಯ್ಯ |
ಇಂದು ಮುಖಿಯ ಈತ ಗಂಧವಾಹನನಾಗಿ
ಮಂದಜಾಸನ ಪದ ವೈದುವ ನಮ್ಮ  ||                          (೨)
 
ಖ್ಯಾತಮಹಿಮ ಮಾಯಿವ್ರಾತ ವಿ
ಘಾತನ ಮಾಡಿಹನ್ಯಾರೆ ಪೇಳಮ್ಮಯ್ಯ |
ಆತುರಜನರಿಗೆ ಮಾತಾಪಿತರಂತೆ 
ನೀತಪಾಲಿಸುವನ್ಯಾರೆ ಪೇಳಮ್ಮಯ್ಯ |
ದಾತ ಗುರು ಜಗನ್ನಥ ವಿಠಲನ
ಪ್ರೀತಿಯ ಪಡೆದಿಹನ್ಯಾರೆ ಪೇಳಮ್ಮಯ್ಯ |
ವೀತಭಯ ಪುರುಹೂತ ಪ್ರಮುಖ ನುತ
ಭೂತನಾಥನ ಪಿತ ಮಾತರಿಶ್ವ ನಮ್ಮ ||                         (೩)
Advertisements

vadirajaru

A few important dates in March.

March 23rd – Holi – Holi Hunnime

March 24th and March 25th – Brindavana prathistapana at Kamadhenu Kshethra

March 26th – Shree Vadiraja Thirthara Aaradhane – Sode

March 27th – Shree Vyasa Raja Thirthara Aaradhane – Nava Brindavana